ಗಲ್ಫ್

ದುಬಾಯಿಯಲ್ಲಿ ಧ್ವನಿ ಪ್ರತಿಷ್ಠಾನ ಆಶ್ರಯದಲ್ಲಿ ಯಶಸ್ವಿ ಪ್ರದರ್ಶನ ಕಂಡ “ಸಪ್ನ ವಾಸವದತ್ತೆ” ರಂಗ ನಾಟಕ; ನಟಿ ಗಿರಿಜಾ ಲೋಕೇಶ್-ಗಣೇಶ್ ರೈಗೆ ಪ್ರಶಸ್ತಿ ಪ್ರಧಾನ 

Pinterest LinkedIn Tumblr

Photo: Ashok Belman

ಮಾಸ್ಟ್ರೊ ಇವೆಂಟ್ಸ್ ಎಲ್.ಎಲ್.ಸಿ. ಅರ್ಪಿಸಿರುವ ಸಪ್ನ ವಾಸವದತ್ತೆ ರಂಗ ನಾಟಕ ಧ್ವನಿ ಪ್ರತಿಷ್ಠಾನ 32ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದುಬಾಯಿ ಎಮಿರೆಟ್ಸ್ ಇಂಟರ್ನ್ಯಾಶನಲ್ ಸ್ಕೂಲ್ ಥಿಯೆಟರ್ ನಲ್ಲಿ 19 ಜನವರಿ 2018 ಶುಕ್ರವಾರ ಸಂಜೆ 6.00 ಗಂಟೆಯಿಂದ ಸಬಾಂಗಣದಲ್ಲಿ ಕಿಕ್ಕಿರಿದ ರಂಗ ನಾಟಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿ ಪ್ರದರ್ಶನವಾಯಿತು.

ಮಹಾಕವಿ ಬಾಷ ವಿರಚಿತ ಸಂಸ್ಕೃತ ಮೂಲನಾಟಕ ಕನ್ನಡಕ್ಕೆ ಡಾ. ಕೀರ್ತಿನಾಥ ಕುರ್ತುಕೋಟಿ ಭಾಷಾಂತರದ “ಸಪ್ನಾ ವಾಸವದತ್ತೆ” ನಾಟಕ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರ ನಿರ್ದೇಶನದಲ್ಲಿ ಸ್ಥಳಿಯ ಹವ್ಯಾಸಿ ಕಲಾವಿದರು ತಮ್ಮ ಅಮೋಘ ಅಭಿನಯದಲ್ಲಿ ಅರಬ್ ಸಂಯುಕ್ತ ಸಂಸ್ಥಾನದ ನಾಟಕ ಅಭಿಮಾನಿ ವೀಕ್ಷಿಸುವ ಸುವರ್ಣ ಅವಕಾಶ ದೊರಕಿತ್ತು.

ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟನೆ

32ನೇ ವಾರ್ಷಿಕೋತ್ಸವ ಸಮಾರಂಭ, ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನದ ಉದ್ಘಾಟನೆಯನ್ನು ಜ್ಯೋತಿಬೆಳಗಿಸುವುದರ ಮೂಲಕ ನೆರವೇರಿಸಲಾಯಿತು. ಕನ್ನಡ ರಂಗಭೂಮಿ ಕಲಾವಿದೆ, ಚಲನ ಚಿತ್ರತಾರೆ ಶ್ರೀಮತಿ ಗಿರಿಜಾ ಲೋಕೇಶ್ ರವರು ಮುಖ್ಯ ಅತಿಥಿಯಾಗಿ ಬೆಂಗಳೂರಿನಿಂದ ಆಗಮಿಸಿದ್ದರು. ಇನ್ನಿತರ ಅತಿಥಿಗಳಾದ ಶ್ರೀಯುತರುಗಳಾದ ACME ಬಿಲ್ಡಿಂಗ್ ಮೆಟೀರಿಯಲ್ಸ್,ನ ಆಡಳಿತ ನಿರ್ದೇಶಕ, ಕನ್ನಡ ಸಿನೆಮಾ ನಿರ್ಮಾಪಕ ಹರೀಶ್ ಶೇರಿಗಾರ್, ಲೇಖಕ ಬಿ. ಕೆ. ಗಣೇಶ್ ರೈ,  ಉದ್ಯಮಿಗಳಾದ ಜೋಸೆಪ್ ಮಥಿಯಸ್, ರಾಮಚಂದ್ರ ಹೆಗ್ಡೆ ಭಾಗಿಗಳಾಗಿದ್ದರು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಕಾಶ್ ರಾವ್ ಪಯ್ಯಾರ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

“ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ಶ್ರೀಮತಿ ಗಿರಿಜಾ ಲೋಕೇಶ್ ರವರಿಗೆ ಪ್ರದಾನ

 

ಕನ್ನಡ ರಂಗಭೂಮಿ, ಚಲನ ಚಿತ್ರ ರಂಗದಲ್ಲಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದೆ ಶ್ರೀಮತಿ ಗಿರಿಜಾ ಲೋಕೇಶ್ ರವರಿಗೆ ಈ ಬಾರಿಯ ಪ್ರತಿಷ್ಠಿತ “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ಪ್ರದಾನಿಸಲಾಯಿತು.

“ಧ್ವನಿ ಪುರಸ್ಕಾರ” ಅಂತರಾಷ್ಟ್ರೀಯ ಪ್ರಶಸ್ತಿ ಶ್ರೀ ಗಣೇಶ್ ರೈಯವರಿಗೆ ಪ್ರದಾನ

“ಧ್ವನಿ ಪುರಸ್ಕಾರ ಅಂತರಾಷ್ಟ್ರೀಯ ಪ್ರಶಸ್ತಿ – 2018” ಪ್ರಶಸ್ತಿಯನ್ನು ಯು.ಎ.ಇ. ಯಲ್ಲಿ ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಕಲೆ ಸಂಸ್ಕೃತಿ, ಸಮಾಜ ಸೇವೆಗಾಗಿ ಹಾಗೂ ದುಬಾಯಿಯಲ್ಲಿ ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ವೈಧ್ಯಮಯ ಕಾರ್ಯಕ್ರಮದಲ್ಲಿ ಅಹ್ವಾನ ಪತ್ರಗಳು, ಸನ್ಮಾನ ಪತ್ರಗಳು, ವೇದಿಕೆಯ ಚಿತ್ರಪಟ, ರಂಗ ಸಜ್ಜಿಕೆಗಳು, ಮಾಧ್ಯಮಗಳಲ್ಲಿ ಲೇಖನಗಳ ಮೂಲಕ ಸೇವೆ ಸಲ್ಲಿಸಿರುವ ಶ್ರೀ ಬಿ.ಕೆ. ಗಣೇಶ್ ರೈಯವರಿಗೆ 2018 ನೇ ಸಾಲಿನ “ಧ್ವನಿ ಪುರಸ್ಕಾರ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.

ಪ್ರಾಯೋಜಕರಿಗೆ ಮತ್ತು ಮಾಧ್ಯಮದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರೇಕ್ಷಕರ ಮನಗೆದ್ದ “ಸಪ್ನ ವಾಸವದತ್ತೆ”

ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರದರ್ಶವಾಗಿರುವ ಎಲ್ಲಾ ನಾಟಕಗಳಲ್ಲಿ ಪಾತ್ರವಹಿಸಿರುವ ಹವ್ಯಾಸಿ ಕಲಾವಿದರು ಮತ್ತು ಪ್ರಥಮ ಬಾರಿಗೆ ಅಭಿನಯಿಸಿರುವ ಪಾತ್ರಧಾರಿಗಳ ಅದ್ಭುತ ಅಭಿನಯದ ಮೂಲಕ ಸಭಾಂಗಣದಲ್ಲಿ ಭರ್ತಿಯಾಗಿದ್ದ ಎಲ್ಲಾಅ ಪ್ರೇಕ್ಷಕರ ಮನಗೆದ್ದು ನಾಟಕ ಪ್ರದರ್ಶನ ದಾಖಲೆಯನ್ನು ನಿರ್ಮಿಸಿದೆ.

ಪಾತ್ರಧಾರಿಗಳಾಗಿ ವಿದುಷಿ ಸಪ್ನಾ ಕಿರಣ್, ಪ್ರಭಾಕರ್ ಕಾಮತ್, ಆರತಿ ಆಡಿಗ, ವಾಸು ಬಾಯರ್, ಗುರುರಾಜ್ ಪುತ್ತೂರು, ಅಶೋಕ್ ಅಂಚನ್, ಶೇತಾ ನಾಡಿಗ್ ಶರ್ಮ, ಸತೀಶ್ ಹೆಗ್ಡೆ, ಸಂತೋಷ್ ಪೂಜಾರಿ, ಜಾನೆಟ್ ಸಿಕ್ವೆರಾ, ಶೋಭಿತಾ ಪ್ರೇಂಜೀತ್, ಶ್ರೀಲೇಖಾ ಅನಂತ್, ನಾಗಭೂಷಣ್ ಕಶ್ಯಪ್, ಸಂಧ್ಯಾ ರವಿ ಕುಮಾರ್, ಪದ್ಮರಾಜ್ ಎಕ್ಕಾರ್, ಜಯಂತ್ ಶೆಟ್ಟಿ, ಸಂದೀಪ್ ದೇವಾಡಿಗ, ಜೇಶ್ ಬಾಯರ್, ವಿನಾಯಕ್ ಹೆಗ್ಡೆ, ದೀಪಾ ಮಾರಿಯಾ, ಸಂದ್ಯಾ ರವಿ ಕುಮಾರ್, ಗಾಯನದಲ್ಲಿ ಉದಯ ನಂಜಪ್ಪ ಮತ್ತು ಸಾಯಿ ಮಲ್ಲಿಕಾ, ತಬಲಾ ಸಾಥ್ ರಾಜೇಶ್ ಕುತ್ತಾರ್, ಸಹಕಾರದಲ್ಲಿ ವಿಷ್ಣು ಅಡಿಗ, ರಾಕೇಶ್ ಶರ್ಮಾ, ಸ್ಮಿತಾ ಕಾಮತ್.

ನೃತ್ಯದಲ್ಲಿ ವಿನಾಯಕ್ ಹೆಗ್ಡೆ, ದೆಪಾ ಮರಿಯಾ, ಅನುಷಾ ಉರ್ವಾ,

ಪರದೆಯ ಹಿಂದೆ ಬಿ. ಕೆ. ಗಣೇಶ್ ರೈ, ಅಶೋಕ್ ಬೈಲೂರ್, ಅರುಣ್ ಕುಮಾರ್, ಚಂದ್ರಿಕಾ ವಾಮನ್ ಪೂಜಾರಿ ಹಾಗೂ ಇನ್ನಿತರರು.

ಕಾರ್ಯಕ್ರಮ ನಿರೂಪಣೆ ಶ್ರೀಮತಿ ರಜನಿ ಭಟ್, ಭಾಗ್ಯ ಸದನ್ ದಾಸ್, ಶ್ರೀಲತಾ ಹೆಗ್ಡೆ ಸಹಕರಿಸಿದ್ದರು.

Comments are closed.