ಗಲ್ಫ್

ಯಶಸ್ವಿಯಾಗಿ ನೆರವೇರಿದ ಕೆ ಸಿ ಎಫ್ ದುಬೈ ನಾರ್ತ್ ಝೋನ್ “ ಮೆಹಫಿಲೇ ಮುಸ್ತಫಾ ” ಮೀಲಾದ್ ಸಮಾವೇಶ

Pinterest LinkedIn Tumblr

ಕರ್ನಾಟಕ ಕಲ್ಚರಲ್ ಫೌಂಡೇಶನ್ ನಾರ್ತ್ ಝೋನ್ ವತಿಯಿಂದ ಬ್ರಹತ್ ಮೀಲಾದ್ ಸಮಾವೇಶ ಪರ್ಲ್ ಕ್ರೀಕ್ ಹೋಟೆಲ್ ದೇರಾ ದುಬೈ ನಲ್ಲಿ ಅದ್ದೂರಿಯಾಗಿ ನಡೆಯಿತು , ಸಂಜೆ 6 ಗಂಟೆಗೆ ವಿಶೇಷ ತರಬೇತಿ ಪಡೆದ ಬುರ್ದಾ ತಂಡ ದಿಂದ ಸೇರಿದ ಪ್ರವಾದಿ ಅನುಯಾಯಿ ಗಳನ್ನೂ ರೋಮಾಂಚಗೊಳಿಸುವ ಬುರ್ದಾ ಆಲಾಪನೆಯು ನಡೆಯಿತ್ತು .

ನಂತರ ಗೌರ್ವಾನಿತಉಸ್ತಾದ್ ಗಳ ನೇತೃತ್ವದಲ್ಲಿ ಭಕ್ತಿ ನಿರ್ಭಲವಾದ ಮೌಲೀದ್ ಪಾರಾಯಣ ನಡೆಯಿತ್ತು . ಸಹಿಷ್ಣತೆಯ ಸಂದೇಶ ವಾಹಕ ಎಂಬ ಘೋಷ ವಾಕ್ಯದೊಂದಿಗೆ ಮೆಹಫಿಲೇ ಮುಸ್ತಫಾ ಎಂಬಹೆಸರಿನಡಿ ಬ್ರಹತ್ ಮೀಲಾದ್ ಸಮಾವೇಶ ದ ಸಭಾಕಾರ್ಯಕ್ರಮ ನಡೆಯಿತ್ತು ಪ್ರಸ್ತುತ ಸಮಾವೇಶವನ್ನು ಕರ್ನಾಟಕ ರಾಜ್ಯದ ಸುನ್ನತ್ ಜಮಾಹತಿನ ಆವೇಶ ಕಾರ್ಯಕರ್ತರ ಪ್ರೀತಿಯ ಸಂಘಕುಟುಂಬದ ಜೀವಾಳು ಇತ್ತೀಚಿಗೆ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ವೆಂಬ ಮಹಾ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಆಯ್ಕೆ ಗೊಂಡ ಮೌಲಾನಾ ಜಿ ಎಂ ಕಾಮಿಲ್ ಸಖಾಫಿಉದ್ಘಾಟನೆ ನೆರವೇರಿಸಿ ಪುಣ್ಯ ಪ್ರವಾದಿ ಸಲ್ಲಾಲಾವು ವಸಲ್ಲಮರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಕೊಂಡಾಡುವಾಗ ಆ ಪ್ರವಾದಿ ಯಾ ಸಂದೇಶ ಗಳನ್ನೂ ಮೈಗೂಡಿಸಿ ಜೀವನನಡೆಸಿ ನಿಜವಾದ ಪ್ರವಾದಿ ಪ್ರೇಮಿ ಆಗಬೇಕೆಂದು ಕರೆನೀಡಿದರು .

ಮುಖ್ಯ ಭಾಷಗಾರರಾಗಿ ಆಗಮಿಸಿದ ದಾರುಲ್ ಅಶರೀಯ ಸುರಬೈಲ್ ವಿದ್ಯಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ದಕ್ಷಿಣ ಜಿಲ್ಲಾ ಸುನ್ನಿ ಯುವಜನ ಸಂಘ ದ ನಾಯಕರು ಖ್ಯಾತ ವಾಗ್ಮಿಯಾದಬಹು : ಮುಹಮ್ಮದಾಲೀ ಸಖಾಫಿ ಸುರಬೈಲ್ ಭಾಷಣ ಮಾಡುತ್ತಾ ಮುಸ್ಲಿಂ ಲೋಕದ ಪರಮೋಚ್ಚ ನಾಯಕ 1400 ವರ್ಷಗಳ ಹಿಂದೆ ಅರೇಬಿಯನ್ ನಾಡಿನಲ್ಲಿ ಅಂತಿಮ ಪ್ರವಾದಿ ಯಾಗಿಜನಿಸಿದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅಲ್ ಅಮೀನ್ ಎಂದು ಕರೆಯಲ್ಪಟ್ಟು 63 ವರ್ಷಗಳ ಮಾದರಿ ಯೋಗ್ಯ ಜೀವನ ನಡೆಸಿ ಪರಿಶುದ್ಧ ಇಸ್ಲಾಂ ಧರ್ಮವನ್ನು ಜಗತ್ತಿನ ಎಲ್ಲ ಕಡೆ ಹರಡುವಂತೆ ಮಾಡಿ ಶಾಂತಿಯ ಸಂದೇಶವನ್ನು ಸಾರಿದ ಪ್ರವಾದಿ ಸಲ್ಲಾಲಾವು ವಸಲ್ಲಮರ ಜೀವನ ಸಂದೇಶವನ್ನು ಸೇರಿದ ಜನ ಸಮೂಹ ರೋಮಾಂಚನ ಗೊಳ್ಳುವಂತೆ ವಿಷಯ ಮಂಡಿಸಿದರು .

ನಂತರ ಪ್ರಸ್ತುತ ಕಾರ್ಯಕ್ರಮದ ಕೇಂದ್ರ ಬಿಂದು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ವರ್ಯರು ಸಮುದಾಯದ ಆದ್ಯಾತ್ಮಿಕ ಗುರುಗಳು ಆದ ಅಸ್ಸಯ್ಯದುನ ಫಝಲ್ ಕೊಯ್ಯಮ್ಮ ಕೂರತ್ ತಂಗಳ್ ರವರ ಭಕ್ತಿ ನಿರ್ಭಲ ವಾದ ದುವಾ ನಡೆಯಿತು ಹಾಗು ಸೇರಿದ ಜನಸಮೂಹಕ್ಕೆ ಅರ್ಥ ಗರ್ಭಿತವಾದ ಮಾತುಗಳಿದ ಉಪದೇಶ ನೀಡಿದರು . ಹಾಗು ಇದೆ ಸಂದರ್ಭದಲ್ಲಿ ಇಸ್ಲಾಮಿಕ್ ಪಠಣ ತರಗತಿಯಾದ ಅಸ್ಸುಫಾ ಪರೀಕ್ಷೆಯಲ್ಲಿ ವಿಜೇತರಾದ ಪ್ರಥಮ , ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದ ಹಾಗು ಮೀಲಾದ್ ಸಮಾವೇಶ ಪ್ರಯುಕ್ತ ನವಂಬರ್ 30 ರಂದು ನಡೆದ ಪ್ರತಿಭೋತ್ಸವ ದಲ್ಲಿ ಕ್ರಮವಾಗಿ A ,B , C ಕೆಟಗರಿ ಗಳಲ್ಲಿ ಚಾಂಪಿಯನ್ ಹಾಗಿ ಆಯ್ಕೆ ಯಾದವರಿಗೆ ಸಯ್ಯದ್ ಕೂರತ್ ತಂಗಳ್ ರವರ ದಿವ್ಯ ಹಸ್ತದಿಂದ ಬಹುಮಾನ ವಿತರಿಸಿದರು .

ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಉದ್ಯಮಿ ಇಕ್ಬಾಲ್ ಅಜ್ಮಾನ್ , ನಾರ್ತ್ ಝೋನ್ ಅಧ್ಯಕ್ಷರಾದ ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತೆಮೊಗೆರು , ಕೆ ಸಿ ಎಫ್ ಯು ಎ ಇ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಕಾಜೂರ್ , ನಾರ್ತ್ ಝೋನ್ ಕೋಶಾಧಿಕಾರಿ ಅಬೂಬಕ್ಕರ್ ಕೊಟ್ಟಮುಡಿ , ಕೆ ಸಿ ಎಫ್ ನಾಯಕರಾದ ಉಸ್ಮಾನ್ ಹಾಜಿ ನಾಪೋಕ್ಲು , ಇಬ್ರಾಹಿಂ ಸಖಾಫಿ ಕೆದುಂಬಾಡಿ , ಖಾದರ್ ಸಾಲೆತ್ತೂರ್ , ಹಾಜಿ ನಝೀರ್ ಕೆಮ್ಮಾರ , ಇಬ್ರಾಹಿಂ ಫೈಝಿ ಮೊದಲಾದ ಗಣ್ಯರು ಉಪಸಿತರಿದ್ದರು.

ಸಭಾ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಹಾಜಿ ಅಶ್ರಫ್ ಅಡ್ಯಾರ್ ವಹಿಸಿದರು , ನಾರ್ತ್ ಝೋನ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಬಹು : ಅಬ್ದುಲ್ ಅಝೀಝ್ ಲತೀಫಿ ಕೆ ಸಿ ಎಫ್ ಹಮ್ಮಿಗೊಳ್ಳುತ್ತಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿ ಆಗಮಿಸಿದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು, ಕಾರ್ಯಕ್ರಮದ ಯಶಸ್ವಿಗಾಗಿ ಲತೀಫ್ ಪಾತೂರ್ , ರಫೀಕ್ ಸಂಪ್ಯ , ನಿಯಾಝ್ ಬಸರ, ಮಜೀದ್ ಮಂಜನಾಡಿ , ರಫೀಕ್ ಜೆಪ್ಪು , ರಹೀಮ್ ಕೊಡಿ , ಶಕೂರ್ ಮನಿಲಾ , ಇಸ್ಮಾಯಿಲ್ ಮದನಿನಗರ್ ರಿಫಾಯಿ ಗೂನಡ್ಕ , ಹಬೀಬ್ ಈಶ್ವರಮಂಗಿಲ , ಮೊದಲಾದವರು ಸಹಕರಿಸಿದರು . ಹಬೀಬ್ ಪುಣಚ ಹಾಗು ಅಬ್ದುಲ್ ರಝಕ್ ಬುಸ್ತಾನಿ ಛಾಯಾಗ್ರಾಹಕರಾಗಿ ಸಹಕರಿಸಿದರು

ಕಮಾಲ್ ಅಜ್ಜಾವರ ಹಾಗು ರಿಯಾಝ್ ಕೊಂಡೆಂಗೇರಿ ಕಾರ್ಯಕ್ರಮ ನಿರೂಪಿಸಿ ಹಾಜಿ ನವಾಝ್ ಕೋಟೆಕ್ಕಾರ್ ವಂದನಾರ್ಪಣೆಗೆಯ್ದರು .

Comments are closed.