ಗಲ್ಫ್

ಬಹರೈನಲ್ಲಿ ಇಂದು ಡಾ ಆರತಿ ಕೃಷ್ಣಾರೊಂದಿಗೆ ಸಂವಾದ

Pinterest LinkedIn Tumblr

ಬಹರೈನ್ ; ಭಾರತೀಯ ಅನಿವಾಸಿ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷರಾಗಿರುವ ಡಾ ಆರತಿ ಕೃಷ್ಣಾ ರವರು ವಿಶೇಷವಾಗಿ ದ್ವೀಪ ರಾಷ್ಟ್ರಕ್ಕೆ ಆಗಮಿಸುತ್ತಿದ್ದು ಇಲ್ಲಿನ ಅನಿವಾಸಿ ಕನ್ನಡಿಗರೊಂದಿಗೆ ಮುಕ್ತ ಸಂವಾದವೊಂದನ್ನು ಏರ್ಪಡಿಸಲಾಗಿದೆ . ಇದೆ ಡಿಸೆಂಬರ್ ತಿಂಗಳ 12 ನೇ ತಾರೀಖಿನ ಮಂಗಳವಾರದಂದು ಈ ಸಭೆಯನ್ನು ಇಲ್ಲಿನ ಜುಫೆರ್ ನಲ್ಲಿರುವ ಓಲಿವ್ ಹೋಟೆಲಿನ ನಾಲ್ಕನೇ ಅಂತಸ್ತಿನಲ್ಲಿರುವ ಸಭಾಂಗಣದಲ್ಲಿ ಸಂಜೆ 7 ಘಂಟೆಗೆ ಸರಿಯಾಗಿ ಕನ್ನಡ ಸಂಘ ಬಹರೈನ್ ಆಯೋಜಿಸಿದೆ .

ಈ ಸಭೆಯಲ್ಲಿ ಮುಖ್ಯವಾಗಿ ಅನಿವಾಸಿ ಕನ್ನಡಿಗರು ತಾಯ್ನಾಡಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತ ಸಂವಾದ ಜರುಗುವುದು ಮಾತ್ರವಲ್ಲದೆ ಅನಿವಾಸಿ ಭಾರತೀಯ ನೀತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗುವುದು . ದ್ವೀಪದ ಅನಿವಾಸಿ ಕನ್ನಡಿಗರೊಂದಿಗೆ ಸಮಾಲೋಚನೆ ನಡೆಸಿ ಅನಿವಾಸಿ ಕನ್ನಡಿಗರ ಹಿತ ರಕ್ಷಣಾ ಸಮಿತಿಯೊಂದನ್ನು ರಚಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು .ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿಯಿರುವ ಕನ್ನಡಿಗರಿಗೆ ಸರಕಾರ ನೀಡುವ ಸವಲತ್ತುಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಲಾಗುವುದು .

ಈ ಸಂವಾದ ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ಮನವಿ ಮಾಡಿದ್ದಾರೆ . ಇದರ ಹೆಚ್ಚಿನ ವಿವರಗಳಿಗೆ ಶ್ರೀ ಪ್ರದೀಪ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39147114 ಮುಖೇನ ಸಂಪರ್ಕಿಸಬಹುದು .

ವರದಿ – ಕಮಲಾಕ್ಷ ಅಮೀನ್

Comments are closed.