ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಸೋಮವಾರ ಸಂಜೆ ವಕ್ವಾಡಿಯ ವಿ.ಕೆ. ಮೋಹನ್ ಅವರ ನಿವಾಸಕ್ಕೆ ಆಗಮಿಸಿದ್ರು. ಉದ್ಯಮಿ ಯು.ಬಿ. ಶೆಟ್ಟಿ ಅವರ ಪುತ್ರಿಯ ಮದುವೆ ಸಮಾರಂಭದ ನಿಮಿತ್ತ ಕೋಟೇಶ್ವರಕ್ಕೆ ಆಗಮಿಸಿದ್ದ ವೇಳೆ ನಿರ್ಮಾಪಕ ಹಾಗೂ ಉದ್ಯಮಿ ವಿ.ಕೆ. ಮೋಹನ್ ಅವರ ಸಹೋದರಿ ನಿವಾಸ `ಸ್ಪೂರ್ತಿ’ಗೆ ಅನುಶ್ರೀ ಭೇಟಿ ನೀಡಿ ಆತೀಥ್ಯ ಸ್ವೀಕರಿಸಿದರು.

ಕುಂದಾಪುರ ಕನ್ನಡ, ತುಳು ಭಾಷೆ, ಮೀನಿನ ಖಾದ್ಯಗಳು ಸೇರಿದಂತೆ ಕರಾವಳಿಯ ಸೊಗಡಿನ ಬಗ್ಗೆ ಮಾತನಾಡಿದ ಅನುಶ್ರೀ ಈ ಹಿಂದೆಯೂ ತಾನೂ ಕುಂದಾಪುರಕ್ಕೆ ಬಂದಿದ್ದನ್ನು ಸ್ಮರಿಸಿದರು. ಈ ಸಂದರ್ಭ ವಿ.ಕೆ ಹರೀಶ್, ರೂಪಾ ಹರೀಶ್, ವಿ.ಕೆ. ಸತೀಶ್, ಸಾವಿತ್ರಿ, ಲಕ್ಷ್ಮೀ,ಹಾಗೂ ಕುಟುಂಬಸ್ಥರು ಇದ್ದರು.
Comments are closed.