ಗಲ್ಫ್

85 ಭಾಷೆಗಳ ಹಾಡನ್ನು ಹಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಲು ಮುಂದಾದ ಭಾರತೀಯ ಮೂಲದ ದುಬೈ ವಿದ್ಯಾರ್ಥಿನಿ ಸುಚೇತಾ ಸತೀಶ್

Pinterest LinkedIn Tumblr

ದುಬೈ: ಗಿನ್ನೆಸ್ ವರ್ಲ್ಡ್ ರೆಕಾರ್ಡ್​ನಲ್ಲಿ ಹೆಸರನ್ನು ಸೇರಿಸಲು ಭಾರತೀಯ ಮೂಲದ 12 ವರ್ಷದ ಸುಚೇತಾ ಸತೀಶ್ ಎಂಬ ಬಾಲಕಿ ಒಂದು ಸಂಗೀತ ಕಛೇರಿಯಲ್ಲಿ 85 ಭಾಷೆಗಳ ಹಾಡನ್ನು ಹಾಡಲು ಸಿದ್ಧತೆ ನಡೆಸಿದ್ದಾಳೆ.

ದುಬೈನ ದಿ ಇಂಡಿಯನ್ ಹೈಸ್ಕೂಲ್​ನಲ್ಲಿ 7ನೇ ತರಗತಿ ಅಭ್ಯಸಿಸುತ್ತಿರುವ ಕೇರಳ ಮೂಲದ ಸುಚೇತಾ ಈಗ 80 ಭಾಷೆಗಳಲ್ಲಿ ಹಾಡನ್ನು ಕಲಿತಿದ್ದಾಳೆ. ಇನ್ನೂ 5 ಭಾಷೆಗಳ ಹಾಡನ್ನು ಅಭ್ಯಸಿಸುತ್ತಿದ್ದಾಳೆ. 2008ರಲ್ಲಿ ಆಂಧ್ರಪ್ರದೇಶದ ಕೆಸಿರಾಜು ಶ್ರೀನಿವಾಸ್ 76 ಭಾಷೆಗಳಲ್ಲಿ ಹಾಡನ್ನು ಹಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಡಿಸೆಂಬರ್ 29ರಂದು ಸುಚೇತಾ ಸಂಗೀತ ಕಛೇರಿ ನೀಡಿ ಈ ದಾಖಲೆಯನ್ನು ಮುರಿಯುವ ಪ್ರಯತ್ನ ಮಾಡಲಿದ್ದಾಳೆ.

Comments are closed.