ಗಲ್ಫ್

ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದ ಶಾಂತಿ ಪ್ರಕಾಶನ ಸಂಸ್ಥೆಯ ಮಳಿಗೆಯಲ್ಲಿ ಸಮಾರೋಪ ಸಮಾರಂಭ

Pinterest LinkedIn Tumblr

ಶಾರ್ಜಾ: ಶನಿವಾರದಂದು ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳವು ಸಮಾಪ್ತಿಗೊಳ್ಳುವುದರೊಂದಿಗೆ ಇದರಲ್ಲಿನ ಕನ್ನಡದ ಏಕೈಕ ಮಳಿಗೆಯಾದ ಶಾಂತಿ ಪ್ರಕಾಶನ ಸಂಸ್ಥೆ ಮಂಗಳೂರು ಇವರು ತಮ್ಮ ಸಮಾರೋಪ ಸಮಾರಂಭವನ್ನು ಅನಿವಾಸಿಯರಾದ ಸರ್ವ ಕನ್ನಡಿಗರನ್ನು ಆಹ್ವಾನಿಸಿ ಬಹಳ ಆದ್ದೂರಿಯಿಂದ ಜರಗಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಪ್ರಕಾಶನಾಲಯದ ಅಧ್ಯಕ್ಷರಾದ ಎಮ್. ಅತರುಲ್ಲಾ ಷರೀಫ್ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಅನಿವಾಸಿ ಕನ್ನಡಿಗರ ಕೆ ಎನ್ ಆರ್ ಐ ಫಾರಂ ಇದರ ಅಧ್ಯಕ್ಷರಾದ ಮತ್ತು ಫ಼ೋರ್ಚುನ್ ಸಮೂಹ ಸ೦ಸ್ಥೆಗಳ ಮಾಲಕ ಹಾಗೂ ನಿರ್ದೇಶಕರಾಗಿರುವ ಪ್ರವೀಣ್ ಶೆಟ್ಟಿ, ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷರಾಗಿರುವ ಮತ್ತು ಶಾರ್ಜಾ ಅಂತಾರಾಷ್ತ್ರೀಯ ಪುಸ್ತಕ ಮೇಳದಲ್ಲಿನ ಶಾಂತಿ ಪ್ರಕಾಶನದ ಕಾರ್ಯಕ್ರಮಗಳ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಬ್ಯಾರಿ ವೆಲ್ಫೇರ್ ಫಾರಂ ಅಬುಧಾಬಿ ಇದರ ಅಧ್ಯಕ್ಷರಾದ ಮತ್ತು ಶಾಂತಿ ಪ್ರಕಾಶನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿರುವ ಮಹಮದ್ ಅಲಿ ಉಚ್ಚಿಲ್, ಕನ್ನಡ ಸಂಘ ಅಬುಧಾಬಿ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಸಾಹಿತಿ ಮನೋಹರ್ ತೋನ್ಸೆ, ಬ್ಯಾರಿ ವೆಲ್ಫೇರ್ ಫಾರಂ ಅಬುಧಾಬಿ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ಲಾ ಮದುಮೂಲೆ, ಶಾರ್ಜಾ ಕನ್ನಡದ ಜೇಮ್ಸ್ ಮೆಂಡೋನ್ಸ, ಬಸವ ಸಮಿತಿಯ ಮುರುಗೇಶ್ ಗಜಾರೆ, ಇಂಡಿಯನ್ ಸೋಶಿಯಲ್ ಸೆ೦ಟರ್ ಶಾರ್ಜಾ ಇದರ ಅಧ್ಯಕ್ಷರಾದ ವೈ. ಎ. ರಹೀಮ್, ಗಮ್ಮತ್ ಕಲಾವಿದರು ದುಬೈ ಇದರ ವಾಸು ಶೆಟ್ಟಿ, ಶಾರ್ಜಾ ಕನ್ನಡದ ಸದನ್ ದಾಸ್ ಮತ್ತು ಮಂಜುನಾಥ್ ರವರು ಆಗಮಿಸಿದ್ದರು.

ಅತಿಥಿ ಗಣ್ಯರೆಲ್ಲರೂ ಜಗತ್ತಿನ ಎರಡನೇ ಮಹಾದೊಡ್ದ ಎನ್ನಲಾಗುವ ಶಾರ್ಜಾ ಪುಸ್ತಕೋತ್ಸವದಲ್ಲಿ ಕನ್ನಡ ಭಾಷೆಯ ಸಾಹಿತ್ಯಗಳಿಗೆ ಸ್ಥಾನವನ್ನು ಗಿಟ್ಟಿಸಿದ ಶಾಂತಿಯ ಶ್ರಮಕ್ಕಾಗಿ ಅಭಿನಂದಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಆರ೦ಭದಲ್ಲಿ ಇಬ್ರಾಹೀಮ್ ಸಈದ್ ವಿಟ್ಲ ರವರು ಕಿರಾಅತ್ (ಖುರ್ ಆನ್ ಪಾರಯಣ) ಮಾಡಿ ಅದರ ಕನ್ನಡಾನುವಾದವನ್ನು ವಾಚಿಸಿದರು.

ನಂತರ ಅಬ್ದುಲ್ ಸಲಾಮ್ ಯು ರವರು ಶಾಂತಿ ಪ್ರಕಾಶನದ ಕಿರು ಪರಿಚಯವನ್ನು ನೀಡುವುದರೊಂದಿಗೆ ಅತಿಥಿಗಳೆಲ್ಲರನ್ನು ಸ್ವಾಗತಿಸಿದರು. ಅತಿಥಿಗಳ ಭಾಷಣಕ್ಕೆ ಮುಂಚಿತವಾಗಿ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಜನಾಬ್ ಮಹಮದ್ ಕುಂಹಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಂತಿ ಸಾಹಿತ್ಯ ಸ೦ಸ್ಥೆಯ ಅಧ್ಯಕ್ಷರಾದ ಎಮ್. ಅತರುಲ್ಲಾ ಷರೀಫ್ ಅವರು ಅಧ್ಯಕ್ಷೀಯ ಭಾಷಣವನ್ನು ನೀಡಿದರು. ಕಾರ್ಯಕ್ರಮ ವನ್ನು ನಿರೂಪಿಸಿದ ಅಬ್ದುಲ್‌ ಖಾದರ್ ಕುಕ್ಕಾಜೆ ಕೊನೆಯಲ್ಲಿ ಧನ್ಯವಾದವಿತ್ತರು.

Comments are closed.