ಗಲ್ಫ್

ಕಳೆದ ನಾಲ್ಕು ತಿಂಗಳಲ್ಲಿ ವೀಸಾ ನಿಯಮ ಉಲ್ಲಂಘಿಸಿದ 39,000 ಪಾಕಿಸ್ತಾನ ಪ್ರಜೆಗಳನ್ನು ಗಡಿಪಾರು ಮಾಡಿದ ಸೌದಿ

Pinterest LinkedIn Tumblr

 

ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ 39 ಸಾವಿರ ಪಾಕಿಸ್ತಾನ ಪ್ರಜೆಗಳನ್ನು ಸೌದಿ ಆರೇಬಿಯಾದ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ.

ವೀಸಾ ನಿಯಮ ಉಲ್ಲಂಘಿಸಿ ದೇಶದಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿರುವ ಸೌದಿ ಆರೇಬಿಯಾದ ಅಧಿಕಾರಿಗಳು, ಕಳೆದ ನಾಲ್ಕು ತಿಂಗಳಲ್ಲಿ 39,000 ಪಾಕ್ ಪ್ರಜೆಗಳನ್ನು ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ಕೆಲವರು ಉಗ್ರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಬಗ್ಗೆ ಸಹಾನುಭೂತಿ ಹೊಂದಿರುವ ಸಾಧ್ಯತೆಯಿದ್ದು, ಅವರ ದಾಖಲೆ ಪರಿಶೀಲಿಸುವಂತೆ ಭದ್ರತಾ ಅಧಿಕಾರಿಗಳು ಆದೇಶಿಸಿದ್ದಾರೆಂದು ತಿಳಿದುಬಂದಿದೆ.

ಸಮಾಜಕ್ಕೆ ಭೀತಿಯೊಡ್ಡುವ ಇಸ್ಲಾಮಿಕ್ ಸ್ಟೇಟ್ ಉಗ್ರ ಕೃತ್ಯಗಳಲ್ಲಿ ಪಾಕಿಸ್ತಾನದ ಬಹುತೇಕ ಪ್ರಜೆಗಳು ಭಾಗಿಯಾಗಿದ್ದಾರೆ. ಅಲ್ಲದೆ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ಕಳ್ಳತನ, ನಕಲು ಮತ್ತು ಹಲ್ಲೆಯಂತಹ ಪ್ರಕರಣಗಳಲ್ಲೂ ಪಾಕಿಸ್ತಾನಿಗಳು ಪಾಲುದಾರರು ಎಂದು ಅರೇಬಿಯಾ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಸೇರಿದಂತೆ 5 ದೇಶಗಳ ನಾಗರೀಕರಿಗೆ ಸೌದಿ ಅರೇಬಿಯಾ ವೀಸಾ ನೀಡುವುದಿಲ್ಲ ಎಂದು ಪ್ರಕಟಿಸಿತ್ತು.

Comments are closed.