ಗಲ್ಫ್

ದುಬೈಯ ‘ಬುರ್ಜ್ ಅಲ್ ಅರಬ್ ಟೆರೇಸ್’ನಲ್ಲಿ ನಡೆಯಿತೊಂದು ಕಂಡು ಕೇಳರಿಯದ ಮದುವೆ ! ವಿವಾಹ ಬಂಧನಕ್ಕೊಳಗಾದ ಭಾರತೀಯ ಮೂಲದ ಜೋಡಿ

Pinterest LinkedIn Tumblr

1

ದುಬೈ: ನಾವು ಕನಸಿನಲ್ಲಿಯೂ ಕಾಣದಂಥ ಮದುವೆಯೊಂದು ದುಬೈಯಲ್ಲಿ ನಡೆದಿದೆ. ವಿಶ್ವದ ಅತ್ಯಂತ ಐಷಾರಾಮಿ ಹೋಟೆಲ್ ‘ಬುರ್ಜ್ ಅಲ್ ಅರಬ್ ಟೆರೇಸ್’ನಲ್ಲಿ ಈ ಮದುವೆ ನಡೆದಿದ್ದು, ಭಾರತ ಮೂಲದ ಜೋಡಿಯೊಂದು ಇಲ್ಲಿ ಮೊದಲ ಬಾರಿ ವಿವಾಹ ಸಮಾರಂಭ ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

3

4

ಭಾರತ ಮೂಲದ ವಿವೇಕ್ ಭಾಟಿಯಾ ಹಾಗು ಶ್ರುತಿ ತಮ್ಮ ವಿವಾಹ ಸಮಾರಂಭವನ್ನು ಅತ್ಯಂತ ಐಷಾರಾಮಿ ಹೋಟೆಲ್ ‘ಬುರ್ಜ್ ಅಲ್ ಅರಬ್ ಟೆರೇಸ್’ನಲ್ಲಿ ಆಯೋಜಿಸುವ ಮೂಲಕ ಎಲ್ಲರನ್ನು ನಿಬ್ಬೆರಗುಗೊಳಿಸಿದ್ದಾರೆ. ಸಮುದ್ರದ ಮಧ್ಯೆ ಇರುವ ಈ ಹೋಟೆಲ್ನಲ್ಲಿ ವಿವಾಹ ಸಮಾರಂಭ ನಡೆಸುದು ಅಂತಿಂಥ ಮಾತಲ್ಲ. ಅದು ಅಲ್ಲದೆ ಬುರ್ಜ್ ಅಲ್ ಅರಬ್ ಹೋಟೆಲ್ ಕಳೆದ ವರ್ಷದಿಂದ ವಿಶ್ವದಲ್ಲಿ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುದಕ್ಕಾಗಿ ಪ್ರತಿಷ್ಠಾಪಿಸಲಾಗಿರುವ  10,000 ಚದರ ಮೀಟರ್ ಗಳ  ಅತ್ಯಂತ ವಿಲಾಸಿ ಟೆರೇಸ್’ನಲ್ಲಿ ಮದುವೆ ಸಮಾರಂಭ ನಡೆದಿದೆ. ಸಮಾರಂಭದ ವೇಳೆ ಸಿಡಿಮದ್ದು ಪ್ರದರ್ಶನ ಹಾಗು ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

5

2

ಆಕರ್ಷಕ ಹೋಟೆಲ್ ಬುರ್ಜ್ ಅಲ್ ಅರಬ್ ಇವತ್ತಿಗೂ ದುಬೈ ಪ್ರವಾಸಿಗರ ಪಾಲಿನ ಆಕರ್ಷಣೆಯ ಕೇಂದ್ರ. ಈಗ ಇದರ ಹೋಟೆಲ್ ನಲ್ಲಿ ತಂಗದವರಿಗೂ ಹೋಟೆಲ್ ನ ತುದಿಯಲ್ಲಿರುವ ಟೆರೇಸ್ ಗೆ ಪ್ರವೇಶ ಕಲ್ಪಿಸಲಾಗಿದೆ. ಇದು ಅಂತಿಂತಹ ಟೆರೇಸ್ ಅಲ್ಲ. ಫಿನ್ ಲ್ಯಾನ್ಡ್ ನಲ್ಲೆ ನಿರ್ಮಿಸಿ ಸಮುದ್ರ ಮಾರ್ಗದಲ್ಲಿ ತಂದು ಬುರ್ಜ್ ಅಲ್ ಅರಬ್ ಮೇಲೆ ಪ್ರತಿಷ್ಠಾಪಿಸಲಾಗಿರುವ  10,000 ಚದರ ಮೀಟರ್ ಗಳ  ಅತ್ಯಂತ ವಿಲಾಸಿ ಟೆರೇಸ್ ಇದು. ಈ ವಿಶಾಲ ಟೆರೇಸ್ ಹೋಟೆಲ್ ಕಟ್ಟಡದಿಂದ 100 ಮೀಟರ್ ಹೊರಚಾಚಿ ಸಮುದ್ರದಲ್ಲೇ ಇರುವ ರೋಮಾಂಚನಕಾರಿ ಅನುಭವ ನೀಡುತ್ತದೆ.  ಇದರಲ್ಲಿ ರೆಸ್ಟೋರೆಂಟ್ , ಪೂಲ್, ಬೀಚ್ ಹಾಗು ಕಬಾನ ( ಕ್ಯಾಬಿನ್ ಕೋಣೆ ), ಸನ್ ಬೆಡ್ ಇತ್ಯಾದಿ ಆಕರ್ಷಕ ಸೌಲಭ್ಯಗಳಿವೆ.

6

7

8

ಆದರೆ ಈ ಪ್ರವೇಶಕ್ಕೆ ನೀವು ಖರ್ಚು ಮಾಡಬೇಕಾಗುತ್ತದೆ. ವಾರದ ದಿನಗಳಲ್ಲಿ 1,800 ದಿರ್ಹಮ್ ಹಾಗು ವಾರಾಂತ್ಯದಲ್ಲಿ  2,200 ದಿರ್ಹಮ್  ಇದರ ಪ್ರವೇಶ ದರ. ಇಡೀ ದಿನಕ್ಕೆ ಕೋಣೆಯನ್ನು ಬಾಡಿಗೆಗೆ ಪಡೆಯಬಹುದು. ಈ ಕೋಣೆಯಲ್ಲಿ ತಾಜಾ ಹಣ್ಣುಗಳು , ಕಾಫಿ , ಭೋಜನ ವ್ಯವಸ್ಥೆ ಹಾಗು ಸ್ಪಾ ಸೌಲಭ್ಯಗಳು ಇವೆ. ಕಳೆದ ವರ್ಷ ಮೇ ತಿಂಗಳಲ್ಲಿ ದುಬೈ ಆಡಳಿತಗಾರ ಶೇಕ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರು ಉದ್ಘಾಟಿಸಿದ್ದು, ಸೆಪ್ಟೆಂಬರ್ ನಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಅವಕಾಶ ನೀಡಲಾಗಿತ್ತು. ಇದೇ ಮೊದಲ ಬಾರಿಗೆ ಈ ಟೆರೇಸ್ನಲ್ಲಿ ವಿವಾಹ ಸಮಾರಂಭ ನಡೆದಿದ್ದು, ಭಾರತ ಮೂಲದ ವಿವೇಕ್ ಭಾಟಿಯಾ ಹಾಗು ಶ್ರುತಿ ವಿವಾಹ ಬಂಧನಕ್ಕೊಳಗಾಗಿದ್ದಾರೆ.

Comments are closed.