ಗಲ್ಫ್

ಕೆ ಐ ಸಿ ನಖೀಲ್ ಘಟಕ ಸಾರಥಿಗಳಾಗಿ ಝಕರಿಯಾ ಮುಲಾರ್ ಹಾಗೂ ಇಸಾಕ್ ಸಾಲೆತ್ತೂರ್

Pinterest LinkedIn Tumblr

15337482_1210928898977879_698683631205776696_n

ಕೆ ಐ ಸಿ ದುಬೈ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನಖೀಲ್ ಘಟಕ ನವೀಕರಣ, ಮೌಲೂದ್ ಪಾರಾಯಣ ಹಾಗು ತಹಲೀಲ್ ಸಮರ್ಪಣೆ ಕಾರ್ಯಕ್ರಮವು ನೂರ್ ಮಹಮ್ಮೆದ್ ನೀರ್ಕಜೆಯವರ ನಿವಾಸದಲ್ಲಿ ಸಮಿತಿಯ ಅಧ್ಯಕ್ಷರಾದ ಜ! ಹಮೀದ್ ಮಣಿಲ ರವರ ಅದ್ಯಕ್ಷತೆಯಲ್ಲಿ ನಡೆಯಿತು.ಬಹು! ಹಮೀದ್ ಮುಸ್ಲಿಯಾರ್ ರವರ ದುಆದೊಂದಿಗೆ  ಆರಂಭವಾದ ಸಭೆಯಲ್ಲಿ ಜ! ಜಾಬಿರ್ ಬೆಟ್ಟಂಪಾಡಿ ರವರು ಸ್ವಾಗತಿಸಿದರು.ಬಹು! ಹಮೀದ್ ಮುಸ್ಲಿಯಾರ್ ರವರು ಮಾತನಾಡಿ ಕೆ ಐ ಸಿ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಪವಿತ್ರ ಕುರಾನ್ ಸೂಕ್ತದೊಂದಿಗೆ ಸಭೆಯನ್ನು ಉದ್ಘಾಟಿಸಿದರು . ಜ! ಜಾಬಿರ್ ಬೆಟ್ಟಂಪಾಡಿ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು .

15492127_1210928915644544_2884563119458760738_n

20161210_214020

20161210_214220

img-20161214-wa0051

img-20161214-wa0055

gen-sec-isaq-salethur

hon-pres-hameed-manila

president-zakariya-mular

tressuror-anwar-manila

ಸಭಾಧ್ಯಕ್ಷರಾದ ಜ! ಹಮೀದ್ ಮಣಿಲ ರವರು ಮಾತನಾಡಿ ,ಕೆ ಐ ಸಿ ಯ ಬೆಳವಣಿಗೆಯಲ್ಲಿ ನಖೀಲ್ ಘಟಕದ ಸಹಾಯ ಸಹಕಾರಗಳ ಬಗ್ಗೆ ವಿವರಿಸಿ ಸಹಕರಿಸಿದ ಸರ್ವ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಕಮಿಟಿಯನ್ನು ಬರ್ಕಾಸ್ತು ಗೊಳಿಸಿದರು .

ಕೆ ಐ ಸಿ ದುಬೈ ಸಮಿತಿಯ ಅಧ್ಯಕ್ಷರಾದ ಜ! ಅಶ್ರಫ್ ಖಾನ್ ಮಾಂತೂರ್ ರವರು ಮಾತನಾಡಿ ಕೆ ಐ ಸಿ ದುಬೈ ಸಮಿತಿಯ ಬೆಳವಣಿಗೆಯಲ್ಲಿ ನಖೀಲ್ ಘಟಕ ನೀಡಿದ ಸಹಕಾರಗಳನ್ನು ಪ್ರಶಂಸಿಸಿ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರಗಳನ್ನು ನೀಡುವಂತೆ ಕೇಳಿಕೊಂಡು ನೂತನ ಸಮಿತಿ ರಚನೆಗೆ ಚಾಲನೆ ನೀಡಿದರು.
2016 -17 ನೇ ಸಾಲಿನ ಸಾರಥಿಗಳ ವಿವರ :

ಗೌರವ ಸಲಹೆಗಾರರು : ಜ! ನೂರ್ ಮಹಮ್ಮದ್ ನೀರ್ಕಜೆ

ಗೌರವಾಧ್ಯಕ್ಷರು : ಜ! ಹಮೀದ್ ಮಣಿಲ

ಅಧ್ಯಕ್ಷರು : ಜ! ಝಕರಿಯಾ ಮುಲಾರ್

ಉಪಾಧ್ಯಕ್ಷರು : ಜ! ಜಾಬಿರ್ ಬೆಟ್ಟಂಪಾಡಿ

ಪ್ರ.ಕಾರ್ಯದರ್ಶಿ : ಜ! ಇಸಾಕ್ ಸಾಲೆತ್ತೂರು

ಕಾರ್ಯದರ್ಶಿ; ಜ! ಹಿದಾಯತ್ ಪಾಣೆಮಂಗಳೂರು

ಕೋಶಾಧಿಕಾರಿ : ಜ! ಅನ್ವರ್ ಮಾಣಿಲ

ಸಂಘಟನಾ ಕಾರ್ಯದರ್ಶಿ; ಜ! ಜಲೀಲ್ ವಿಟ್ಲ

ಸಂಚಾಲಕರು :ಜ! ಶಫೀಕ್ ಮಾಹಿ
ಜ! ಮುಸ್ತಫಾ ಕಕ್ಕಿಂಜೆ
ಜ! ಅಬ್ದುಲ್ಲಾ ಜಿ . ಬಿ .
ಜ! ಮನಾಫ್ ಕೇರಳ
ಜ! ನಿಸಾರ್ ಕೇರಳ
ಜ! ಮುಸ್ತಫಾ ಉಜಿರೆ
ಜ! ಇಸಾಕ್ ಉಜಿರೆ
ಜ! ನಾಸಿರ್ ಉಜಿರೆ
ಜ! ರಾಝಿಕ್ ಕಾಣಿಯೂರ್
ಜ! ರಫೀಕ್ ಸಂಪ್ಯ
ಜ! ರಿಝ್ವಾನ್ ಕೂರ್ನಡ್ಕ

ಹಾಗೂ ಇತರ 20 ಮಂದಿ ಸದಸ್ಯರುಗಳನ್ನು ಆರಿಸಲಾಯಿತು .ಇದೇ ಸಂದರ್ಭದಲ್ಲಿ ಪ್ರವಾಸಿ ಜೀವನಕ್ಕೆ ವಿಧಾಯ ಹೇಳಿ ಊರಿಗೆ ತೆರಳುತ್ತಿರುವ ನಖೀಲ್ ಯುನಿಟ್ನ ಸದಸ್ಯರೂ, ಅಲ್ ಕೌಸರ್ ಯೂತ್ ವಿಂಗ್ ಇದರ ಸಕ್ರಿಯ ಕಾರ್ಯಕರ್ತರಾದ ಜ! ನಾಸಿರ್ ಕಂಬಳಬೆಟ್ಟು ಅವರನ್ನು ಅಲ್ ಕೌಸರ್ ಯೂತ್ ವಿಂಗ್ ನ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಯೂತ್ ವಿಂಗ್ ನ ಗೌರವಾಧ್ಯಕ್ಷರಾದ ಜ! ರಫೀಕ್ ಆತೂರ್, ಅಧ್ಯಕ್ಷರಾದ ಜ! ನವಾಸ್ ಬಿ. ಸಿ. ರೋಡ್ , ಕಾರ್ಯದರ್ಶಿ ನಾಸಿರ್ ಬಪ್ಪಳಿಗೆ , ಸಂಘಟನಾ ಕಾರ್ಯದರ್ಶಿ ಜ! ಅಶ್ರಫ್ ಪರ್ಲಡ್ಕ , ಮೊದಲಾದವರು ಯೂತ್ ವಿಂಗ್ ನ ಪರವಾಗಿ ಮಾತನಾಡಿ ನಾಸಿರ್ ಕಂಬಳಬೆಟ್ಟು ಅವರು ಯೂತ್ ವಿಂಗ್ ಗೆ ನೀಡಿದ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ,ಅವರು ಪ್ರವಾಸಿ ಜೀವನಕ್ಕೆ ವಿಧಾಯ ಮಾಡಿ ಊರಿಗೆ ಹೋಗುತ್ತಿರುವುದು ಯೂತ್ ವಿಂಗ್ ಗೆ ದೊಡ್ಡ ನಷ್ಟ . ಮುಂದಕ್ಕೆ ಅವರ ಜೀವನದ ಎಲ್ಲಾ ಹಾದಿಗಳು ಸುಗಮವಾಗಿರಲಿ ಎಂದು ಶುಭ ಹಾರೈಸಿದರು .

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜ! ನಾಸಿರ್ ರವರು  ನೀವು ನೀಡಿದ ಸನ್ಮಾನಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ನಾನು ಎಲ್ಲಿದ್ದರೂ ಎಂದೆಂದೂ ನಿಮ್ಮವನಾಗಿರುವೆ , ಎಂದು ಭಾವೋದ್ರೇಕರಾಗಿ ಹೇಳಿದರು .

ಈ ಸಂದರ್ಭದಲ್ಲಿ ಬಹು! ಆಸ್ಕರ್ ಅಲಿ ತಂಙಳ್ ಕೋಲ್ಪೆ , ಜ! ಷರೀಫ್ ಕಾವು , ಜ! ನೂರ್ ಮಹಮ್ಮೆದ್ ನೀರ್ಕಜೆ,ಜ! ರಫೀಕ್ ಆತೂರ್, ಜ! ಅಬ್ದುಲ್ ಸಲಾಂ ಬಪ್ಪಳಿಗೆ.   ಜ ! ಅಬ್ದುಲ್ ಕಾದರ್ ಬೈತಡ್ಕ ,ಜ! ಅಶ್ರಫ್ ಅರ್ತಿಕೆರೆ , ಜ! ಅನ್ಸಾಫ್ ಪಾತೂರು , ಜ! ಮುಸ್ತಫಾ ಗೂನಡ್ಕ , ಜ! ಝಕರಿಯಾ ಮುಲಾರ್, ಜ! ಇಸಾಕ್ ಸಾಲೆತ್ತೂರು, ಜ! ಅನ್ವರ್ ಮಾಣಿಲ. ಜ! ಆಸಿಫ್ ಮರೀಲ್ ,ಜ! ಅಬ್ದುಲ್ ರಝಕ್ ಸೊಂಪಾಡಿ , ಜ! ಲತೀಫ್ ಕೌಡಿಚ್ಚಾರ್ , ಜ! ಅಝೀಜ್  ಸೊಂಪಾಡಿ ,ಜ! ಹಾಜಿ ಅಬ್ದುಲ್ ರಜಾಕ್ ಮನಿಲಾ ,ಜ!ಉಸ್ಮಾನ್ ಕೆಮ್ಮಿಂಜೆ ಮೊದಲಾದವರು ಸಂದರ್ಭಯೋಚಿತವಾಗಿ ಮಾತನಾಡಿ ನೂತನ ಸಮಿತಿಗೂ , ಊರಿಗೆ ತೆರಳುತ್ತಿರುವ ನಾಸರ್ ಕಂಬಳಬೆಟ್ಟು ಅವರಿಗೆ ಶುಭವನ್ನು ಹಾರೈಸಿದರು. ನೂರ್ ಮಹಮ್ಮದ್ ನೀರ್ಕಜೆ ಯವರು ವಂದಿಸಿ ಇಸಾಕ್ ಸಾಲೆತ್ತೂರ್ ಕಾರ್ಯಕ್ರಮ ನಿರೂಪಿಸಿದರು.

Comments are closed.