ಕ್ರೀಡೆ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಬೇಡಿ ಎಂದು ಅವರ ಅಭಿಮಾನಿಗಳು ಹೇಳಿದ್ದೇಕೆ ಗೊತ್ತಾ..?

Pinterest LinkedIn Tumblr

nehval

ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಚೀನಾ ಉತ್ಪನ್ನವೊಂದರ ಪ್ರಚಾರ ನಡೆಸುತ್ತಿರುವುದರಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೇಗಷ್ಟೇ ಸೈನಾ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌’ನಲ್ಲಿ ಚೀನಾ ಉತ್ಪನ್ನವಾದ ಹಾನರ್ 8 ಮೊಬೈಲ್ ಹಿಡಿದುಕೊಂಡ ಫೋಟೋವನ್ನು ಅಪ್‌’ಲೋಡ್ ಮಾಡಿದ್ದರು. ‘ನನ್ನ ಹೊಸ ಹಾನರ್ 8 ಫೋನ್, ಈ ಫೋನ್ ಮತ್ತು ಬಣ್ಣವನ್ನು ಇಷ್ಟಪಡುತ್ತೇನೆ’ ಎಂದು ಸೈನಾ ಬರೆದಿದ್ದರು.

ಈ ಸ್ಟೇಟಸ್ ಕಂಡ ಸೈನಾ ಅವರ ಕೆಲ ಅಭಿಮಾನಿಗಳು ಚೀನಾ ಉತ್ಪನ್ನವನ್ನು ಪ್ರಚಾರ ಮಾಡಿ ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಬೇಡಿ ಎಂದಿದ್ದಾರೆ. ಇನ್ನು ಕೆಲವರು ನಾನು ನಿಮ್ಮ ಅಭಿಮಾನಿ ಆದರೆ ಚೀನಾ ಉತ್ಪನ್ನದ ಪ್ರಚಾರಕರಾದರೆ ನಿಮ್ಮ ಅಭಿಮಾನಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Comments are closed.