ಗಲ್ಫ್

ಪತ್ನಿಯಿಂದ ಕಾಸ್ಮೆಟಿಕ್ ಸರ್ಜರಿ:  ಡೈವೋರ್ಸ್ ನೀಡಿದ ಪತಿ

Pinterest LinkedIn Tumblr

make-upದುಬೈ: ಮೊದಲ ಬಾರಿಗೆ ಮೇಕಪ್ ಇಲ್ಲದ ಪತ್ನಿಯ ಮುಖ ಕಂಡು ಗುರುತಿಸದಾದ ಪತಿ ಮಹಾಶಯ ಆಕೆಗೆ ಡೈವೋರ್ಸ್ ನೀಡಿರುವ ವಿಚಿತ್ರ ಘಟನೆ ದುಬೈನಲ್ಲಿ ನಡೆದಿದೆ.
ಯುಎಇಯ ಶಾರ್ಜಾದಲ್ಲಿರುವ ಅಲ್ ಮುಮ್ಮಜಾರ್ ಬೀಚ್ ಗೆ ನವ ದಂಪತಿಗಳಾದ 34 ವರ್ಷದ ಪತಿ 28 ವರ್ಷದ ಪತ್ನಿಯೊಂದಿಗೆ ತೆರಳಿದ್ದರು. ಸಮುದ್ರದಲ್ಲಿ ಮೈಮರೆತು ಸ್ನಾನ ಮಾಡಿದ್ದ ಪತ್ನಿಯ ಮೇಕಪ್ ಸಂಪೂರ್ಣವಾಗಿ ತೊಳೆದುಹೋಗಿತ್ತು. ಇತ್ತ ತನ್ನ ಸ್ವಂತ ಪತ್ನಿಯನ್ನು ಗುರುತಿಸದಾದ ಪತಿ ಮಹಾಶಯ ಮೇಕಪ್ ಇದ್ದಾಗಿನ ಆಕೆಯ ಮುಖ ಸೌಂದರ್ಯ ಮೇಕಪ್ ಇಲ್ಲದಿದ್ದಾಗ ಕಂಡು ಹೌಹಾರಿದ್ದು ಆಕೆಗೆ ವಿಚ್ಛೇದನ ನೀಡಿದ್ದಾನೆ.
ಕಾಸ್ಮೆಟಿಕ್ ಹಾಗೂ ನಕಲಿ ಐ ಲ್ಯಾಶಗಳನ್ನು ಬಳಿಸಿಕೊಂಡು ಸುಂದರಿಯಾಗಿ ಕಾಣಿಸಿಕೊಳ್ಳುವ ಮೂಲಕ ತನಗೆ ಆಕೆ ವೈವಾಹಿಕ ಮೋಸ ಮಾಡಿದ್ದಾಳೆ ಎಂದು ದೂರಿರುವ ಪತಿ ಮಹಾಶಯ ಆಕೆಗೆ ವಿಚ್ಛೇದನ ನೀಡಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಇತ್ತ ಮುಖ ಸೌಂದರ್ಯ ಕಳೆದುಕೊಂಡು ವಿಚ್ಛೇದನೆಗೆ ಗುರಿಯಾಗಿರುವ ನೊಂದ ಮಹಿಳೆ ಕೌನ್ಸೆಲಿಂಗ್ ಯಾಚಿಸಿ ತಮ್ಮನ್ನು ಸಂಪರ್ಕಿಸಿರುವುದಾಗಿ ಮನೋ ಚಿಕಿತ್ಸಕ ಡಾ. ಅಬ್ದುಲ್ ಅಜೀಜ್ ಅಸಫ್ ತಿಳಿಸಿದ್ದಾರೆ.

Comments are closed.