
ಫೋಟೋ: Ashok Belman
ದುಬೈಯ ಸಿಂಧಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವವು ಬಹಳ ಅದ್ದೂರಿಯಾಗಿ ಶುಕ್ರವಾರ ನಡೆಯಿತು. ಬೆಳಗ್ಗೆಯಿಂದ ನಡೆದ ಪೂಜಾ ವಿಧಿ-ವಿಧಾನಗಳ ಬಳಿಕ ಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳೂರಿನ ನ್ಯಾಯವಾದಿ ಪಿ.ಪಿ.ಹೆಗ್ಡೆ, ದುಬೈ ಅಕ್ಮೆ ಬಿಲ್ದಿಂಗ್ಸ್ ಮೆಟಿರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫಾರ್ಚುನ್ ಪ್ಲಾಜಾ ಹೋಟೆಲ್ಸ್ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಪ್ರಭಾಕರ ಅಂಬಲತೆರೆ, ಗಣೇಶ್ ರೈ, ಬಾಲಕೃಷ್ಣ ಸಾಲ್ಯಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.






























































Comments are closed.