ಗಲ್ಫ್

ಜೂನ್ 24 : ದುಬೈಯಲ್ಲಿ ಕೆ ಐ ಸಿ ಯು ಎ ಇ ಅಧೀನದಲ್ಲಿ ಬೃಹತ್ ಇಫ್ತಾರ್ ಸಂಗಮ

Pinterest LinkedIn Tumblr

kic iftar 2016

ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಅಧೀನದಲ್ಲಿ ವರ್ಷಂಪ್ರತಿ ಅನಿವಾಸಿ ದೀನೀ ಸ್ನೇಹಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಬೃಹತ್ ಇಫ್ತಾರ್ ಸಂಗಮ ಕಾರ್ಯಕ್ರಮವು ಜೂನ್ 24 ರಂದು ಆಪಲ್ ಇಂಟರ್ ನ್ಯಾಷನಲ್ ಸ್ಕೂಲ್ ಕುಸೈಸ್ ದುಬೈಯಲ್ಲಿ ನಡೆಯಲಿದೆ.

ಪ್ರಸಕ್ತ ಕಾರ್ಯಕ್ರಮದಲ್ಲಿ ಹಲವಾರು ಸಂಘ ಸಂಸ್ಥೆಗಳ ನೇತಾರರು , ಸಾಮಾಜಿಕ ಧಾರ್ಮಿಕ ಮುಖಂಡರು , ಅನಿವಾಸಿ ಉದ್ಯಮಿಗಳು ಕೆ ಐ ಸಿ ಹಿತೈಷಿಗಳು , ಹಾಗೂ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅಕಾಡೆಮಿ ಪಧಾಧಿಕಾರಿಗಳು ಭಾಗವಹಿಸಲಿದ್ದು ಅನಿವಾಸಿ ದೀನೀ ಸ್ನೇಹಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಸಂಘಟಕರು ವಿನಂತಿಸಿ ಕೊಂಡಿರುತ್ತಾರೆ . ಅಸರ್ ನಮಾಝಿನ ಬಳಿಕ ಸಭಾ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ ಎಂದು ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .

Write A Comment