ಅಂತರಾಷ್ಟ್ರೀಯ

54 ಸಾವಿರ ಕೋಟಿ ಸಾಲಕ್ಕೆ ಶ್ರೀಮಂತ ಸೌದಿ ಬೇಡಿಕೆ

Pinterest LinkedIn Tumblr

Saudi-9-3ದುಬೈ: ತೈಲ ಬೆಲೆ ಇಳಿಕೆ, ವಿತ್ತೀಯ ಕೊರತೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯಾವೇ ಈಗ ಭಾರೀ ಪ್ರಮಾಣದ ಸಾಲ ಮಾಡಲು ಮುಂದಾಗಿದೆ. ಸುಮಾರು 54 ಸಾವಿರ ಕೋಟಿ ರೂ. ಸಾಲ ಮಾಡಲು ಅದು ಮುಂದಾಗಿದೆ. ಅಲ್ಲದೇ ಮುಂದಿನ ಐದು ವರ್ಷಗಳಲ್ಲಿ ಅದನ್ನು ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಈ ಕುರಿತಂತೆ ಸೌದಿ ಆಡಳಿತ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಸಾಲದ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದೆ.

ಕಳೆದ ವಾರ ಈ ಬಗ್ಗೆ ವರದಿ ಮಾಡಿದ್ದ ರಾಯಿಟರ್ ಸುದ್ದಿಸಂಸ್ಥೆ, ಸೌದಿ ಅಂತಾರಾಷ್ಟ್ರೀಯ ಸಾಲ ಪಡೆವ ಬಗ್ಗೆ ತನ್ನ ಬ್ಯಾಂಕುಗಳೊಂದಿಗೆ ಯೋಜನೆ ರೂಪಿಸುವ ಚರ್ಚೆ ನಡೆಸಿದ್ದಾಗಿ ಹೇಳಲಾಗಿತ್ತು. ಆದರೆ ಆ ಕುರಿತ ಮಾಹಿತಿ ಹೊರಗೆಡವಿರಲಿಲ್ಲ. ಕಳೆದ ವರ್ಷ ಸೌದಿಯ ವಿತ್ತೀಯ ಕೊರತೆ 68 ಸಾವಿರ ಕೋಟಿ ರೂ.ಗಳಿಗೆ ತಲುಪಿತ್ತು. ಹೀಗಾಗಿ ಅದು ವಿದೇಶಿ ಸಾಲ ಪಡೆಯಲು ಮುಂದಾಗಿದೆ.

-ಉದಯವಾಣಿ

Write A Comment