
ದುಬೈ: ಯುಎಇಯ ನಾನಾ ಭಾಗಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಜೊತೆಗೆ ಆಲಿಕಲ್ಲು ಮಳೆ ಕೂಡಾ ಬಿದ್ದಿರುವ ವರದಿಯಾಗಿದೆ.
ಇಂದು ಬೆಳಗ್ಗೆಯಿಂದಲೇ ದಟ್ಟ ಮಂಜುಕವಿದ ವಾತಾವರಣವಿತ್ತು. ವಾಹನ ಚಾಲಕರು ಇದರಿಂದ ಪರದಾಟ ನಡೆಸಿದ್ದು, ವಾಹನ ಚಾಲಕರು ಜಾಗರೂಕರಾಗಿ ವಾಹನ ಚಲಾಯಿಸುವಂತೆ ಯುಎಇ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದಾರೆ.










ಫುಜೆರ್ಹಾ, ದಿಬ್ಬ, ರಾಸಲ್‌ಖೈಮಾದಲ್ಲಿ ನಿನ್ನೆಯಿಂದ ಧಾರಾಕರ ಮಳೆ ಸುರಿದಿದ್ದು, ಇಂದು ದುಬೈ, ಶಾರ್ಜಾ, ಅಜ್ಮಾನ್‌ನಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಜನಸಂಚಾರ ಅಸ್ತವ್ಯವಸ್ಥವಾಗಿದೆ. ಅಲ್ಲಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು, ಇಲ್ಲಿನ ಜನರಿಗೆ ಇದೊಂದು ರೀತಿಯ ವಿಶೇಷತೆ ಎನಿಸಿದೆ.