ಗಲ್ಫ್

ಸೌದಿ ಚುನಾವಣೆ: ಮೊದಲ ಬಾರಿ ಸ್ಪರ್ಧಿಸುತ್ತಿರುವ ಮಹಿಳೆಯರು

Pinterest LinkedIn Tumblr

saudi-women-vote

ರಿಯಾದ್,ಡಿ.12: ಶನಿವಾರ ನಡೆದ ನಗರಸಭೆ ಚುನಾವಣೆಗಳಲ್ಲಿ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೌದಿ ಮಹಿಳೆಯರಿಗೆ ಮತ ಚಲಾಯಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅರಸೊತ್ತಿಗೆಯ ಆಡಳಿತವಿರುವ ಕಟ್ಟಾ ಸಂಪ್ರದಾಯವಾದಿ ಇಸ್ಲಾಮಿಕ್ ರಾಷ್ಟ್ರವಾಗಿರುವ ಸೌದಿಯಲ್ಲಿ ವ್ಯಾಪಕವಾಗಿರುವ ಲಿಂಗ ತಾರತಮ್ಯ ನಿವಾರಣೆಯ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗಿದೆ.

ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು, ದೇಶದ ಏಕೈಕ ಚುನಾಯಿತ ಸಂಸ್ಥೆಗಳಾಗಿರುವ ನಗರಸಭೆಗಳಲ್ಲಿನ ಸ್ಥಾನಕ್ಕಾಗಿ 900ಕ್ಕೂ ಅಧಿಕ ಮಹಿಳೆಯರು ಸುಮಾರು 6000 ಪುರುಷ ಅಭ್ಯರ್ಥಿಗಳೊಂದಿಗೆ ಸೆಣಸುತ್ತಿದ್ದಾರೆ.

ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು, ದೇಶದ ಏಕೈಕ ಚುನಾಯಿತ ಸಂಸ್ಥೆಗಳಾಗಿರುವ ನಗರಸಭೆಗಳಲ್ಲಿನ ಸ್ಥಾನಕ್ಕಾಗಿ 900ಕ್ಕೂ ಅಧಿಕ ಮಹಿಳೆಯರು ಸುಮಾರು 6000 ಪುರುಷ ಅಭ್ಯರ್ಥಿಗಳೊಂದಿಗೆ ಸೆಣಸುತ್ತಿದ್ದಾರೆ.

ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಜಾರಿಯಿರುವ ಲಿಂಗ ಪ್ರತ್ಯೇಕತೆಯಿಂದಾಗಿ ತಮ್ಮ ಚುನಾವಣಾ ಪ್ರಚಾರದ ಸಂದರ್ಭ ಪುರುಷ ಮತದಾರರನ್ನು ಅವರು ನೇರವಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಮಹಿಳೆಯರು ಮತದಾರರಾಗಿ ನೋಂದಣಿ ಮಾಡಿಕೊಳ್ಳುವಲ್ಲಿಯೂ ಅಧಿಕಾರ ಶಾಹಿಯು ಅಸಹಕಾರ ತೋರಿಸಿತ್ತು, ಚುನಾವಣಾ ಪ್ರಕ್ರಿಯೆ ಮತ್ತು ಅದರ ಮಹತ್ವದ ಬಗ್ಗೆ ಮಹಿಳೆಯರಲ್ಲಿ ಜಾಗೃತಿಯ ಕೊರತೆಯೂ ಇತ್ತು ಎಂದು ಹಲವು ಮಹಿಳಾ ಮತದಾರರು ಹೇಳಿದರು.

ಶನಿವಾರ ಮತಗಟ್ಟೆಗಳಲ್ಲಿಯೂ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ನೋಂದಾಯಿತ ಒಟ್ಟೂ ಮತದಾರರ ಪೈಕಿ ಮಹಿಳೆಯರ ಸಂಖ್ಯೆ ಶೇ.10ಕ್ಕೂ ಕಡಿಮೆಯಿದೆ. ಮಹಿಳಾ ಅಭ್ಯರ್ಥಿಗಳು ಆಯ್ಕೆಯಾದರೂ ಅವರ ಸಂಖ್ಯೆ ಬೆರಳೆಣಿಕೆಯಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ನಿಜ ಹೇಳಬೇಕೆಂದರೆ ಗೆಲ್ಲಬೇಕೆಂದು ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಲ್ಲ. ಸ್ಪರ್ಧಿಸುವ ಮೂಲಕ ನಾನು ಗೆದ್ದಿದ್ದೇನೆ ಎಂದೇ ಭಾವಿಸಿದ್ದೇನೆ ಎಂದು ಮಕ್ಕಳ ವೈದ್ಯೆ ಅಮಲ್ ಬದ್ರುದ್ದೀನ್ ಅಲ್-ಸವಾರಿ ಹೇಳಿದರು.

ಆದರೆ ಸೌದಿಯ 284 ಮಂಡಳಿಗಳ ಮೂರನೆ ಒಂದರಷ್ಟು ಸ್ಥಾನಗಳಿಗೆ ನಗರಸಭೆ ವ್ಯವಹಾರಗಳ ಸಚಿವಾಲಯವು ನೇಮಕಗಳನ್ನು ಮಾಡುವುದರಿಂದ ಕನಿಷ್ಠ ಸ್ಥಾನಗಳಾದರೂ ತಮಗೆ ಲಭಿಸಬಹುದೆಂದು ಮಹಿಳೆಯರು ನಿರೀಕ್ಷಿಸಿದ್ದಾರೆ.

Write A Comment