ಗಲ್ಫ್

ವ್ಯಭಿಚಾರದಲ್ಲಿ ತೊಡಗಿದ್ದ ಶ್ರೀಲಂಕಾ ಮೂಲದ ವಿವಾಹಿತೆಯೊಬ್ಬಳಿಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಿದ ಸೌದಿ ಅರೇಬಿಯಾ

Pinterest LinkedIn Tumblr

stone

ರಿಯಾದ್: ಸೌದಿ ಅರೆಬಿಯಾದಲ್ಲಿ ವಿವಾಹಿತೆಯೊಬ್ಬಳು ವ್ಯಭಿಚಾರ ದಲ್ಲಿ ತೊಡಗಿ ತನ್ನ ತಪ್ಪು ಒಪ್ಪಿಕೊಂಡರೂ ಆಕೆಗೆ ಮರಣದಂಡನೆ ನೀಡಲಾಗಿದೆ. ಆದರೆ ಆಕೆಯೊಂದಿಗೆ ವ್ಯಭಿಚಾರದಲ್ಲಿ ಪಾಲ್ಗೊಂಡ ಪರಪುರುಷನಿಗೆ ಮಾತ್ರ ನೂರು ಛಡಿಯೇಟಿನ ಶಿಕ್ಷೆ ನೀಡಿ ಬಿಡುಗಡೆ ಮಾಡಲಾಗಿದೆ.

45 ವರ್ಷದ ಆಕೆ ಶ್ರೀಲಂಕಾ ಮೂಲದವಳು. ಪತಿಗೆ ಮೋಸ ಮಾಡಿ ಪರಸಂಗ ಮಾಡಿದಳೆಂದು ಕೋರ್ಟ್ ಆಕೆಗೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಿತು. ಯುವಕನಿಗೆ ಅಂಥದ್ದೇ ಶಿಕ್ಷೆ ಯಾಕಿಲ್ಲ ಎಂದರೆ ಆತ ವಿವಾಹಿತ ಅಲ್ಲವಲ್ಲ ಎಂಬ ಉತ್ತರ ಬಂದಿದೆ.

ಇಂಥ ತಾರತಮ್ಯ ಹಾಗೂ ಕ್ರೂರ ಶಿಕ್ಷೆ ವಿಧಿಸಿರುವ ಅರಬ್ ರಾಷ್ಟ್ರಕ್ಕೆ ಶ್ರೀಲಂಕಾ ಇದೀಗ ಪತ್ರ ಬರೆದಿದ್ದು, ಮಹಿಳೆಗೆ ಕ್ಷಮಾದಾನ ನೀಡಲು ಕೋರಿದೆ. ಆದರೆ ಲಂಕಾದಲ್ಲಿರುವ ಸೌದಿ ರಾಯಭಾರಿ ಕಚೇರಿ ಅದಕ್ಕಿನ್ನೂ ಸ್ಪಂದಿಸಿಲ್ಲ.

ಶರಿಯಾ ಕಾನೂನನ್ನು ಪಾಲಿಸುವ ಸೌದಿ ಅಪರಾಧಿಗಳಿಗೆ ಉಗ್ರ ಶಿಕ್ಷೆ ವಿಧಿಸುತ್ತದೆ. ವ್ಯಭಿಚಾರ, ವೇಶ್ಯಾವಾಟಿಕೆ, ಮಾದಕವಸ್ತುಗಳ ಕಳ್ಳಸಾಗಣೆಗಂತೂ ಗಲ್ಲು ತನಕ ಹಲವು ಕಠಿಣ ಶಿಕ್ಷೆಗಳಿವೆ. ಕಲ್ಲೆಸೆದು ಕೊಲ್ಲುವುದೂ ಒಂದು ವಿಧಾನ.

ಈ ಶಿಕ್ಷೆಯಲ್ಲಿ ಒಂದು ತಂಡ ಅಪರಾಧಿಯತ್ತ ಒಂದೇ ಸಮನೆ ಕಲ್ಲೆಸೆಯುತ್ತದೆ. ಆ ಕಲ್ಲೇಟು ತಿಂದು ರಾಶಿ ಕಲ್ಲುಗಳಿಂದಲೇ ಆತ ಎದೆ ಮಟ್ಟದ ತನಕ ಮುಚ್ಚಿ ಹೋಗಿ ಸಾವಿಗೀಡಾಗುವ ತನಕವೂ ಕಲ್ಲೆಸೆತ ಜಾರಿಯಲ್ಲಿರುತ್ತದೆ. ಇಂಥ ಶಿಕ್ಷೆಗಳಿಗೆ ಮಾನವ ಹಕ್ಕು ಹೋರಾಟಗಾರರಿಂದ ಭಾರಿ ವಿರೋಧ ವ್ಯಕ್ತವಾಗುತ್ತಲೇ ಇದ್ದರೂ ಏನೂ ಬದಲಾಗಿಲ್ಲ.

Write A Comment