ಗಲ್ಫ್

ನವಂಬರ್ 27ರಂದು ದುಬಾಯಿಯಲ್ಲಿ ಪ್ರಕಾಶ್ ರಾವ್ ಪಯ್ಯಾರ್ ರ “ನನ” ತುಳು ಆಡಿಯೊ ಸಿಡಿ ಬಿಡುಗಡೆ

Pinterest LinkedIn Tumblr

Print

ದುಬೈ, ನ.26: ಧ್ವನಿ ಪ್ರತಿಷ್ಠಾನ ಅದ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆಗಿರುವ ಪ್ರಕಾಶ್ ರಾವ್ ಪಯ್ಯಾರ್ ರವರು ರಚಿಸಿದ “ನನ” ತುಳು ಆಲ್ಬಾಮ್ ಹಾಡಿನ ದ್ವನಿಸುರುಳಿ ನವಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ದುಬೈಯ ಉದುಮೆತದ ಇಂಡಿಯನ್ ಕ್ಲಬ್ ನಲ್ಲಿ ಲೋಕರ್ಪಣೆಗೊಳ್ಳಲಿದೆ.

ಶಶಿಧರ್ ಕೋಟೆಯವರು ಸಂಗೀತ ನೀಡಿರುವ ಈ ಆಲ್ಬಾಮ್ ಗೀತೆಯಲ್ಲಿ ಎಸ್.ಬಿ.ಬಾಲಸುಬ್ರಹ್ಮಣ್ಯ, ಬಿ.ಅರ್.ಛಾಯ, ಮಂಜುಳ ಗುರುರಾಜ್, ಕೆ.ಸುರೇಖ,ರಮೆಶ್ಚಂದ್ರರವರು ಹಾಡಿದ್ದಾರೆ.

ದ್ವನಿಸುರುಳಿಯ ಬಿಡುಗಡೆಯನ್ನು ಯು ಎ ಇ ಎಕ್ಷ್ಚಂಜ್ ನ ಸುಧೀರ್ ಕುಮಾರ್ ಶೆಟ್ಟಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಪತ್ರಕರ್ತ ವಾಲ್ಟರ್ ನಂದಲಿಕೆ, ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೊತಮ ಶೆಟ್ಟಿಯವರು ಭಾಗವಹಿಸಲಿದ್ದಾರೆ.

Write A Comment