ಕನ್ನಡ ವಾರ್ತೆಗಳು

ಡ್ಯಾನ್ಸ್ ಬಾರ್‌ಗೆ ಲೈಸನ್ಸ್ ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ.

Pinterest LinkedIn Tumblr

bar)dance_lince

ದೆಹಲಿ ,ನ.26 : ಡ್ಯಾನ್ಸ್ ಬಾರ್‌ಗಳಿಗೆ ಎರಡು ವಾರದೊಳಗೆ ಪರವಾನಗಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಗುರುವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಸುಪ್ರೀಂ ಕೋರ್ಟ್ ಈ ಹಿಂದಿನ ಆದೇಶ ಜಾರಿಗೊಳಿಸದಿರುವ ಬಗ್ಗೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಪಿಸಿ ಪಂತ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರದ ಪರವಾದ ಮಂಡಿಸಿದ ಹರೀಶ್ ಸಾಳ್ವೆ ಅವರು, ಕೋರ್ಟ್ ಎಲ್ಲಾ ನಿರ್ದೇಶನಗಳನ್ನು ನಾವು ಗೌರವಿಸುತ್ತೇವೆ ಮತ್ತು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಡ್ಯಾನ್ಸ್ ಬಾರ್ ಗಳನ್ನು ನಿಷೇಧಿಸಿತ್ತು. ಈ ಬಗ್ಗೆ ಬಾರ್, ರೆಸ್ಟೋರೆಂಟ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಅಪೆಕ್ಸ್ ಕೋರ್ಟ್, ಈ ರೀತಿಯ ನಿಷೇಧ ಸಂವಿಧಾನ ಬಾಹಿರ ಎಂದು ಹೇಳಿ, ನಿಷೇಧವನ್ನು ತೆರವುಗೊಳಿಸಿತ್ತು.

Write A Comment