ಗಲ್ಫ್

ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ 60ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಪರಮ ಪೂಜ್ಯ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ| ಡಿ. ವೀರೆಂದ್ರ ಹೆಗ್ಗಡೆಯರಿಂದ ಪ್ರಶಂಸಾ ಆಶೀರ್ವಚನ

Pinterest LinkedIn Tumblr

Abudhabi kar_Nov 6_2015-091

ಅಬುಧಾಬಿ ಕರ್ನಾಟಕ ಸಂಘ ತನ್ನ 35ನೇ ವರ್ಷದ ಯಶಸ್ವಿ ಹೆಜ್ಜೆಯಲ್ಲಿ 60ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿ ಸಮಾರಂಭ 2015 ನವೆಂಬರ್ 6ನೇ ತಾರೀಕು ಶುಕ್ರವಾರ ಅಬುಧಾಬಿ ಇಂಡಿಯಾ ಸೋಸಿಯಲ್ ಸೆಂಟರ್ ಸಭಾಂಗಣದಲ್ಲಿ ಸಮಾವೇಶಗೊಂಡ ಅಪಾರ ಕನ್ನಡಿಗರ ಸಮ್ಮುಖದಲ್ಲಿ ಆಚರಿಸಲಾಯಿತು.

ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟನೆ

Sameeha-3

Sameeha-1

Sameeha-2

Sameeha-4

Sameeha-5

Abudhabi kar_Nov 6_2015-065

Abudhabi kar_Nov 6_2015-070

Abudhabi kar_Nov 6_2015-119

Abudhabi kar_Nov 6_2015-137

Abudhabi kar_Nov 6_2015-147

ಅಬುಧಾಬಿ ಕರ್ನಾಟಕ ಸಂಘದ ಮಹಾ ಪೋಷಕರು ಡಾ| ಬಿ. ಆರ್. ಶೆಟ್ಟಿ, ಡಾ| ಚಂದ್ರಕುಮಾರಿ ಆರ್. ಶೆಟ್ಟಿ ಯವರ ಸಮ್ಮುಖದಲ್ಲಿ ಯು.ಎ.ಇ. ಗೆ ಭಾರತೀಯ ರಾಯಭಾರಿ ಗೌ. ಮಾನ್ಯ ಟಿ.ಪಿ. ಸೀತಾರಾಂ, ಇಂಡಿಯಾ ಸೋಸಿಯಲ್ ಸೆಂಟರ್ ಅಬುಧಾಬಿ ಅಧ್ಯಕ್ಷರು ಶ್ರೀ ರಮೇಶ್ ಪಣಿಕ್ಕರ್, ಉಪಾಧ್ಯಕ್ಷರು ಡಾ. ರಾಜ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ಎ. ಸಲೀಂ, ಹಾಗೂ ಶ್ರೀ ಶೇಖರ್ ಶೆಟ್ಟಿ, ಶ್ರೀ ರೊನಾಲ್ಡ್ ಪಿಂಟೊ, ಶ್ರೀ ಲಿಯೋ ರಾಡ್ರಿಗಸ್ ಸರ್ವರು ಜ್ಯೋತಿಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ವಾಗತಿಸಿದರು.

ಮನ ಸೆಳೆದ ಸಾಂಸ್ಕೃತಿಕ ವೈವಿಧ್ಯ

Abudhabi kar_Nov 6_2015-047

 Abudhabi kar_Nov 6_2015-067

Abudhabi kar_Nov 6_2015-061

Abudhabi kar_Nov 6_2015-083

Abudhabi kar_Nov 6_2015-084

Abudhabi kar_Nov 6_2015-086

Abudhabi kar_Nov 6_2015-087

Abudhabi kar_Nov 6_2015-088

Abudhabi kar_Nov 6_2015-090

ಶ್ರೀಮತಿ ದಿವ್ಯ ಶರ್ಮಾ ಮತ್ತು ತಂಡದ ಪ್ರಾರ್ಥನಾ ಗೀತೆ, ಶ್ರೀಮತಿ ಸುಪ್ರಿಯಾ ಕಿರಣ್ ರೈ ನಿರ್ದೇಶನದಲ್ಲಿ ಮಕ್ಕಳ ಸ್ವಾಗತ ನೃತ್ಯ, ವಿಧೂಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಮಕ್ಕಳ ತಂಡದ ಗುರುವಂದನೆ ನೃತ್ಯ, ಅಬುಧಾಬಿ ಬ್ರಾಹ್ಮಣರ ಸಂಘದ ತಂಡ ಒಂದು ಸದಸ್ಯರ ಸಮೂಹ ಗೀತೆ, ಕೊಂಕಣ್ ಪರ್ಲ್ಸ್ ತಂಡದ ಸಮೂಹ ಗೀತೆ, ವಿಧೂಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಕಿರಿಯ ಮಕ್ಕಳ ತಂಡದ ಬೀಸು ಕಂಸಾಳೆ, ಶ್ರೀಮತಿ ವೀಣಾ ಮಲ್ಯ ರವರ ನಿರ್ದೇಶನದಲ್ಲಿ ಒನಕೆ ಓಬವ್ವ ನೃತ್ಯ ರೂಪಕ, ವಿಧೂಷಿ ಸಪ್ನ ಕಿರಣ್ ನಿರ್ದೇಶನದಲ್ಲಿ ಮಕ್ಕಳ ತಂಡದ ಗುಡ್ಡಗಾಡು ಜನರ ನೃತ್ಯ ಸರ್ವರ ಮನ ಸೆಳೆಯಿತು.

ಶ್ರೀಮತಿ ಸಂಧ್ಯಾ ಶೆಣೈ ಹಾಸ್ಯ ಪ್ರಹಸನ

ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಉಡುಪಿಯಿಂದ ವಿಶೇಷ ಅಮಂತ್ರಿತರಾಗಿ ಆಗಮಿಸಿದ ಶ್ರೀಮತಿ ಸಂಧ್ಯಾ ಶೆಣೈ ಹಾಸ್ಯ ಪ್ರಹಸನ ಸರ್ವರನ್ನು ಮನರಂಜಿಸಿದರು.

Abudhabi kar_Nov 6_2015-210

Abudhabi kar_Nov 6_2015-211

Abudhabi kar_Nov 6_2015-213

Abudhabi kar_Nov 6_2015-218

Abudhabi kar_Nov 6_2015-220

Abudhabi kar_Nov 6_2015-228

Abudhabi kar_Nov 6_2015-230

Abudhabi kar_Nov 6_2015-231

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ| ಡಿ. ವೀರೆಂದ್ರ ಹೆಗ್ಗಡೆಯವರಿಗೆ ಗೌರವಪೂರ್ವಕ ಸ್ವಾಗತ, ಸನ್ಮಾನ

ಅಬುಧಾಬಿ ಕರ್ನಾಟಕ ಸಂಘದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ| ಡಿ. ವೀರೆಂದ್ರ ಹೆಗ್ಗಡೆಯವರನ್ನು ಗೌರವಪೂರ್ವಕ ಸ್ವಾಗತಿಸಿ, ಡಾ| ಬಿ. ಆರ್. ಶೆಟ್ಟಿಯವರು ಶಾಲು ಹೊದಿಸಿ ಸನ್ಮಾನಿಸಿದರು

Abudhabi kar_Nov 6_2015-001

Abudhabi kar_Nov 6_2015-002

Abudhabi kar_Nov 6_2015-003

Abudhabi kar_Nov 6_2015-004

Abudhabi kar_Nov 6_2015-005

Abudhabi kar_Nov 6_2015-006

Abudhabi kar_Nov 6_2015-007

Abudhabi kar_Nov 6_2015-008

Abudhabi kar_Nov 6_2015-009

Abudhabi kar_Nov 6_2015-010

Abudhabi kar_Nov 6_2015-012

Abudhabi kar_Nov 6_2015-013

Abudhabi kar_Nov 6_2015-014

Abudhabi kar_Nov 6_2015-016

Abudhabi kar_Nov 6_2015-017

ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ “ಡಾ. ದ. ರಾ. ಬೇಂದ್ರೆ ಪ್ರಶಸ್ತಿ” ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಶ್ರೀ ಮಹಮ್ಮದ್ ಇರ್ಷಾದ್ ಮೂಡಬಿದ್ರಿಯವರಿಗೆ ಪ್ರಧಾನ

Abudhabi kar_Nov 6_2015-092

ಅಬುಧಾಬಿ ಕರ್ನಾಟಕ ಸಂಘ ಕಳೆದ ಹಲವು ವರ್ಷಗಳಿಂದ ಯು.ಎ.ಇ.ಯಲ್ಲಿ ಕನ್ನಡ ಭಾಷೆ ಕಲೆ ಸಂಸ್ಕೃತಿಗಾಗಿ ಅಪಾರ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಡಾ. ದ. ರಾ. ಬೇಂದ್ರೆ ಪ್ರಶಸ್ತಿ” ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಹಮ್ಮದ್ ಇರ್ಷಾದ್ ಮೂಡಬಿದ್ರಿಯವರಿಗೆ ಪ್ರಧಾನಿಸಿದರು. ಡಾ| ಬಿ.ಆರ್.ಶೆಟ್ಟಿಯವರ ಸಮ್ಮುಖದಲ್ಲಿ ಮುಖ್ಯ ಅತಿಥಿಗಳು, ಅಬುಧಾಬಿ ಕರ್ನಾಟಕ ಸಂಘದ ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ತಿತರಿದ್ದರು.

Abudhabi kar_Nov 6_2015-042

Abudhabi kar_Nov 6_2015-043

Abudhabi kar_Nov 6_2015-044

Abudhabi kar_Nov 6_2015-049

Abudhabi kar_Nov 6_2015-051

Abudhabi kar_Nov 6_2015-052

Abudhabi kar_Nov 6_2015-053

Abudhabi kar_Nov 6_2015-055

Abudhabi kar_Nov 6_2015-056

Abudhabi kar_Nov 6_2015-059

Abudhabi kar_Nov 6_2015-060

Abudhabi kar_Nov 6_2015-063

Abudhabi kar_Nov 6_2015-066

Abudhabi kar_Nov 6_2015-068

Abudhabi kar_Nov 6_2015-069

Abudhabi kar_Nov 6_2015-071

Abudhabi kar_Nov 6_2015-072

Abudhabi kar_Nov 6_2015-073

Abudhabi kar_Nov 6_2015-074

ಕವಿ, ಸಾಹಿತಿ, ಬರಹಗಾರ ಶ್ರೀ ಮಹಮ್ಮದ್ ಇರ್ಷಾದ್ ಮೂಡಬಿದ್ರಿ ಯವರು ಸನ್ಮಾನಕ್ಕೆ ಉತ್ತರವಾಗಿ ರಚಿಸಿದ ಕವನವನ್ನು ವಾಚಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದರು.

ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಇತ್ತಿಚೆಗೆ ಬಿಡುಗಡೆ ಮಾಡಿರುವ ತುಳು ಕವನ ಸಂಕಲನ “ಉರೆತ ಕಣ್ಣ್ ದ ಸಿರಿ” ಪುಸ್ತಕವನ್ನು ಡಾ| ಡಿ. ವೀರೆಂದ್ರ ಹೆಗ್ಗಡೆಯವರಿಗೆ ಹಾಗೂ ಡಾ| ಬಿ. ಆರ್. ಶೆಟ್ಟಿಯವರಿಗೆ ನೀಡಿದರು.

ಕ್ರಿಯಾತ್ಮಕ ಕಲಾನಿರ್ದೇಶಕ ಬಿ. ಕೆ. ಗಣೇಶ್ ರೈಯವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ ಗೌರವ

Abudhabi kar_Nov 6_2015-099

Abudhabi kar_Nov 6_2015-100

Abudhabi kar_Nov 6_2015-101

Abudhabi kar_Nov 6_2015-102

Abudhabi kar_Nov 6_2015-103

Abudhabi kar_Nov 6_2015-104

Abudhabi kar_Nov 6_2015-105

Abudhabi kar_Nov 6_2015-106

Abudhabi kar_Nov 6_2015-107

Abudhabi kar_Nov 6_2015-108

Abudhabi kar_Nov 6_2015-109

Abudhabi kar_Nov 6_2015-110

Abudhabi kar_Nov 6_2015-111

Abudhabi kar_Nov 6_2015-112

Abudhabi kar_Nov 6_2015-113

ಅಬುಧಾಬಿ ಕರ್ನಾಟಕ ಸಂಘದ ವಿವಿಧ ಕನ್ನಡ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಘದ ಲಾಂಛನವನ್ನು ವಿನ್ಯಾಸ ಗೊಳಿಸಿ, ಸಮಾರಂಭಗಳ ಅಹ್ವಾನ ಪತ್ರ ವಿನ್ಯಾಸ, ವೇದಿಕೆಯ ಬೃಹತ್ ಚಿತ್ರಪಟ ವಿನ್ಯಾಸ, ಹಲವಾರು ಗಣ್ಯರ ಸನ್ಮಾನ ಪತ್ರ ಪರಿಕಲ್ಪನೆ ವಿನ್ಯಾಸ, ರಜತ ಮಹೋತ್ಸವದ ಸ್ಮರಣ ಸಂಚಿಕೆ ವಿನ್ಯಾಸ, ಅಬುಧಾಬಿ ಕರ್ನಾಟಕ ಸಂಘದ ಹಲವಾರು ಲೇಖನಗಳನ್ನು ಮಾಧ್ಯಮದಲ್ಲಿ ಪ್ರಕಟಿಸಿಕೊಂಡು ಸಕ್ರಿಯಾವಾಗಿ ತೊಡಗಿಸಿಕೊಂಡಿರುವ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈ ಯವರನ್ನು ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಡಾ| ಬಿ. ಆರ್. ಶೆಟ್ಟಿಯವರಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ ಗೌರವ

Abudhabi kar_Nov 6_2015-097

Abudhabi kar_Nov 6_2015-098
ಅಬುಧಾಬಿ ಕರ್ನಾಟಕ ಸಂಘದ ಮಹಾ ಪೋಷಕರು, ಎಲ್ಲಾ ಕನ್ನಡ ಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಪ್ರೋತ್ಸಾಹ ನೀಡುತ್ತಾ ಉತ್ಸಾಹಿ ಚಿಲುಮೆಯಾಗಿರುವ ಡಾ| ಬಿ. ಆರ್. ಶೆಟ್ಟಿಯವರನ್ನು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿ ಗೌರವಿಸಿದರು.

ಸಮಾರಂಭಕ್ಕೆ ಆಗಮಿಸಿದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಗೌರವ ಸಮರ್ಪಣೆ

Abudhabi kar_Nov 6_2015-080

Abudhabi kar_Nov 6_2015-085

Abudhabi kar_Nov 6_2015-094

Abudhabi kar_Nov 6_2015-095

Abudhabi kar_Nov 6_2015-096

Abudhabi kar_Nov 6_2015-127

Abudhabi kar_Nov 6_2015-128

Abudhabi kar_Nov 6_2015-129

Abudhabi kar_Nov 6_2015-130

Abudhabi kar_Nov 6_2015-131

Abudhabi kar_Nov 6_2015-132

Abudhabi kar_Nov 6_2015-133

Abudhabi kar_Nov 6_2015-134

Abudhabi kar_Nov 6_2015-135

Abudhabi kar_Nov 6_2015-136

Abudhabi kar_Nov 6_2015-138

Abudhabi kar_Nov 6_2015-139

Abudhabi kar_Nov 6_2015-140

Abudhabi kar_Nov 6_2015-141

Abudhabi kar_Nov 6_2015-143

Abudhabi kar_Nov 6_2015-144

Abudhabi kar_Nov 6_2015-145

Abudhabi kar_Nov 6_2015-146

Abudhabi kar_Nov 6_2015-148

ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ಅಹ್ವಾನಿತ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಡಾ| ಬಿ. ಆರ್. ಶೆಟ್ಟಿ ಯವರು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿದರು. ಗೌರವ ಸ್ವೀಕರಿಸಿದ ಅತಿಥಿಗಳು ಶ್ರೀಯುತರಗಳಾದ ಸತೀಶ್ ವೆಂಕಟರಮಣ – ಅಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ, ಸದನ್ ದಾಸ್-ಕನ್ನಡ ಕೂಟ ದುಬಾಯಿ, ಹರೀಶ್ ಶೇರಿಗಾರ್-ದೇವಾಡಿಗ ಸಂಘ ದುಬಾಯಿ, ಜಯಂತ್ ಶೆಟ್ಟಿ-ಯು.ಎ.ಇ. ತುಳುಕೂಟ, ಕರ್ನಾಟಕ ಸಂಘ ದುಬಾಯಿ, ಲಿಯೋ ರೋಡ್ರಿಗಸ್ – ಕೆ.ಸಿ.ಒ. ಅಬುಧಾಬಿ, ಮಹಮ್ಮದ್ ಆಲಿ ಉಚ್ಚಿಲ-ಬ್ಯಾರಿಸ್ ಕಲ್ಚರಲ್ ಫೋರಂ ಅಬುಧಾಬಿ, ಪ್ರಕಾಶ ರಾವ್ ಪಯ್ಯಾರ್ – ಧ್ವನಿ ಪ್ರತಿಷ್ಠಾನ, ಸತೀಶ್ ಪೂಜಾರಿ – ಬಿಲ್ಲವಾಸ್ ದುಬಾಯಿ, ಪ್ರಭಾಕರ ಅಂಲತೆರೆ- ಮಾರ್ಗ ದೀಪ ಯು.ಎ.ಇ., ರುದಯ್ಯ ನವಲಿ ಹಿರೆಮಠ್ – ಬಸವ ಸಮಿತಿ ದುಬಾಯಿ, ಜೆ. ಎಸ್. ಎಸ್. ಇಂಟರ್ನ್ಯಾಶನಲ್ ಸ್ಕೂಲ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಡಿ. ಪಿ. ಶಿವ ಕುಮಾರ್, ಗೋಪಿನಾಥ್ ರಾವ್ – ಕನ್ನಡ ಧ್ವನಿ, ದಿನೇಶ್ ಶೆಟ್ಟಿ – ಯಕ್ಷಮಿತ್ರರು, ದೀಪಕ್ ಸೋಮಶೇಖರ್ – ಕನ್ನಡ ಮೂವಿಸ್, ಸುಗಂಧರಾಜ್ ಬೇಕಲ್ – ರಾಮ ಕ್ಷತ್ರೀಯ ಸಂಘ ಯು.ಎ.ಇ. ಶ್ರೀ ಶೋಧನ್ ಪ್ರಸಾದ್ – ನಮ ತುಳುವೆರ್, ಮತ್ತು ತುಳು ಸಿನೆಮಾ ನಿರ್ಮಾಪಕರು ಹಾಗೂ ರಂಗ್ ಚಲನ ಚಿತ್ರ ನಟಿ ದಿಕ್ಷಾತಾ ಆಚಾರ್ಯ.

ಮಾಧ್ಯಮ ಮಿತ್ರರಿಗೆ ಗೌರವ

Sameeha-6

Sameeha-7

Abudhabi kar_Nov 6_2015-149

Abudhabi kar_Nov 6_2015-151

Abudhabi kar_Nov 6_2015-152

Abudhabi kar_Nov 6_2015-153

Abudhabi kar_Nov 6_2015-156

Abudhabi kar_Nov 6_2015-157

Abudhabi kar_Nov 6_2015-158

Abudhabi kar_Nov 6_2015-159

Abudhabi kar_Nov 6_2015-160

Abudhabi kar_Nov 6_2015-162

Abudhabi kar_Nov 6_2015-163

Abudhabi kar_Nov 6_2015-164

Abudhabi kar_Nov 6_2015-165

Abudhabi kar_Nov 6_2015-166

Abudhabi kar_Nov 6_2015-167

Abudhabi kar_Nov 6_2015-168

Abudhabi kar_Nov 6_2015-169

ಶ್ರೀಯುತರುಗಳಾದ ಸೋನು ಬಂಟ್ವಾಲ್, ಕ್ಯಾನೂಟ್, ಇಸ್ಮೈಲ್ ಶಿವಮೊಗ್ಗ, ಅಶೋಕ್ ಬೆಳ್ಮಣ್, ರಫಿಕ್ ಕೊಲ್ಪೆ, ಪ್ರಶಾಂತ್ ನಾಯರ್, ರಮೇಶ್ ಸುವರ್ಣ, ವಿಜಯ ಕುಮಾರ್ ಶೆಟ್ಟಿ, ವಿನಯ ನಾಯಕ್, ಸುಧಾಕರ್ ತುಂಬೆ, ಅರ್ಶಾದ್ ಹುಸ್ಸೈನ್ ಇವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಡಾ| ಹರ್ಷಕುಮಾರ್ ರೈ ಯವರ “ಅಷ್ಟಗಾನ ವೈಭವ” ಸಿ.ಡಿ. ಡಾ| ಬಿ. ಆರ್. ಶೆಟ್ಟಿಯವರಿಂದ ಬಿಡುಗಡೆ

Abudhabi kar_Nov 6_2015-154

Abudhabi kar_Nov 6_2015-155

ಅಷ್ಟ ದೇಗುಲದ ಬಗ್ಗೆ ರಚಿಸಲಾದ ಭಕ್ತಿಗೀತೆಗಳ ಸಂಗ್ರಹ ಪುತ್ತೂರು ನರಸಿಂಹನಾಯಕ್ ಬಳಗದವರ ಗಾಯನದಲ್ಲಿ ಮೂಡಿಬಂದ ಸಿ.ಡಿ.ಯನ್ನು ಡಾ. ಬಿ. ಆರ್. ಶೆಟ್ಟಿವರು ಬಿಡುಗಡೆ ಮಾಡಿದರು. ಡಾ| ಹರ್ಷ ಕುಮಾರ್ ರೈ ನಿರ್ಮಾಣದಲ್ಲಿ ಮಿತ್ರಂಪಾಡಿ ಜಯರಾಂ ರೈ ಅಬುಧಾಬಿ ಇವರ ಸಹಕಾರದಿಂದ ಬಿಡುಗಡೆಯಾಗುವ ಸಿ.ಡಿ. ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಯ ಯೋಜನೆಯಲ್ಲಿ, ಇಂದು ಅಬುಧಾಬಿಯಲ್ಲಿ ಬಿಡುಗಡೆಯಾಗಿದೆ. ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಮನೋಹರ್ ತೋನ್ಸೆಯವರು ಮಾಡಿದರು

ಅಬುಧಾಬಿ ಕರ್ನಾಟಕ ಸಂಘದ ಥ್ರೋಬಾಲ್ ತಂಡದ ವಿಜೇತರಿಗೆ ವೇದಿಕೆಯಲ್ಲಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪೋಷಕರ ಸಹಿತ ಶೈಕ್ಷಣಿಕವಾಗಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಯು.ಎ.ಇ. ಯಲ್ಲಿ ಪ್ರತಿಷ್ಠಿತ ಶೇಖ್ ಹಂದಾನ್ ಅವಾರ್ಡ್ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಡಾ| ಬಿ. ಆರ್. ಶೆಟ್ಟಿಯವರು ಹಾಗೂ ಡಾ|. ಚಂದ್ರಕುಮಾರಿ ಆರ್. ಶೆಟ್ಟಿಯವರು ಪದಕ ನೀಡಿ ಗೌರವಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ರವಿಂದ್ರ ರೈ ನಡೆಸಿಕೊಟ್ಟರು.

Abudhabi kar_Nov 6_2015-185

Abudhabi kar_Nov 6_2015-186

Abudhabi kar_Nov 6_2015-187

Abudhabi kar_Nov 6_2015-188

Abudhabi kar_Nov 6_2015-189

Abudhabi kar_Nov 6_2015-190

Abudhabi kar_Nov 6_2015-191

Abudhabi kar_Nov 6_2015-192

Abudhabi kar_Nov 6_2015-193

Abudhabi kar_Nov 6_2015-194

Abudhabi kar_Nov 6_2015-195

Abudhabi kar_Nov 6_2015-196

Abudhabi kar_Nov 6_2015-197

Abudhabi kar_Nov 6_2015-198

Abudhabi kar_Nov 6_2015-199

Abudhabi kar_Nov 6_2015-200

Abudhabi kar_Nov 6_2015-201

ಶ್ರೀಮತಿ ಸಂದ್ಯಾ ಶೆಣೈ ಯವರಿಗೆ “ಮಾತಿನ ಮಲ್ಲಿ ” ಬಿರುದು ಸನ್ಮಾನ ಗೌರವ

ಹಾಸ್ಯ ಪ್ರಹಸನ ನೀಡಿದ ಶ್ರೀಮತಿ ಸಂದ್ಯಾ ಶೆಣೈ ಯವರಿಗೆ “ಮಾತಿನ ಮಲ್ಲಿ ” ಬಿರುದು ಸನ್ಮಾನ ಗೌರವ ಸಲ್ಲಿಸಲಾಯಿತು ಸನ್ಮಾನ ಪ್ರಕ್ರಿಯೆಯಲ್ಲಿ ಶ್ರೀಮತಿ ಶೀಲಾ ಸುಧೀರ್ ಶೆಟ್ಟಿ ಶಾಲು ಹೊದಿಸಿದರು, ಶ್ರೀಮತಿ ದಿವ್ಯಾ ಸ್ಮರಣಿಕೆ ನೀಡಿದರು, ಶ್ರೀ ರೋನಾಲ್ಡ್ ಪಿಂಟೊ ಸನ್ಮಾನ ಪತ್ರ ನೀಡಿ ಗೌರವಿಸಿದರು.

ಕಾರ್ಯಕ್ರಮ ನಿರೂಪಕ ಅವಿನಾಶ್ ಕಾಮತ್ ರವರಿಗೆ ಸನ್ಮಾನ ಗೌರವ

ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಡಲು ಉಡುಪಿಯಿಂದ ಆಗಮಿಸಿದ ಪ್ರಖ್ಯಾತ ಕಾರ್ಯಕ್ರಮ ನಿರೂಪಕರಾದ ಶ್ರೀ ಅವಿನಾಶ್ ಕಾಮತ್ ರವರನ್ನು ಶ್ರೀ ರೋನಾಲ್ಡ್ ಪಿಂಟೊ ಹಾಗೂ ಶ್ರೀಮತಿ ಶೀಲಾ ಸುಧೀರ್ ಶೆಟ್ಟಿ ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಪ್ರೇಕ್ಷಕರ ಮನ ಸೆಳೆದ ಮಕ್ಕಳ ಜಾನಪದ ನೃತ್ಯ ಸ್ಪರ್ಧೆ – ಕಿತ್ತೂರು ಚೆನ್ನಮ್ಮ ತಂಡ ಪ್ರಥಮ ಸ್ಥಾನ ತನ್ನದಾಗಿಸಿ ಕೊಂಡರು

ಅಬುಧಾಬಿ ಕರ್ನಾಟಕ ಸಂಘ ಪ್ರತಿಬಾರಿ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ವಯೋಮಿತಿಯರಿಗೆ ಜನಪದ ನೃತ್ಯ ಎರ್ಪಡಿಸಿತ್ತಿದ್ದು, ಈ ಬಾರಿಯೂ ಮಕ್ಕಳಿಗೆ ಏರ್ಪಡಿಸಲಾಗಿದ್ದು, ಯು.ಎ.ಇ. ಯ ವಿವಿಧ ಭಾಗಗಳಿಂದ ಐದು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಕರ್ನಾಟಕ ಐತಿಹಾಸಿಕ ವೀರ ಪುರುಷ, ವನಿತೆಯರ ನಾಮಾಂಕಿತದಲ್ಲಿ ಉತ್ಸಾಹಿ ಮಕ್ಕಳ ತಂಡಗಳು “ಮಯೂರ ವರ್ಮ (ಮೋನಲ್ ರಸ್ಕಿನಾ ನಿರ್ದೇಶನ) , ಮದಕರಿನಾಯಕ, ಒನಕೆ ಒಬ್ಬವ್ವ, ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ( ಶ್ರೀಮತಿ ಜಸ್ಮಿತಾ ವಿವೇಕ್ ನಿರ್ದೇಶನ)” ಕರ್ನಾಟಕ ಜನಪದ ಶ್ರೀಮಂತಿಕೆಯ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಸೆಳೆದರು. ತೀರ್ಪುಗಾರರಾಗಿ ಶ್ರೀ ಭವಾನಿ ಶಂಕರ್ ಶರ್ಮಾ, ಶ್ರೀಮತಿ ದಿವ್ಯಾ ಭವಾನಿ ಶಂಕರ್ ಶರ್ಮಾ, ಶ್ರೀಮತಿ ಸಪ್ನ ಕಿರಣ್ ಕಾರ್ಯ ನಿರ್ವಹಿಸಿದರು.

ಪ್ರಥಮ : ಕಿತ್ತೂರು ಚೆನ್ನಮ್ಮ ತಂಡ – ಶ್ರೀಮತಿ ಆಶಾ ನಾಯರ್ ನಿರ್ದೇಶದಲ್ಲಿ ಮಕ್ಕಳ ಜನಪದ ನೃತ್ಯ
ದ್ವಿತೀಯ : ಒನಕೆ ಒಬ್ಬವ್ವ ತಂಡ – ಶ್ರೀಮತಿ ವೀಣಾ ಮಲ್ಯ ನಿರ್ದೇಶದಲ್ಲಿ ಮಕ್ಕಳ ಜನಪದ ನೃತ್ಯ
ತೃತಿಯ : ಮದಕರಿ ನಾಯಕ ತಂಡ – ಶ್ರೀಮತಿ ಸುಪ್ರಿಯಾ ಕಿರಣ್ ರೈ ನಿರ್ದೇಶದಲ್ಲಿ ಮಕ್ಕಳ ಜನಪದ ನೃತ್ಯ

ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕರು ಶ್ರೀ ಮಚ್ಚೇಂದ್ರನಾಥ್ ಮಂಗಳದೇವಿ ಮಂಗಳೂರು ಮತ್ತು ಪುತ್ರಿ ಸಿಂಧೂ ಬೈರವಿ ಯವರಿಂದ ಸ್ಯಾಕ್ಸೋಫೋನ್ ವಾದನದ ಮೂಲಕ ಪ್ರೇಕ್ಷಕರನ್ನು ಮುದಗೊಳಿಸಿದರು.

ಕೊನೆಯಲ್ಲಿ ಜನಪದ ನೃತ್ಯ ವಿಜೇತರಿಗೆ ಬಹುಮಾನ ವಿತರಣೆ, ಲಕ್ಕಿಡಿಪ್ ಡ್ರಾ, ವಂದಾನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಗಿಯಿತು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ಅಪಾರ ಅನುಭವೀ ನಾಯಕತ್ವ, ಉತ್ಸಾಹಿ ಕಾರ್ಯಕಾರಿ ಸಮಿತಿಯ ವ್ಯವಸ್ಥಿತ ಪೂರ್ವಭಾವಿ ತಯಾರಿ ಅಬುಧಾಬಿಯಲ್ಲಿ ನೆಲೆಸಿರುವ ಅಭಿಮಾನಿ ಕನ್ನಡಿಗರ ಸಮ್ಮುಖದಲ್ಲಿ ಅಪ್ಪಟ ಕನ್ನಡ ಕಾರ್ಯಕ್ರಮ ದಾಖಲೆಯನ್ನು ಸೃಷ್ಟಿಸಿತ್ತು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

Write A Comment