ಗಲ್ಫ್

ಬಹ್ರೈನ್ ನಲ್ಲಿ ಮೊಳಗಿದ ಚ೦ಡೆ, ಮದ್ದಳೆ

Pinterest LinkedIn Tumblr

Behrain yakshagana_sept 30_2015-006

ಕನ್ನಡ ಸ೦ಘ ಬಹ್ರೈನ್ ಸಾದರಪಡಿಸಿದ “ಯಕ್ಷ ವೈಭವ – 2015” ಯಶಸ್ವೀ ಕಾರ್ಯಕ್ರಮವಾಗಿ ಮೂಡಿ ಬ೦ತು. ಕಳೆದ ಎರಡು ದಶಕಕ್ಕೂ ಮಿಗಿಲಾಗಿ ಸ೦ಘವು ದ್ವೀಪದಲ್ಲಿ ಕರ್ನಾಟಕದ ಗ೦ಡು ಕಲೆಯೆ೦ದೇ ಪ್ರಸಿದ್ಧವಾದ ಯಕ್ಷಗಾನವನ್ನು ಆಯೋಜಿಸುತ್ತಾ ಬ೦ದಿದ್ದು, ಈ ವರ್ಷ ಸೆಪ್ಟ೦ಬರ್ ಹನ್ನೊ೦ದರ೦ದು ಮರೀನಾದ ಕಲ್ಚರಲ್ ಹಾಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ೦ಘದ ಸುಮಾರು ಮೂವತ್ತು ಕಲಾವಿದರೊ೦ದಿಗೆ ಕರ್ನಾಟಕದ ಏಳು ಹೆಸರುವಾಸಿ ಕಲಾವಿದರು ಅತಿಥಿಗಳಾಗಿ ಭಾಗವಹಿಸಿದ್ದರು. ತೆ೦ಕು – ಬಡಗು ಉಭಯ ತಿಟ್ಟಿನ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದರು ’ಕನಕಾ೦ಗಿ ಕಲ್ಯಾಣ’ ಮತ್ತು ’ಚಿತ್ರಾಕ್ಷಿ ಕಲ್ಯಾಣ’ ದ ಕಥಾಭಾಗವನ್ನು ಆಡಿ ತೋರಿಸಿದರು. ಯಕ್ಷಗಾನಕ್ಕೆ೦ದೇ ವಿಶೇಷವಾದ ರ೦ಗಸ್ಥಳವನ್ನು ನಿರ್ಮಿಸಲಾಗಿತ್ತು. ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರ್ ಮತ್ತು ಇತರರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.

Behrain yakshagana_sept 30_2015-001

Behrain yakshagana_sept 30_2015-002

Behrain yakshagana_sept 30_2015-003

Behrain yakshagana_sept 30_2015-004

Behrain yakshagana_sept 30_2015-005

Behrain yakshagana_sept 30_2015-007

Behrain yakshagana_sept 30_2015-008

Behrain yakshagana_sept 30_2015-009

Behrain yakshagana_sept 30_2015-010

ಈನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹ್ರೈನ್ ನ ಭಾರತೀಯ ದೂತಾವಾಸದ ಶ್ರೀ ಬಿ. ಎಸ್. ಬಿಶ್ತ್ ಮುಖ್ಯ ಅತಿಥಿಯಾಗಿಯೂ, ಮತ್ತು ಪ್ರಸಿದ್ಧ ಮೇಳಗಳ ಸ೦ಘಟಕರೂ ಸ೦ಚಾಲಕರೂ ಆದ ಶ್ರೀ ಕಿಶನ್ ಹೆಗ್ಡೆ ಬೈಲೂರು ಗೌರವಾನ್ವಿತ ಅತಿಥಿಗಳಾಗಿಯೂ, ಸೌದಿ ಅರೇಬಿಯಾದ ಹವ್ಯಾಸಿ ಕಲಾವಿದರ ತ೦ಡದ ಹಿರಿಯ ಸದಸ್ಯ ಶ್ರೀ ರವಿ ಕರ್ಕೇರಾ, ಸ೦ಘದ ಅಧ್ಯಕ್ಶ ಶ್ರೀ ರಾಜೇಶ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದು ಮಾತನಾಡಿದರು. ಸ೦ಘದ ಉಪಾಧ್ಯಕ್ಷರಾದ ಶ್ರೀ ಆರ್. ಎಮ್. ಪಾಟೀಲ್, ಮಾಸಾದ ಅಧ್ಯಕ್ಷರಾದ ಶ್ರೀ ನರೇ೦ದ್ರ ಶೆಟ್ಟಿ, ಮನರ೦ಜನಾ ಕಾರ್ಯದರ್ಶಿ ಶ್ರೀ ಸತೀಶ್ ಬಜಾಲ್ ಮೊದಲಾದವರೂ ವೇದಿಕೆಯಲ್ಲಿ ಉಪಸ್ತಿತರಿದ್ದರು. ಇದೇ ಸ೦ದರ್ಭದಲ್ಲಿ ಶ್ರೀ ಕಿಶನ್ ಹೆಗ್ಡೆ ದ೦ಪತಿಯನ್ನೂ ಮತ್ತು ಕನ್ನಡ ಸ೦ಘದ ಶ್ರೀ ರಮೇಶ್ ಮ೦ಜೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಅತಿಥಿ ಕಲಾವಿದರುಗಳಾದ ಶ್ರೀ ರಾಮಕೃಷ್ಣ ಮಯ್ಯ, ಶ್ರೀ ಎ. ಪಿ. ಫಾಟಕ್, ಶ್ರೀ ಬಾಲಕೃಷ್ಣ ಮಣಿಯಾಣಿ, ಶ್ರೀ ದೀಪಕ್ ಪೇಜಾವರ್, ಶ್ರೀ ಕಾರ್ತಿಕ್ ಚಿಟ್ಟಾಣಿ, ಶ್ರೀ ಮಾಧವ್ ಪಾಟಾಳಿಯವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

Behrain yakshagana_sept 30_2015-011

Behrain yakshagana_sept 30_2015-012

Behrain yakshagana_sept 30_2015-013

Behrain yakshagana_sept 30_2015-014

Behrain yakshagana_sept 30_2015-015

Behrain yakshagana_sept 30_2015-016

Behrain yakshagana_sept 30_2015-017

Behrain yakshagana_sept 30_2015-018

Behrain yakshagana_sept 30_2015-019

Behrain yakshagana_sept 30_2015-020

ಯಕ್ಷಗಾನ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಾಮಕೃಷ್ಣ ಮಯ್ಯ, ಸಿರಿಬಾಗಿಲು (ಅತಿಥಿ ಕಲಾವಿದರು), ಮದ್ದಲೆಯಲ್ಲಿ ಶ್ರೀ ಅನ೦ತ ಪದ್ಮನಾಭ ಫಾಟಕ್, (ಅತಿಥಿ ಕಲಾವಿದರು) ಮತ್ತು ಶ್ರೀ ಧನ೦ಜಯ ಕಿನ್ನಿಗೋಳಿ, ಚೆ೦ಡೆಯಲ್ಲಿ ಶ್ರೀ ಶ್ರೀನಿವಾಸ ಪ್ರಭು (ಅತಿಥಿ ಕಲಾವಿದರು), ಚಕ್ರತಾಳದಲ್ಲಿ ಶ್ರೀ ಶ್ರೀಧರ ಎಡನೀರು ಮಿ೦ಚಿದರು.

Behrain yakshagana_sept 30_2015-021

Behrain yakshagana_sept 30_2015-022

Behrain yakshagana_sept 30_2015-023

Behrain yakshagana_sept 30_2015-024

Behrain yakshagana_sept 30_2015-025

ತೆ೦ಕು ತಿಟ್ಟಿನ ಕನಕಾ೦ಗಿ ಕಲ್ಯಾಣದಲ್ಲಿ ಕನಕಾ೦ಗಿಯಾಗಿ ಶ್ರೀ ದೀಪಕ್ ರಾವ್ ಪೇಜಾವರ (ಅತಿಥಿ ಕಲಾವಿದರು), ವ್ಯಾಪಾರಿ, ಪುರೋಹಿತರು ಮತ್ತು ಸಖಿಯಾಗಿ ಶ್ರೀ ಬಾಲಕೃಷ್ಣ ಮಣಿಯಾಣಿ ಮವ್ವಾರು (ಅತಿಥಿ ಕಲಾವಿದರು), ಘಟೋತ್ಕಜನಾಗಿ ಶ್ರೀ ಮಾಧವ ಪಾಟಾಳಿ ಎಡನೀರು (ಅತಿಥಿ ಕಲಾವಿದರು), ಕೃಷ್ಣನಾಗಿ ಶ್ರೀ ಶ್ರೀನಿವಾಸ ಭಟ್ ಕಳವಾರು, ಅಭಿಮನ್ಯುವಾಗಿ ಶ್ರೀ ಮೋಹನ್ ಎಡನೀರು, ಬಲರಾಮನಾಗಿ ಶ್ರೀ ರಾ೦ ಪ್ರಸಾದ್ ಅಮ್ಮೆನಡ್ಕ, ಸಖನಾಗಿ ಶ್ರೀ ದೂಮಣ್ಣ ರೈ, ಕೌರವನಾಗಿ ಶ್ರೀ ರಾಜೇಶ್ ಮಾವಿನಕಟ್ಟೆ, ದುಶ್ಯಾಸನನಾಗಿ ಶ್ರೀ ಸತೀಶ್ ಕೊಲ್ಯ, ಸುಭದ್ರೆಯಾಗಿ ಶ್ರೀಮತಿ ಶೋಭಾ ರಾ೦ ಪ್ರಸಾದ್, ಕರ್ಣನಾಗಿ ಶ್ರೀ ಜಯಪ್ರಕಾಶ್ ಪೂಜಾರಿ ಪೆರ್ಮುದೆ, ಪುರೋಹಿತರಾಗಿ ಶ್ರೀ ಜಗದೀಶ್ ಜೆಪ್ಪು, ಸಖಿಯಾಗಿ ಶ್ರೀಮತಿ ಪೂರ್ಣಿಮಾ ಜಗದೀಶ್, ದೂತನಾಗಿ ಶ್ರೀ ಮೋಹನ್ ದಾಸ್ ರೈ, ಲಕ್ಷಣನಾಗಿ ಶ್ರೀ ದಿವ್ಯರಾಜ ರೈ, ವಿಕರ್ಣನಾಗಿ ಶ್ರೀ ಸ೦ತೋಷ್ ಆಚಾರ್ಯ, ಸಖಿಯಾಗಿ ಶ್ರೀ ಹೇಮ೦ತ್ ಸಾಲಿಯಾನ್ ಪ್ರೇಕ್ಷಕರನ್ನು ರ೦ಜಿಸಿದರು.

Behrain yakshagana_sept 30_2015-026

Behrain yakshagana_sept 30_2015-027

Behrain yakshagana_sept 30_2015-028

Behrain yakshagana_sept 30_2015-029

Behrain yakshagana_sept 30_2015-030

ಬಡಗುತಿಟ್ಟಿನ ಚಿತ್ರಾಕ್ಷಿ ಕಲ್ಯಾಣದಲ್ಲಿರುದ್ರಕೋಪನಾಗಿ ಶ್ರೀ ಕಾರ್ತಿಕ್ ಚಿಟ್ಟಾಣಿ (ಅತಿಥಿ ಕಲಾವಿದರು), ಚಿತ್ರಾಕ್ಷಿಯಾಗಿ ಶ್ರೀ ದೀಪಕ್ ರಾವ್ ಪೇಜಾವರ (ಅತಿಥಿ ಕಲಾವಿದರು), ರಕ್ತಜ೦ಘನಾಗಿ ಶ್ರೀ ಅರುಣ್ ಐರೋಡಿ, ರಕ್ತಕೇಶಿಯಾಗಿ ಶ್ರೀ ಭಾಸ್ಕರ ಆಚಾರ್ಯ, ಅಜ್ಜಿಯಾಗಿ ಶ್ರೀ ಕಿರಣ್ ಉಪಾಧ್ಯಾಯ್, ನಾರದನಾಗಿ ಶ್ರೀ ಎಚ್. ಕೆ. ಪೈ, ಸತ್ಯಶೀಲೆಯಾಗಿ ಶ್ರೀ ಪ್ರವೀಣ್ ಶೆಟ್ಟಿ ಕಿನ್ನಿಗೋಳಿ, ವನಪಾಲಕರಾಗಿ ಶ್ರೀ ಸ೦ಜೀವ ಶೆಟ್ಟಿ ಮತ್ತು ಶ್ರೀ ಅಖ್ತರ್ ಅಹ್ಮದ್, ಸಖಿಯಾಗಿ ಲವಣಕುಮಾರ್ ಆಚಾರ್ಯ ನೆರೆದವರನ್ನು ರ೦ಜಿಸಿದರು.

Behrain yakshagana_sept 30_2015-031

Behrain yakshagana_sept 30_2015-032

Behrain yakshagana_sept 30_2015-033

ಶ್ರೀ ಕರುಣಾಕರ ಪದ್ಮಶಾಲಿ, ಶ್ರೀ ರಾಜೇಶ್ ಶೆಟ್ಟಿಗಾರ್, ಶ್ರೀ ಅಶೋಕ್ ಕಟೀಲ್, ಶ್ರೀ ಸಿ. ಎಲ್. ಮೆ೦ಡನ್, ಶ್ರೀ ಸತೀಶ್ ಮಲ್ಪೆ, ಶ್ರೀ ಸುರೇಶ್ ಚೋಮನಹಳ್ಳಿ, ಶ್ರೀ ವರುಣ್ ಹೆಗ್ಡೆ, ಶ್ರೀ ರಮೇಶ್ ಮ೦ಡಿಯೂರು, ಶ್ರೀ ಜಯಪ್ರಕಾಶ್ ಕೊಲ್ಲತ್ತಡ್ಕ, ಶ್ರೀ ಅರವಿ೦ದಾಕ್ಷ ಎಡನೀರು, ಶ್ರೀ ಸುನೀಲ್ ಕದ್ರಿ, ಶ್ರೀ ರಮೇಶ್ ಕಳರಿ, ಶ್ರೀ ರವಿ ಪೆರುವಾಯಿ ಮೊದಲಾದವರು ರ೦ಗ ಸಜ್ಜಿಕೆ ಮತ್ತು ಇತರ ವಿಭಾಗಗಳಲ್ಲಿ ಸಹಕರಿಸಿದರು.

Write A Comment