ಗಲ್ಫ್

ಯಮನ್‌ನಲ್ಲಿ ಹುತಾತ್ಮರಾದ ಯುಎಇ ಯೋಧರಿಗೆ ಶ್ರದ್ಧಾಂಜಲಿ: 6 ದಿನಗಳ ವರೆಗೆ ಯುಎಇಯ ಎಫ್‌ಎಂಗಳ ಕಾರ್ಯಕ್ರಮ ಸ್ಥಗಿತ

Pinterest LinkedIn Tumblr

fm

ದುಬೈ, ಸೆ.9: ಕಳೆದ ಶುಕ್ರವಾರ ಯಮನ್‌ನಲ್ಲಿ ಹುತಾತ್ಮರಾದ ಯುಎಇ ಯೋಧರಿಗೆ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಶನಿವಾರದಿಂದ ಗುರುವಾರ(ನಾಳೆ)ದ ವರೆಗೆ ಯುಎಇಯಲ್ಲಿರುವ ಎಲ್ಲ ರೇಡಿಯೋ(ಎಫ್‌ಎಂ) ಸ್ಟೇಷನ್‌ಗಳು ಶೋಕಾಚಾರಣೆ ಆರಂಭಿಸಿವೆ.

ಯುಎಇಯಲ್ಲಿ ಅರಬ್ ಭಾಷೆಯ ಜೊತೆಗೆ ಭಾರತೀಯ ಹಾಗೂ ಪಾಕಿಸ್ತಾನದ ಹಿಂದಿ, ಇಂಗ್ಲಿಷ್ ಎಫ್‌ಎಂಗಳು ಕಾರ್ಯಚರಿಸುತ್ತಿದ್ದು, ಈ ಎಲ್ಲ ಎಫ್‌ಎಂಗಳು ಕೇವಲ ಶೋಕಗಾನವನ್ನು ಬಿತ್ತರಿಸುತ್ತಿವೆ. ಕಳೆದ ಶುಕ್ರವಾರದಂದು ಯಮನ್‌ನಲ್ಲಿ ಸೌದಿ ಅರೆಬಿಯಾ ನೇತೃತ್ವದ ಆಪರೇಷನ್ ರೆಸ್ಟೋರ್ ಹೋಪ್ ಸೈನಿಕ ಕಾರ್ಯಾಚರಣೆಯ ವೇಳೆ ಕ್ಷಿಪಣಿ ದಾಳಿಗೆ ಸಿಲುಕಿ ಯುಎಇಯ 45 ಸೈನಿಕರು ಸಾವನ್ನಪ್ಪಿದ್ದರು.

ಸಾವನ್ನಪ್ಪಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕಾಗಿ ಎಫ್‌ಎಂಗಳು ತಮ್ಮ ಮನೋರಂಜನಾ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದ್ದು, ಕೇವಲ ಶೋಕ ಗಾನವನ್ನಷ್ಟೇ ಬಿತ್ತರಿಸುತ್ತಿವೆ. ನಾಳೆಯ ವರೆಗೆ ಎಫ್‌ಎಂಗಳು ತಮ್ಮ ಮನೋರಂಜನಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿವೆ.

Write A Comment