ದುಬೈ, ಆ.5: ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್-2015 ಕಾರ್ಯಕ್ರಮವು ಆ.6 ಮತ್ತು 7ರಂದು ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನ ಶೇಖ್ ರಾಶಿದ್ ಹಾಲ್‌ನಲ್ಲಿ ನಡೆಯಲಿದೆ.
ಆಗಸ್ಟ್ 6ರಂದು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಸಂಬಂಧಿಸಿದಂತೆ ಹಾಗೂ 7ರಂದು ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಸಂಬಂಧಿಸಿದಂತೆ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ.
ಸಮಾರಂಭಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಹಾಗೂ ಬಾಲಿವುಡ್‌ನ ಸುಮಾರು 300ಕ್ಕೂ ಅಧಿಕ ಮಂದಿ ನಟ-ನಟಿಯರು ಭಾಗವಹಿಸಲಿದ್ದು, ಅದ್ದೂರಿ ಸಮಾರಂಭದಲ್ಲಿ ವಿವಿಧ ರೀತಿಯ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಸಿನಿಮಾ ನಟ-ನಟಿಯರಾದ ಅಂಬರೀಷ್, ಕ್ಯಾತ್ರೀನ್ ತೆರೆಸಾ, ಎರಿಕಾ ಫೆರ್ನಾಂಡಿಸ್, ಕೀರ್ತಿ ಖರ್ಬಂದ, ಪವನ್ ಒಡೆಯಾರ್, ಪೂಜಾ ಹೆಗ್ಗೆ, ರಾಧಿಕಾ ಪಂಡಿತ್, ರೆಜಿನಾ, ರಾಕ್‌ಲೈನ್ ವೆಂಕಟೇಶ್, ಸಂಜನಾ, ಸತೀಶ್ ನೀನಾಸಂ, ಶರ್ಮೀಳಾ ಮಾಂದ್ರೆ, ಶಿಲ್ಪಿ ಶರ್ಮಾ, ಸುಮಲತಾ, ಯಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಬಾಲಿವುಡ್ ನಟ-ನಟಿಯಲಾದ ಸುಹೈಲ್ ಖಾನ್, ಮಲೈಕಾ, ಅದಿತಿ ರಾಯ್ ಹೈದರಿ, ಸೋನು ಸೂದ್, ನೀಲ್ ನಿತಿನ್ ಮುಖೇಶ್, ಇಶಾ ಗುಪ್ತಾ ಸೇರಿದಂತೆ ಹಲವಾರು ಮಂದಿ ಭಾಗವಹಿಸಲಿದ್ದಾರೆ.