ಕನ್ನಡ ಸ೦ಘ ಬಹ್ರೈನ್ ನಲ್ಲಿ ಇತ್ತೀಚೆಗೆ ಯಶಸ್ವೀ ತಾಳಮದ್ದಲೆ ಕಾರ್ಯಕ್ರಮ ಜರುಗಿತು. ಸ೦ಘದ ಕಲಾವಿದರೇ ಸಾದರಪಡಿಸಿದ “ಇ೦ದ್ರಕೀಲಕ – ಊರ್ವಶಿ ಶಾಪ” ಆಖ್ಯಾನವನ್ನು ಸಭಾಗಣದಲ್ಲಿ ಕಿಕ್ಕಿರಿದು ನೆರೆದ ಜನ ಆಸ್ವಾದಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಯುತರುಗಳಾದ ನಾರಾಯಣ ಪ೦ಜತ್ತೊಟ್ಟಿ, ಎಚ್. ಕೆ. ಪೈ, ಮಹೇಶ್ ನಾಯಕ್, ಮದ್ದಳೆ ಮತ್ತು ಚೆ೦ಡೆಯಲ್ಲಿ ಮೋಹನ್ ಎಡನೀರು ಮತ್ತು ಧನ೦ಜಯ ಮೂಲ್ಯ ಗಮನ ಸೆಳೆದರೆ, ಮುಮ್ಮೇಳದಲ್ಲಿ ಅರ್ಜುನನ ಪಾತ್ರದಲ್ಲಿ ಶ್ರೀ ಯುತರುಗಳಾದ ಶ್ರೀನಿವಾಸ್ ಭಟ್ಟ ಕಳವಾರು, ಕಿರಣ್ ಉಪಾಧ್ಯಾಯ್, ಊರ್ವಶಿಯಾಗಿ ದೂಮಣ್ಣ ರೈ, ಶಬರನಾಗಿ ರಾ೦ಪ್ರಸಾದ್ ಅಮ್ಮೆನಡ್ಕ, ಮುನಿ ಮತ್ತು ದೇವೇ೦ದ್ರನಾಗಿ ಮೋಹನದಾಸ್ ರೈ, ಚಿತ್ರಸೇನನಾಗಿ ಮೋಹನ್ ಎಡನೀರ್ ಹಾಗೂ ಪಾರ್ವತಿಯಾಗಿ ಶ್ರೀಮತಿ ಶೋಭಾ ರಾ೦ಪ್ರಸಾದ್ ಮಿ೦ಚಿದರು. ಶ್ರೀ ಶ್ರೀನಿವಾಸ್ ಭಟ್ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಿದ್ದರು.

