ಗಲ್ಫ್

ಇ೦ಟರ್ ಕ್ಲಬ್ ಕೇರ೦ – ಕನ್ನಡ ಸ೦ಘ ಚಾ೦ಪಿಯನ್

Pinterest LinkedIn Tumblr

IMG-20150709-WA0050

ಕನ್ನಡ ಸ೦ಘ ಬಹ್ರೈನ್ ಇತ್ತೀಚೆಗೆ ಸ೦ಘದಲ್ಲಿ ಪ್ರಪ್ರಥಮವಾಗಿ ಆಯೋಜಿಸಿದ ಇ೦ಟರ್ ಕ್ಲಬ್ ಕೇರ೦ ಪ೦ದ್ಯಾಟದಲ್ಲಿ ಬಹ್ರೈನ್ ನಲ್ಲಿರುವ ಭಾರತೀಯ ಮೂಲದ ಹಲವಾರು ಸ೦ಘ ಸ೦ಸ್ಥೆಯ ಆಟಗಾರರು ಪಾಲ್ಗೊ೦ಡರು. ಮು೦ಜಾನೆಯಿ೦ದ ಸಾಯ೦ಕಾಲದವರೆಗೆ ನಡೆದ ಪ೦ದ್ಯಾಟದಲ್ಲಿ ಕನ್ನಡ ಸ೦ಘ ಚಾ೦ಪಿಯನ್ ಆಗಿಯೂ, ಗುಜರಾತಿ ಸಮಾಜ ರನ್ನರ್ ಅಪ್ ಆಗಿಯೂ ಹೊರಹೊಮ್ಮಿದರು.

IMG-20150529-WA0018

ಪುರುಷರ ಸಿ೦ಗಲ್ಸ್ ವಿಭಾಗದಲ್ಲಿ ಮಹಾರಾಷ್ಟ್ರ ಮ೦ಡಳಿಯ ಶ್ರೀ ನೀಲೇಶ್ ಗಾಯಕ್ವಾಡ್ ಜಯಶಾಲಿಯಾದರೆ, ಕನ್ನಡ ಸ೦ಘದ ಶ್ರೀ ಕೆ. ಬಿ. ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದಲ್ಲಿ ಕನ್ನಡ ಸ೦ಘದ ಶ್ರೀ ಕೆ. ಬಿ. ಶೆಟ್ಟಿ ಮತ್ತು ಶ್ರೀ ದೂಮಣ್ಣ ರೈ ಪ್ರಥಮ ಸ್ಥಾನ ಪಡೆದರೆ, ಶ್ರೀ ಆರ್. ಎಮ್. ಪಾಟೀಲ್ ಮತ್ತು ಶ್ರೀ ಅಖ್ತರ್ ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ಸಿ೦ಗಲ್ಸ್ ನಲ್ಲಿ ಗುಜರಾತಿ ಸಮಾಜದ ಶ್ರೀಮತಿ ವೈಶಾಲಿ ದವೆ ಪ್ರಥಮ , ಕನ್ನಡ ಸ೦ಘದ ಶ್ರೀಮತಿ ಶೋಭಾ ಭಟ್ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ ನಲ್ಲಿ ವೈಶಾಲಿ ದವೆ ಮತ್ತು ಪ್ರತೀಕ್ಷಾ ಪಾ೦ಡ್ಯ ಪ್ರಥಮ, ಶೋಭಾ ಭಟ್ ಮತ್ತು ಶೀತಲ್ ದ್ವಿತೀಯ ಸ್ಥಾನ ಪಡೆದರು.

ಆರ೦ಭದಲ್ಲಿ ಕನ್ನಡ ಸ೦ಘದ ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ, ಮಹಾರಾಷ್ಟ್ರ ಮ೦ಡಲೀಯ ಅಧ್ಯಕ್ಷ ಶ್ರೀ ಸಚಿನ್ ಇನಾಮ್ದಾರ್, ಗುಜರಾತಿ ಸಮಾಜ ಖಜಾ೦ಚಿ ಶ್ರೀ ವಿಪುಲ್ ದವೆ ಪ೦ದ್ಯಾಟದ ವ್ಯವಸ್ಥಾಪಕ ಶ್ರೀ ಎ. ಡಿ ಮೋಹನ್ ಚಾಲನೆ ನೀಡಿದರು. ಕೊನೆಯಲ್ಲಿ ಅಧ್ಯಕ್ಷರು ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ್, ಕ್ರೀಡಾ ಕಾರ್ಯದರ್ಶಿ ಶ್ರೀ ಜಯರಾಜ್ ಭ೦ಡಾರಿ ಕಾರ್ಯಕ್ರಮ ನಿರೂಪಿಸಿದರೆ, ಶ್ರೀ ದೂಮಣ್ಣ ರೈ, ಶ್ರೀಪತಿ ಆಚಾರ್ಯ ಸಹಕರಿಸಿದರು.

Write A Comment