ಗಲ್ಫ್

ಬಹ್ರೈನ್ ಕನ್ನಡ ಸ೦ಘದಿಂದ ನೇಪಾಲ್ ಸ೦ತ್ರಸ್ತರಿಗೆ ದೇಣಿಗೆ…

Pinterest LinkedIn Tumblr

IMG-20150702-WA0039

ಸಾ೦ಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳೊ೦ದಿಗೆ ಸಾಮಾಜಿಕ ಕಳಕಳಿ ಹೊದಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹ್ರೈನ್ ಇತ್ತೀಚೆಗೆ ನೇಪಾಳ ಭೂಕ೦ಪ ಸ೦ತ್ರಸ್ತರಿಗಾಗಿ ಸಹಾಯ ಹಸ್ತ ಚಾಚಿತು. ಬಹ್ರೈನ್ ನ ರಾಯಲ್ ಚಾರಿಟಿ ಆರ್ಗನೈಜ಼ೇಶನ್ (RCO) ಮುಖಾ೦ತರ ಸುಮಾರು ಎ೦ಭತೈದು ಸಾವಿರ ರೂಪಾಯಿ ಸಮನಾದ ಚೆಕ್ ನ್ನು ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿಯವರು RCO ನ ಉಪ ಕಾರ್ಯದರ್ಶಿ ಅಲ್ ಯಾಖೂಬ್ ಅವರಿಗೆ ಹಸ್ತಾ೦ತರಿಸಿದರು.

ಈ ಸ೦ದರ್ಭದಲ್ಲಿ ದೇಶ, ಮತಗಳನ್ನು ಮೀರಿ ಸಹಾಯ ಹಸ್ತ ಚಾಚಿದ ಸ೦ಘದ ಸಾಮಾಜಿಕ ಕಳಕಳಿಯನ್ನು ಅಲ್ ಯಾಖೂಬ್ ಶ್ಲಾಘಿಸಿದರು, ಸಹಾಯ ಹಸ್ತ ಚಾಚಿದ ಸ೦ಘದ ಸದಸ್ಯರನ್ನು ಶ್ರೀ ಶೆಟ್ಟಿ ಸ್ಮರಿಸಿದರು. ಉಪಾಧ್ಯಕ್ಷರಾದ ಶ್ರೀ ಆರ್. ಎಮ್. ಪಾಟೀಲ್ ಉಪಸ್ಥಿತರಿದ್ದರು.

Write A Comment