ಗಲ್ಫ್

ದುಬೈ ಯಕ್ಷಮಿತ್ರರ ‘ಮಣಿಕಂಠ ಮಹಿಮೆ- ರತಿಕಲ್ಯಾಣ’ ಯಕ್ಷಗಾನಕ್ಕಾಗಿಮಿಸಿದ ಕಲಾವಿದರಿಗೆ ಅದ್ದೂರಿಯ ಸ್ವಾಗತ

Pinterest LinkedIn Tumblr

Yaksha mitraru_June 8_2015-005

ದುಬೈ, ಜೂ.8: ದುಬೈ ಯಕ್ಷಮಿತ್ರರು ಆಯೋಜಿಸಿರುವ ‘ಮಣಿಕಂಠ ಮಹಿಮೆ- ರತಿಕಲ್ಯಾಣ’ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗಿದ್ದು, ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಕಲಾವಿದರ ತಂಡ ದುಬೈಗೆ ಆಗಮಿಸಿದೆ.

ಯಕ್ಷಮಿತ್ರರು ದುಬೈ ಇವರ 12ನೆ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜೂ.12ರ ಶುಕ್ರವಾರದಂದು ಸಂಜೆ 5 ಗಂಟೆಗೆ ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Yaksha mitraru_June 8_2015-001

Yaksha mitraru_June 8_2015-002

Yaksha mitraru_June 8_2015-003

Yaksha mitraru_June 8_2015-004

Yaksha mitraru_June 8_2015-006

ಶನಿವಾರದಂದು ರಾತ್ರಿ 7ಕ್ಕೆ ದುಬೈಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಲಾವಿದರನ್ನು ಯಕ್ಷಮಿತ್ರರು ದುಬೈಯ ಚಿದಾನಂದ ಪೂಜಾರಿ ಸೇರಿದಂತೆ ಇನ್ನಿತರರು ಅದ್ದೂರಿಯಾಗಿ ಸ್ವಾಗತಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಚೆಂಡೆಯಲ್ಲಿ ಚೈತನ್ಯ ಪದ್ಯಾಣ, ವಿಶೇಷ ವೇಷ ವೈವಿದ್ಯಗಾರರಾಗಿ ಅಕ್ಷಯ್ ಕುಮಾರ್ ಹಾಗೂ ಲಕ್ಷ್ಮಣ ಕುಮಾರ್ ಮರಕಡ, ವೇಷ ಭೂಷಣ ಮತ್ತು ವರ್ಣಾಲಂಕಾರರಾಗಿ ಗಂಗಾಧರ ಡಿ.ಶೆಟ್ಟಿಗಾರ್‌ರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಯಕ್ಷಗಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು-0506953041, 0507083537, 0507981323.

Write A Comment