ಗಲ್ಫ್

ಯು.ಎ.ಇ.ಯ ಪ್ರತಿಷ್ಠಿತ ಸಿಂಫೊನಿ ಮ್ಯೂಸಿಕ್ ಶಾಲೆ  19ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ

Pinterest LinkedIn Tumblr

Symphony Inv 2

ಅರಬ್ ಸಂಯುಕ್ತ ಸಂಸ್ಥಾನದ ಅಜ್ಮಾನ್ ನಲ್ಲಿ ಕಳೆದ ಎರಡು ದಶಕದಿಂದ ಕನ್ನಡಿಗ ದಂಪತಿಗಳಾದ ಶ್ಯಾಂ ಸುಂದರ್ ರಾವ್, ಸುಜಾತ ಎಸ್. ರಾವ್ “ಸಿಂಫೊನಿ ಮ್ಯೂಸಿಕ್ ಇನ್ಸಿಟ್ಯೂಟ್” ಕಲಾ ತರಭೇತಿ ಸಂಸ್ಥೆಯನ್ನು ಸ್ಥಾಪಿಸಿದರು. ಇದೀಗ ಈ ಕಲಾ ಶಾಲೆ ಅಜ್ಮಾನ್ ಮತ್ತು ಶಾರ್ಜಾದಲ್ಲಿ ಪ್ರತಿ ವರ್ಷ ಸಹಸ್ರ ಸಂಖ್ಯೆಯಲ್ಲಿ ಕಲಾ ಪ್ರತಿಭೆಗಳು ಪ್ರೌಢಿಮೆಯನ್ನು ಪ್ರದರ್ಶಿಸಿ ಕೊಂಡು ಬರುತ್ತಿದೆ.

1996 ರಲ್ಲಿ ಪ್ರಾರಂಭವಾದ ಸಿಂಫೊನಿ ಮ್ಯೂಸಿಕ್ ಇನಿಸ್ಟಿಟ್ಯೂಟ್ ಇದೀಗ ತನ್ನ 19ನೇ ವರ್ಷದ ಸಂಭ್ರಮಾಚರಣೆಯನ್ನು 2015 ಜೂನ್ 6ನೇ ತಾರೀಕು ಶನಿವಾರ ಮಧ್ಯಾಹ್ನ 2.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಸಭಾಂಗಣದಲ್ಲಿ ಆಚರಿಸಲಿದೆ.

Shamsunder Rao

Sujatha S Rao

Symphony 2

Symphony 3

Symphony 4

Symphony 5

ಶ್ಯಾಂ ಸುಂದರ್ ರಾವ್ ಎರಡು ದಶಕಗಳ ಹಿಂದೆ ಈ ನಾಡಿನಲ್ಲಿ ಕಲಾ ಶಾಲೆ ಇಲ್ಲದಿರುವುದನ್ನು ಮನಗಂಡು, ಸಾಂಪ್ರದಾಯಿಕ ಕಲೆಗಳನ್ನು ಮಕ್ಕಳಲ್ಲಿ ಮನವರಿಕೆ ಮಾಡಿಕೊಡುವ ಸಲುವಾಗಿ, ಕಲಾಸಕ್ತಿ ಇರುವ ಮಕ್ಕಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಕಲಿಸುವ ನಿರ್ಧಾರ ತೆಗೆದುಕೊಂಡು ಪ್ರಾರಂಭಿಸಿದ ಕಲಾ ಸಂಸ್ಥೆ ತನ್ನ ಯಶಸ್ವೀ ಪಯಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅತಿ ಉನ್ನತ ಮಟ್ಟದ ಪ್ರತಿಷ್ಠಿತ ಕಲಾ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಕಲಾ ಸಂಸ್ಥೆಯ ವಾರ್ಷಿಕೋತ್ಸವವೆಂದರೆ, ಕಲಾ ಸಂಸ್ಥೆಯ ಎಲ್ಲರಿಗೂ ಬಹಳ ದೊಡ್ಡ ಹಬ್ಬ. ಕಲಾ ತಪೋಭೂಮಿಯಲ್ಲಿ ತರಭೇತಿ ಪಡೆದ ತಮ್ಮ ಸಾಧನೆಯ ಪ್ರದರ್ಶನ, ಭವ್ಯ ವೇದಿಕೆಯ ಮೇಲೆ ತಮ್ಮ ತಮ್ಮ ಮಕ್ಕಳ, ಬಂಧು ಬಳಗದವರ ಪ್ರತಿಭೆಯನ್ನು ವೀಕ್ಷಿಸುವ ಆತುರ, ಕಾತರ. ನೃತ್ಯ, ಚಿತ್ರ,ಶಿಲ್ಪ ಕಲೆಯನ್ನು ಎಳೆಯ ವಯಸಿನಲ್ಲೇ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಕಲಾಭಿಮಾನದ ಕಲಾವಿದರನ್ನಾಗಿ ರೂಪುಗೊಳ್ಳಿಸುವ ತಂದೆ ತಾಯಿಗಳು ಉತ್ತೇಜನ ನೀಡಿದಕ್ಕೆ ಸಾಕ್ಷಿಯಾಗಿ ಸಭೆಯಲ್ಲಿ ಕಳೆ ತುಂಬಿರುತ್ತದೆ.

Symphony 6

Symphony 7

Symphony 8

Symphony 9

Symphony 10

ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಗೀತಾ, ಜತಿಸ್ವರ, ವರ್ಣ, ಕೀರ್ತನೆ, ತಿಲ್ಲಾನ, ಸಂಗೀತದ ವಿವಿಧ ರಚನೆಗಳು, ವಾದ್ಯಗೋಷ್ಠಿ, ವಾದ್ಯಸಂಗೀತ, ಚಲನಚಿತ್ರ ಗೀತೆಗಳು, ಜಾನಪದ, ಫಿಲ್ಮೀ ನೃತ್ಯ, ಯೋಗ ಪ್ರದರ್ಶನ ಇತ್ಯಾದಿ ಹಲವು ವಿವಿಧ ಕಾರ್ಯಕ್ರಮಗಳು ಆಹ್ವಾನಿತರ ಮನಸೂರೆಗೊಂಡು ಮಕ್ಕಳನ್ನು ಮನಸಾರೆ ಅಭಿನಂದಿಸಿ ಹಾರೈಸುತ್ತಾರೆ.

ಭರತನಾಟ್ಯಕ್ಕೆ ಶಾಸ್ತ್ರಬದ್ದ, ಶಿಸ್ತು ಬದ್ದ ಅಡಿಪಾಯ ಹಾಕಿಕೊಂಡು, ಸಾಧನೆ ಮಾಡಿ ಹೆಜ್ಜೆಯನ್ನು ಸುಲಲಿತವಾಗಿ, ಚೊಕ್ಕವಾಗಿ ಮೈಗೂಡಿಸಿಕೊಂಡು ಅಭ್ಯಾಸ ಮಾಡಿದ ವಿವಿಧ ವಯೋಮಿತಿಯ ಮಕ್ಕಳು ಉತ್ತಮ ಸಂಗೀತ, ಪ್ರಸಾಧನ, ಸಾಂಪ್ರದಾಯಿಕ ವಸ್ತ್ರಾಭರಣ, ಧ್ವನಿ ಬೆಳಕಿನ ಸಂಯೋಜನೆ, ರಂಗ ಸಜ್ಜಿಕೆಯ ಮೂಲಕ ಉತ್ಕೃಷ್ಟ ಮಟ್ಟದ ಕಾರ್ಯಕ್ರಮ ನೀಡುತ್ತಾ ಬರುತಿದ್ದಾರೆ. ಅತ್ಯುತ್ತಮ ಮಟ್ಟದ ಕಲಾತರಭೇತಿಯನ್ನು ನೀಡಿದ ಸಿಂಫೊನಿ ಕಲಾ ಶಾಲೆಯ ಗುರುವೃಂದವರು ಸರ್ವಕಾಲಿಕ ಮಾನ್ಯರು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಎಲ್ಲಾ ಕಲಾಶಾಲೆಗಳ ಮಕ್ಕಳಿಗೆ ಅಂತರ್ ಕಲಾಶಾಲಾ ಸಾಂಸ್ಕೃತಿಕ ಸ್ಪರ್ಧೆಯನ್ನು “ಇಂಡಿಯನ್ ಎಕೊಸ್” ಎಕೊಪೆಸ್ಟ್ ಅಯೋಜಿಸುತ್ತಾರೆ. ಅತ್ಯಂತ ಪೈಪೋಟಿಯಲ್ಲಿ ನಡೆಯವ ವಿವಿಧ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಸಿಂಫೊನಿ ಮ್ಯೂಸಿಕ್ ಶಾಲೆ ಪ್ರಥಮ ಸ್ಥಾನಗಳಿಸಿ ದಾಖಲೆಯನ್ನು ನಿರ್ಮಿಸಿದೆ.

ಸಿಂಫೊನಿ ಕಲಾ ಶಾಲೆಯಲ್ಲಿ ತರಭೇತಿಯನ್ನು ಪಡೆಯುವ ಭಾರತೀಯರೊಂದಿಗೆ, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ, ಬ್ರಿಟನ್, ಈಜಿಪ್ಸಿಯನ್, ಅರಬ್ ದೇಶಿಯರು ಕಲಿಕೆಯಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಭಾರತೀಯ ಸಾಂಸ್ಕೃತಿಕ ಬಾಂಧವ್ಯವನ್ನು ವಿದೇಶದ ಈ ನೆಲದಲ್ಲಿ ವೃದ್ದಿಸುವ ಕೊಂಡಿಯಾಗಿ “ಸಿಂಫೊನಿ” ಕಲಾ ಶಾಲೆ ಸಾಧಿಸಿದ್ದು ಶ್ಲಾಘನೀಯ ದಾಖಲೆಯಾಗಿದೆ.

ಬಿ. ಕೆ. ಗಣೇಶ್ ರೈ – ಯು.ಎ.ಇ.

Write A Comment