2015 ಏಪ್ರಿಲ್ 10ನೇ ತಾರೀಕು ಶುಕ್ರವಾರ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ದುಬಾಯಿ ಶೇಕ್ ಜಾಯಿದ್ ರಸ್ತೆಯಬಳಿ ಇರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಶ್ರೀ ಶನೈಶ್ಚರ ಸೇವಾ ಸಮಿತಿ ವತಿಯಿಂದ ನಡೆಯುವ 5ನೇ ವರ್ಷದ ಶ್ರೀ ಶನೈಶ್ಚರ ಪೂಜಾ ನಡೆಯಲಿದೆ. ಸುಮಾರು 1500 ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರ
ಪೂಜಾ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಯು. ಟಿ. ಖಾದರ್ ಗೌರವ ಅತಿಥಿಯಾಗಿ ಆಗಮಿಸಲಿರುವರು. ಈ ಸಂದರ್ಭದಲ್ಲಿ ಯು.ಎ.ಇ. ಯ ಪ್ರಖ್ಯಾತ ತುಂಭೆ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ. ಜಿ.ಎಂ.ಸಿ. ಹಾಸ್ಪಿಟಲ್ ಪೇಶೆಂಟ್ ಅಫೈರ್ಸ್ ಅಂಡ್ ಮಾರ್ಕೆಟಿಂಗ್ ಶ ನಿರ್ದೇಶಕರಾದ ಡಾ. ಬಂಗೇರಾ ರವರ ನೇತ್ರತ್ವದಲ್ಲಿ ತಜ್ಞ ವೈದ್ಯರ ತಂಡ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯ ಸೌಲಭ್ಯವನ್ನು ಪಡೆಯಲಿದ್ದಾರೆ.
ತುಂಬೆ ಹಾಸ್ಪಿಟಲ್ ನಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 25 ರವರೆಗೆ ಬೆಳಿಗ್ಗೆ 9.00 ರಿಂದ ರಾತ್ರಿ 9.00 ಗಂಟೆಯವರೆಗೆ ತಜ್ಞವೈದ್ಯರಿಂದ ಉಚಿತ ಸಲಹೆ ಏರ್ಪಡಿಸಲಾಗಿದೆ. ಲ್ಯಾಬೊರೇಟರಿ ಮತ್ತು ರೇಡಿಯೋಲಜಿ ಪರೀಕ್ಷೆಗೆ ಶೇಕಡ 20% ರಿಯಾಯಿತಿ ದರ ಲಭ್ಯವಿದೆ.
ಹೆಚ್ಚಿನ ವಿವರಗಳಿಗೆ :
Sudhakar Thumbe – 055 7913222
Vittal Shetty – 050 7981323
Harish Kodi – 050 2404116