ಗಲ್ಫ್

ಕೆ ಸಿ ಎಫ್ ಅಬುಧಾಬಿ ಆರೋಗ್ಯ ತಪಾಸಣಾ ಶಿಬಿರಕ್ಕೆ ವಿದ್ಯುಕ್ತ ಚಾಲನೆ

Pinterest LinkedIn Tumblr

KCF Abudhabi pro-Feb 21_2015-002

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ಝೋನ್ ವತಿಯಿಂದ ಒಂದು ತಿಂಗಳ ಉಚಿತ ಹೃದಯ ಹಾಗೂ ಕಿಡ್ನಿ ತಪಾಸಣಾ ಶಿಬಿರಕ್ಕೆ ಅಬುಧಾಬಿ ಯುನಿವರ್ಸಲ್ ಆಸ್ಪತ್ರೆಯ ಸಹಯೋಗದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

KCF Abudhabi pro-Feb 21_2015-001

KCF Abudhabi pro-Feb 21_2015-003

KCF Abudhabi pro-Feb 21_2015-004

KCF Abudhabi pro-Feb 21_2015-005

KCF Abudhabi pro-Feb 21_2015-006

KCF Abudhabi pro-Feb 21_2015-007

KCF Abudhabi pro-Feb 21_2015-008

KCF Abudhabi pro-Feb 21_2015-009

ಉದ್ಘಾಟನಾ ಸಮಾರಂಭದ ಭಾಗವಾಗಿ ನಿಗದಿತ, ಪೂರ್ವ ನೋಂದಾಯಿತ ನಗರ ವಾಸಿಗಳ ಆರೋಗ್ಯ ತಪಾಸಣೆ ಹಾಗೂ ಸೆಮಿನಾರ್ ನಡೆಯಿತು.ಕಾರ್ಯಕ್ರಮದಲ್ಲಿ ಕೆ ಸಿ ಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವಾ ಮಾತನಾಡಿ ಸಂಘದ ಜನಪರ ಕಾರ್ಯಕ್ರಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಡಾ.ಇಸ್ತಿಹಾಖ್ (ಯುನಿವರ್ಸಲ್ ಆಸ್ಪತ್ರೆ ನೆಪ್ರೋಲಜಿಸ್ಟ್) ಕಿಡ್ನಿ ವೈಫಲ್ಯದ ಕುರಿತು ವಿವರವಾಗಿ ಅರಿವು ಮೂಡಿಸಿ, ಪ್ರಶ್ನೋತ್ತರ ಕಾರ್ಯ ಕ್ರಮವನ್ನು ನಡೆಸಿ ಕೊಟ್ಟರು. ಯುನಿವರ್ಸಲ್ ಆಸ್ಪತ್ರೆಯ ಕೋರ್ಪರೇಟ್ ಕೋ- ಓರ್ಡಿನೇಟರ್ ಡಾ. ರಾಜೀವ್ ಮಾತನಾಡಿ ಶಿಬಿರಾರ್ಥಿಗಳಿಗೆ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಶಿಬಿರದಲ್ಲಿ ಕೆ ಸಿ ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಹಾಗೂ ಅಬುಧಾಬಿ ಝೋನ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಅಮಾನಿ ಹಾಜರಿದ್ದರು.

ಒಂದು ತಿಂಗಳ ಕಾಲ ನಡೆಯುವ ಆರೋಗ್ಯ ತಪಾಸಣಾ ಶಿಬಿರದ ಸಂಪೂರ್ಣ ಸದುಪಯೋಗವನ್ನು ಪಡೆದು ಕೊಳ್ಳಬೇಕಾಗಿ ಆರೋಗ್ಯ ಶಿಬಿರದ ಕೋ-ಓರ್ಡಿನೇಟರ್ ಅಬ್ದುಲ್ ಹಕೀಂ ತುರ್ಕಳಿಕೆ ತಿಳಿಸಿದರು. ಶಿಬಿರದ ಸಂಪೂರ್ಣ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಕೆ ಸಿ ಎಫ್-ಯಸ್ ಟೀಂ ಅಬುಧಾಬಿ ಘಟಕವು ಸ್ವಯಂ ಸೇವಕರಾಗಿ ಸಹಕರಿಸಿದರು. ಕಾರ್ಯಕ್ರಮವನ್ನು ಕಬೀರ್ ಬಯಂಬಾಡಿ ನಿರೂಪಿಸಿ ಲಘು ಉಪಹಾರದ ಮೂಲಕ ಕೊನೆಗೊಳಿಸಲಾಯಿತು.
for registration :HAKEEM THURKALIKE :0505620073
KABEER BAYAMBADY:0558956308
AMIR SUHAIL 0526759900

Write A Comment