ಗಲ್ಫ್

ಬಲಿಪಶುವಾಗಿರುವ ಜನರ ಒಗ್ಗಟ್ಟು ಕಾಲದ ಬೇಡಿಕೆಯಾಗಿದೆ : ಕೆ. ಎಂ. ಶರೀಫ್

Pinterest LinkedIn Tumblr

Photo

ಭಾರತದ ಜಾತ್ಯಾತೀತತೆಯನ್ನು ಎತ್ತಿ ಹಿಡಿಯುವಲ್ಲಿ ಮತ್ತು ಸಂವಿಧಾನ ವಿರೋಧಿ ಹಿಂದುತ್ವ ಫಾಸಿಸ್ಟರ ಹೋರಾಟದಲ್ಲಿ ನನ್ನ ಸಂಘಟನೆಯು ಎಂದಿಗೂ ಅಗ್ರ ಪಂಕ್ತಿಯಲ್ಲಿರುವುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಕೆ. ಎಂ. ಶರೀಫ್ ರವರು ಹೇಳಿದರು.

ಅವರು ಕುವೈಟ್ ಇಂಡಿಯಾ ಫ್ರೇಟರ್ನಿಟಿ ಫೋರಂ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಭಾರತದ ಸಂವಿಧಾನವು ಪ್ರಪಂಚ ಕಂಡ ಅತ್ಯಂತ ಬಲಿಷ್ಠ ಸಂವಿಧಾನವಾಗಿದ್ದು, ಆದರೆ ಬಿಜೆಪಿ ಅಧಿಕಾರಕ್ಕೇರಿದ ನಂತರ ಸಂವಿಧಾನವು ಅಪಾಯದಲ್ಲಿದ್ದು ಬಿಜೆಪಿಯು ಆರ್. ಎಸ್. ಎಸ್. ಆಣತಿಯಂತೆ ಸಂವಿಧಾನ ಬಯಸಿದ ನ್ಯಾಯ, ನೀತಿ ಮತ್ತು ಸಮಾನತೆ ತತ್ವಗಳ ಸಮಾಧಿ ಕಟ್ಟ ಬಯಸಿದೆ ಎಂದರು.

ಕೇವಲ ರಾಜಕೀಯ ಲಾಭಕ್ಕಾಗಿ ಬಿಜೆಪಿಯು ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿದ್ದು, ಸಂಘಪರಿವಾರದ ಷಡ್ಯಂತ್ರಗಳಿಗೆ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ. ಭಾರತದ ಭವ್ಯ ಇತಿಹಾಸವನ್ನು ತಿರುಚಿ ಮನುವಾದಿಗಳ ಸೂತ್ರಕ್ಕನುಗುಣವಾಗಿ ಖೋಟಾ ಸಂವಿಧಾನವನ್ನು ರಚಿಸುವ ನೀಚ ಕಾರ್ಯಕ್ಕೆ ಸರಕಾರವು ಪ್ರಾಯೋಜಕತ್ವ ನೀಡುತ್ತಿದೆ ಎಂದು ಹೇಳಿದರು.

ಭಾರತದ ಸಂವಿಧಾನದಲ್ಲಿ ಭರವಸೆಯಿಡುವ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಟ್ಟಾಗಿ ಫಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುವುದು ಕಾಲದ ಬೇಡಿಕೆಯಾಗಿದೆ ಎಂದು ಅವರು ಕರೆ ಕೊಟ್ಟರು. ಆರ್ ಎಸ್ ಎಸ್ ನ ವಿರುದ್ಧ ಮತ್ತು ಅದರ ಮನುಷ್ಯ ವಿರೋಧಿ ಕಾರ್ಯಕ್ರಮದ ವಿರುದ್ಧ ಹೋರಾಟದಲ್ಲಿ ಪಾಪ್ಯುಲರ್ ಫ್ರಂಟ್ ಎಂದಿಗೂ ಮುಂಚೂಣಿಯಲ್ಲಿರುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.

ಕುವೈಟ್ ಇಂಡಿಯಾ ಫ್ರೇಟರ್ನಿಟಿ ಫೋರಂ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಸೈಫುದ್ದೀನ್ ನಾಲಕಟ್ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

Write A Comment