ಗಲ್ಫ್

ವರ್ತಮಾನ ಮತ್ತು ನಮ್ಮ ಪ್ರವಾದಿ(ಸ.ಅ): ದಮಾಮ್ ಐಎಫ್‌ಎಫ್ ನಿಂದ ಸೀರತುನ್ನಬಿ ಅಭಿಯಾನ

Pinterest LinkedIn Tumblr

Damam Prog_ Feb 2- 2015_018

ದಮಾಮ್, ಜ. 25: ಸೀರತುನ್ನಬಿ ಅಭಿಯಾನ-2015ರ ಅಂಗವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ವಿಭಾಗದ ವತಿಯಿಂದ ‘ವರ್ತಮಾನ ಮತ್ತು ನಮ್ಮ ಪ್ರವಾದಿ(ಸ.ಅ.)’ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮವು ಜುಬೈಲ್, ಖೋಬರ್, ದಮಾಮ್, ಅಲ್‌ಹಸ, ನಾರಿಯ ಹಾಗೂ ಕಫ್‌ಜಿ ಮುಂತಾದ ಕಡೆಗಳಲ್ಲಿ ನಡೆಯಿತು.

ಜುಬೈಲ್‌ನ ಮರಾಫಿಕ್ ಬೀಚ್ ಕ್ಯಾಂಪ್‌ನಲ್ಲಿ ಜನವರಿ 8ರಂದು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಮಾರೋಪ ಸಮಾರಂಭವು ಜನವರಿ 17ರಂದು ಅಲ್‌ಹಸ ಅಲ್‌ಮಾಲಿಕಿ ಇಸ್ತಿರಾದಲ್ಲಿ ನಡೆಯಿತು. ಸಂದೇಶ ಪ್ರಚಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದ ಸಂಪನ್ಮೂಲ ವ್ಯಕ್ತಿಗಳು, ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯವು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳಿಗೆ ಪ್ರವಾದಿ ಜೀವನಾದರ್ಶವು ಪರಿಹಾರ ಮಾರ್ಗವಾಗಿದೆ. ಇಸ್ಲಾಮಿನ ಮೂಲಭೂತ ಆಶಯವಾಗಿರುವ ಏಕತೆಯ ಸಂದೇಶವನ್ನು ಮತ್ತೊಮ್ಮೆ ಜನರಿಗೆ ಮನದಟ್ಟು ಮಾಡಲು ಸೀರತುನ್ನಬಿ ಅಭಿಯಾನದ ಮೂಲಕ ಸಾಧ್ಯವಿದೆ. ಐಕ್ಯತೆಯಿಂದಾಗಿ ಸಮುದಾಯದೊಳಗೆ ಮಾತ್ರವಲ್ಲದೆ, ಒಟ್ಟು ಸಮಾಜದಲ್ಲೂ ಶಾಂತಿ ನೆಲೆಗೊಳ್ಳಲು ಸಾಧ್ಯವಿದೆ. ಅನೈಕ್ಯತೆಯು ಸಮಾಜದ ನೆಮ್ಮದಿಯನ್ನೇ ಹಾಳುಗೆಡಹಿರುವುದಕ್ಕೆ ಪ್ರಸಕ್ತ ವಿದ್ಯಮಾನಗಳು ನಿದರ್ಶನವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Damam Prog_ Feb 2- 2015_001

Damam Prog_ Feb 2- 2015_002

Damam Prog_ Feb 2- 2015_003

Damam Prog_ Feb 2- 2015_004

Damam Prog_ Feb 2- 2015_005

Damam Prog_ Feb 2- 2015_006

Damam Prog_ Feb 2- 2015_007

Damam Prog_ Feb 2- 2015_008

Damam Prog_ Feb 2- 2015_009

Damam Prog_ Feb 2- 2015_010

ಮುಸ್ಲಿಮ್ ಸಮುದಾಯದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳು ತಾಂಡವವಾಡುತ್ತಿರುವಾಗ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಪ್ರವಾದಿ ವರ್ಯರನ್ನು ಮಾದರಿಯಾಗಿಸಿಕೊಂಡು ಮಾನವ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ. ಈ ಮೂಲಕ ಅತ್ಯುತ್ತಮ ಸಮುದಾಯದ ನಿರ್ಮಾಣದ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ವಹಿಸಿಕೊಳ್ಳಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿಗಳು ಕರೆ ನೀಡಿದರು.
ಜುಬೈಲ್, ಖೋಬರ್, ದಮಾಮ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಮ್‌ನ ಸಮಿತಿ ಸದಸ್ಯ ಫಯಾಝ್ ಎನ್. , ನಾರಿಯಾ ಹಾಗೂ ಕಫ್‌ಜಿಯಲ್ಲಿ ಅಶ್ರಫ್ ಕುಕ್ಕಾಜೆ ಮತ್ತು ಅಲ್‌ಹಸದಲ್ಲಿ ಶರೀಫ್ ಜೋಕಟ್ಟೆ ಅವರು ದಿಕ್ಸೂಚಿ ಭಾಷಣಗೈದರು.

Damam Prog_ Feb 2- 2015_011

Damam Prog_ Feb 2- 2015_012

Damam Prog_ Feb 2- 2015_013

Damam Prog_ Feb 2- 2015_014

Damam Prog_ Feb 2- 2015_015

Damam Prog_ Feb 2- 2015_016

Damam Prog_ Feb 2- 2015_017

Damam Prog_ Feb 2- 2015_019

Damam Prog_ Feb 2- 2015_020

ಜುಬೈಲ್‌ನಲ್ಲಿ ಮಹಿಳೆಯರಿಗೆ ನಡೆದ ಕಾರ್ಯಕ್ರಮದಲ್ಲಿ ನಸೀಮಾ ಶರೀಫ್ ಕನ್ನಡದಲ್ಲಿ ಹಾಗೂ ನೂರ್ ಆಯಿಶಾ ಯೂಸುಫ್ ಉರ್ದು ಭಾಷೆಯಲ್ಲಿ ಪ್ರವಾದಿ ಸಂದೇಶ ನೀಡಿದರು. ಜುಬೈಲ್‌ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕಿರಾಅತ್, ಇಸ್ಲಾಮಿಕ್ ಕ್ವಿಝ್, ಹಾಡು ಹಾಗೂ ಪಿಕ್‌ಆ್ಯಂಡ್ ಸ್ಪೀಚ್ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಫತೇಹ್ ಅಲ್ ಜುಬೈಲ್‌ನ ಜನರಲ್ ಮ್ಯಾನೇಜರ್ ಮುಶ್ತಾಕ್ ಅಹ್ಮದ್, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಫಯಾಝ್ ಅಹ್ಮದ್, ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಅಧ್ಯಕ್ಷ ವಾಸಿಮ್, ಹಿದಾಯ ಫೌಂಡೇಶನ್ ಉಪಾಧ್ಯಕ್ಷ ಝಾಕಿರ್ ಬೆಳ್ತಂಗಡಿ, ಇಂಡಿಯನ್ ಸೋಶಿಯಲ್ ಫೋರಮ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಆರಿಫ್, ರಾಯಚೂರು ಅಸೋಸಿಯೇಶನ್‌ನ ನಿಯಮತುಲ್ಲಾಹ್, ಮಲ್ನಾಡ್ ಅಸೋಸಿಯೇಶನ್‌ನ ಅಡ್ವಕೇಟ್ ಬಶೀರ್, ಡಿಕೆಎಸ್‌ಸಿ ಉಪಾಧ್ಯಕ್ಷ ಸೈಯ್ಯದ್ ಬಾವಾ, ಹೆಲ್ಪಿ ಗೌರವಾಧ್ಯಕ್ಷ ಬಾವಾ ಸಾಬು ಬ್ಯಾರಿ, ರಯಾನ್ ನ್ಯಾಶನಲ್ ಡೈರಿಯ ಹಕೀಮ್ ಬೆಂಗರೆ ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಫತೇಹ್ ಅಲ್ ಜುಬೈಲ್ ಟ್ರೇಡಿಂಗ್ ಎಸ್ಟಾಬ್ಲಿಶ್‌ಮೆಂಟ್‌ನ ಮುಷ್ತಾಕ್, ಅಲ್ ಮುಝೈನ್ ಕಂಪೆನಿಯ ಶರೀಫ್, ಮಿರ್ಝಾ ಅಲ್ ನೆಮೆರ್‌ನ ಆಸಿಫ್, ಇಂಟರ್‌ನ್ಯಾಶನಲ್ ಮೆಟಲ್ ಸೋರ್ಸಸ್ ಎಸ್ಟಾಬ್ಲಿಷ್‌ಮೆಂಟ್‌ನ ಇಮ್ರಾನ್, ಎಕ್ಸ್‌ಪರ್ಟೈಸ್ ಇಂಡಸ್ಟ್ರಿಯಲ್ ಸೊಲೂಶನ್ಸ್ ಮುಂತಾದವರು ಸೀರತುನ್ನಬಿ ಅಭಿಯಾನದ ಯಶಸ್ಸಿಗೆ ಸಹಕರಿಸಿದರು.

Write A Comment