ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಘಟಕದ ವತಿಯಿಂದ ಒಂದು ತಿಂಗಳುಗಳ ಕಾಲ ನಡೆಯಲಿರುವ ಸೀರತುನ್ನಭಿ ಅಭಿಯಾನದ ಉದ್ಘಾಟಣೆಯು ಜನವರಿ 1 ರಂದು ಅಲ್-ಖರ್ಜ್ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್-ಖರ್ಜ್ ಕರ್ನಾಟಕ ಘಟಕದ ಅಧ್ಯಕ್ಷರಾದ ಜ! ಹಮೀದ್ ಇಡ್ಯ ರವರು ವಹಿಸಿದ್ಧರು , ಕಾರ್ಯಕ್ರಮದ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದ ಜ!ಶಾಫಿ ವಾಮಂಜೂರುರವರು , ಪ್ರಸಕ್ತವಾಗಿ ಇಸ್ಲಾಂ ಧರ್ಮವು ಅತೀ ಹೆಚ್ಚಾಗಿ ದುಷ್ಪ್ರಚಾರಕ್ಕೊಳಗಾಗುತ್ತಿದ್ಧು, ಮುಸ್ಲಿಂ ಸಮುದಾಯ ನೈಜ ಇಸ್ಲಾಮಿನ ತತ್ವಾದರ್ಶಗಳನ್ನು ಸಮಾಜಕ್ಕೆ ತಿಳಿಸಿಕೊಡುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ ಎಂದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದಂತಹ ಐಎಫ್ಎಫ್ ಕರ್ನಾಟಕ ರಾಜ್ಯ ಘಟಕದ ಸದಸ್ಯರಾದ ಜ! ಶರೀಫ್ ಕಬಕರವರು ಮಾತನಾಡಿ ಮುಸ್ಲಿಂ ಸಮುದಾಯದ ವಿರುದ್ಧ ಒಂದು ಕಡೆ ಸತತವಾಗಿ ಷಡ್ಯಂತ್ರಗಳು ನಡೆಯುತ್ತಿದ್ದು, ಮತ್ತೊಂದು ಕಡೆಯಲ್ಲಿ ಮುಸ್ಲಿಂ ಯುವ ಸಮೂಹ ಹಾದಿತಪ್ಪುತ್ತಿದೆ, ಇದೆಲ್ಲದ್ಧಕ್ಕೂ ಪರಿಹಾರವಾಗಿ ನಾವುಗಳು ಪ್ರವಾದಿ(ಸ.ಅ) ರವರ ಜೀವನವನ್ನು ಅಧ್ಯಯನ ಮಾಡಿ ಅವರನ್ನು ಮಾದರಿಯಾಗಿಸಿಕೊಂಡು ಮುಂದುವರಿಯಬೇಕಾಗಿದೆ ಎಂದರು.
ನಾವು ನಮ್ಮ ಸಮುದಾಯದೊಳಗಿನ ಸಣ್ಣ ಸಣ್ಣ ಬಿನ್ನಾಭಿಪ್ರಾಯಗಳಿಗಾಗಿ ಭಿನ್ನರಾಗುತ್ತಿದ್ಧು, ಇದು ನೈಜ ಪ್ರವಾದಿ ಪ್ರೇಮಿಗೆ ತಕ್ಕುದಾದ ವರ್ತನೆಯಲ್ಲ, ಹೊರತಾಗಿ ನಾವುಗಳು ಪರಸ್ಪರ ಐಕ್ಯತೆಯನ್ನು ಕಾಪಾಡಿಕೊಂಡು ಸಮುದಾಯಕ್ಕಾಗಿ, ತುಳಿತಕ್ಕೊಳಗಾದವರಿಗಾಗಿ, ಸಮಾಜಕ್ಕಾಗಿ , ರಾಷ್ಟ್ರಕ್ಕಾಗಿ ದುಡಿದಾಗ ಮಾತ್ರ ನೈಜ ಪ್ರವಾದಿ ಅನುಯಾಯಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಐಎಸ್ಎಫ್ ಮುಖಂಡರಾದ ಜ! ರಶೀದ್ ವಗ್ಗ ಆಗಮಿಸಿದ್ದು , ಜಲೀಲ್ ಸುರತ್ಕಲ್ ರವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.