ಗಲ್ಫ್

ರಷ್ಯಾ ಮತ್ತು ಅಮೆರಿಕಾಗಳ ಪೈಪೋಟಿಯೇ ಜಾಗತಿಕ ಘಟನಾವಳಿಗಳಿಗೆ ಕಾರಣ: ಹಾರೀಸ್ ಅಂಗರಗುಂಡಿ

Pinterest LinkedIn Tumblr

ISF

ಜಾಗತಿಕ ಮಟ್ಟದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಲು ರಷ್ಯಾ ಮತ್ತು ಅಮೆರಿಕ ಇಸ್ರೇಲ್ ಮೈತ್ರಿಕೂಟಗಳು ನಡೆಸುತ್ತಿರುವ ಪೈಪೋಟಿಯೇ ಫೆಲಸ್ತೀನ್, ಲಿಬಿಯ, ಸಿರಿಯ , ಇರಾಕ್, ಈಜಿಫ್ಟ್ ಮತ್ತಿತರ ರಾಷ್ಟ್ರಗಳ ಇತ್ತೀಚಿನ ಕೆಲವು ಪ್ರಮುಖ ಘಟನಾವಳಿಗಳಿಗೆ ಕಾರಣ ಎಂದು ಇಂಡಿಯನ್ ಸೋಷಿಯಲ್ ಫೋರಂ , ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಜ!ಹಾರೀಸ್ ಅಂಗರಗುಂಡಿ ಹೇಳಿದರು.

ಅವರು ತಾ! 13/11/2014 ರಂದು ರಿಯಾದ್ ಹೊರವಲಯದ ಬುರೈದಾ ದಲ್ಲಿ ನಡೆದ ಈ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ಧರು. ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದಂತಹ ಜನಾಬ್ ! ಶರೀಫ್ ಕಬಕರವರು ಮಾತನಾಡಿ ಪ್ರಸಕ್ತ ಭಾರತ ದೇಶದ ಆಡಳಿತ ವರ್ಗಗಳು ತನ್ನ ಅಲಿಪ್ತ ನೀತಿಯಿಂದ ಹಿಂದೆ ಸರಿಯತ್ತಾ ಪ್ರಪಂಚದ ರೌಡಿ ರಾಷ್ಟ್ರಗಳಾದ ಅಮೇರಿಕ ಹಾಗೂ ಇಸ್ರೇಲಿನೊಂದಿಗೆ ಸಂಬಂಧವೇರ್ಪಡಿಸುತ್ತಿರುವುದು ಖೇದಕರವಾಗಿದೆ ಎಂದರು.

ಅಲ್ಲದೆ ಭಾರತವು ತನ್ನ ನೈಜ ಪ್ರಜಾಪ್ರಭುತ್ವ ಮೌಲ್ಯಗಳಿಂದ ಹಿಂದೆ ಸರಿಯುತ್ತಿದ್ದು ಜನವಿರೋದಿ ಅಭಿವೃದ್ಧಿ ಮಾದರಿಯನ್ನು ತೋರಿಸುತ್ತಾ ಜನರನ್ನು ವಂಚಿಸುತ್ತಿದೆ. ಇದೆಲ್ಲದ್ದಕ್ಕೂ ಪರಿಹಾರವಾಗಿ ಬಾರತೀಯರು ಆ ಯಂತಹ ಜಾತ್ಯಾತೀತ ಪಕ್ಷಗಳನ್ನು ಬಲಪಡಿಸಬೇಕೆಂದು ಅವರು ಕರೆ ನೀಡಿದರು. ಈ ಬುರೈದಾ ಘಟಕದ ಅಧ್ಯಕ್ಷರಾದ ಜ!ರಶೀದ್ ಉಚ್ಚಿಲರವರು ಸ್ವಾಗತಿಸಿ, ಜ! ಝಕರಿಯಾ ಕೊರಿಂಗಿಲ ಧನ್ಯವಾದಗೈದರು.

ವರದಿ : ಸಿರಾಜ್ ಸಜಿಪ

Write A Comment