ಗಲ್ಫ್

ISF ಪ್ರಯತ್ನದಿಂದ ಚಿಕಿತ್ಸೆಗಾಗಿ ಊರಿಗೆ ತೆರಳಿದ ಮೊಹಮ್ಮದ್ ಶಂಸೀರ್

Pinterest LinkedIn Tumblr

ISF22

ಸೌದಿ ಅರೇಬಿಯಾದ ರಿಯಾದ್ ಗೆ ದುಡಿಮೆಗಾಗಿ ತೆರಳಿದ್ದ ಬೆಂಗ್ರೆ ನಿವಾಸಿ ಮೊಹಮ್ಮದ್ ಶಂಸೀರ್ ಎಂಬವರು, ಸುಮಾರು ಎರಡೂವರೆ ವರ್ಷಗಳಿಂದ ತನ್ನ ಪ್ರಾಯೋಜಕ ಕಂಪೆನಿಯಲ್ಲಿ ದುಡಿಯುತ್ತಿದ್ದು, ಇತ್ತೀಚಿಗೆ ತನ್ನ ಕಣ್ಣಿನ ಆಪರೇಷನ್ಗಾಗಿ ತವರಿಗೆ ಹೊಗೂದಕ್ಕಾಗಿ ತನ್ನ ಕಂಪೆನಿ ಬಳಿ ಕೇಳಿ ಕೊಂಡರೂ ಇವರನ್ನು ಕಳುಹಿಸಿಕೊಡುವಲ್ಲಿ ಸತಾಯಿಸತೊಡಗಿದ್ದು, ಇವರು ಎರಡು ತಿಂಗಳುಗಳಿಂದ ತನ್ನ ರೂಮಿನಲ್ಲಿಯೇ ಇದ್ದುಕೊಂಡಿದ್ದರು.

ಯಾವುದೇ ಕಾರಣಕ್ಕೂ ತಮ್ಮನ್ನು ಕಳುಹಿಸಿಕೊಡಲು ಕಂಪೆನಿಯು ಮುಂದಾಗದೇ ಇದ್ದಾಗ ಇವರು ರಿಯಾದಿನ ಇಂಡಿಯನ್ ಸೋಶಿಯಲ್ ಫೋರಂ ( ISF ) ನ ಕರ್ನಾಟಕ ಘಟಕದ ಕಾರ್ಯಕರ್ತರನ್ನು ಭೇಟಿಯಾಗಿ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದು . ತಕ್ಷಣಕ್ಕೆ ಕಾರ್ಯಪ್ರವರ್ತರಾದ ISF ಕಾರ್ಯಕರ್ತರಾದ ಇಸ್ಮಾಯಿಲ್ ಮಂಗಳಪೇಟೆ, ಸಮೀರ್ ಯೆರ್ಮಾಲ್ ಮತ್ತು ನೌಶದ್ ಕಾಟಿಪಳ್ಳರವರು ಸತತವಾಗಿ ಕಂಪೆನಿಯ ಆಡಳಿತವನ್ನು ಭೇಟಿಯಾಗಿ ಒತ್ತಡ ಹೇರಲಾರಂಬಿಸಿದ್ದು, ಕಡೆಗೆ ಇದೇ ತಿಂಗಳ 18ನೇ ತಾರೀಕಿನಂದು ಅವರನ್ನು ಊರಿಗೆ ಕಳುಸಿಹಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ : ಶರೀಫ್ ಆನಾಜೆ , ಕಬಕ

Write A Comment