ಗಲ್ಫ್

ಕೆ ಐ ಸಿ ಗ್ರ್ಯಾಂಡ್ ಮೀಟ್ ನಲ್ಲಿ ಪಾಲ್ಗೊಳ್ಳಲು ಕುಂಬೋಳ್ ಅಲಿ ತಂಙಳ್ ಮತ್ತು ಜಬ್ಬಾರ್ ಉಸ್ತಾದ್ ಡಿ- 5 ಕ್ಕೆ ದುಬೈಗೆ

Pinterest LinkedIn Tumblr

KIC DUBAI

ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಯು.ಎ.ಇ ಇದರ ವತಿಯಿಂದ ಯು.ಎ .ಇ ರಾಷ್ಟ್ರೀಯ ದಿನದ ಅಂಗವಾಗಿ ದಿನಾಂಕ 05.12.2014 ನೇ ಶುಕ್ರವಾರ ಸಂಜೆ 5.30 ರಿಂದ ರಾತ್ರಿ 10.30 ರವರೇಗೆ ದುಬೈ ಓದ್ ಮೇತಾ ದಲ್ಲಿರುವ ಜೋರ್ಡಾನಿಯನ್ ಸೋಷಿಯಲ್ ಕ್ಲಬ್ ಅಡಿಟೋರಿಯಮ್ ನಲ್ಲಿ ಕೆ ಐ ಸಿ ಗ್ರಾಂಡ್ ಮೀಟ್ ಕಾರ್ಯಕ್ರಮ ನಡೆಯಲಿದ್ದು ಆ ಪ್ರಯುಕ್ತ ಊರಿನಿಂದ ವಿಶಿಷ್ಟ ಅತಿಥಿಗಳನ್ನು ಬರಮಾಡಿಕೊಳ್ಳಲಾಗುವುದೆಂದು ತೀರ್ಮಾನಿಸಲಾಗಿದೆ.

ಪ್ರಮುಖವಾಗಿ ಖ್ಯಾತ ಕುಂಬೋಳ್ ಕುಟುಂಬದ ಸುಪ್ರಸಿದ್ದ ಅಸ್ಸಯ್ಯದ್ ಅಲಿ ತಂಙಳ್, ಕರ್ನಾಟದ ವಿದ್ವಾಂಸ ಜಗತ್ತಿನ ಕುಲಪತಿ ದಕ್ಷಿಣ ಕನ್ನಡ ಜಿಲ್ಲಾ ಉಪ ಖಾಝಿ, ಸಮಸ್ತ ಮುಶಾವರ ಅಂಗ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜನಾಬ್ ಎ.ಬಿ ಇಬ್ರಾಹಿಂ, ಹಾಗೂ ಇತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ . ಕರ್ನಾಟಕ ಇಸ್ಲಾಮಿಕ್ ಸೆಂಟರ್ ಅಧೀನದಲ್ಲಿರುವ ಜಾಮಿಯ ಅಲ್ ಕೌಸರ್ ಶರೀಯತ್ ಕಾಲೇಜಿನ ಪ್ರಪ್ರಥಮ ಸಾಲಿನ ಬಿರುದು ದಾರಿ ವಿ.ಯಂ ಮಹಮ್ಮದ್ ಅನೀಸ್ ಕೌಸರಿ ಯವರು ದಿಕ್ಸೂಚಿ ಭಾಷಣ ಮಾಡಲಿರುವರೆಂದು ಸ್ವಾಗತ ಸಮಿತಿ ಚೆಯರ್ ಮ್ಯಾನ್ ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಕೆ ಐ ಸಿ ಗ್ರಾಂಡ್ ಮೀಟ್ – 2014 ರ ಆಮಂತ್ರಣ ಪತ್ರಿಕೆಯನ್ನು ಕೇಂದ್ರ ಸಮಿತಿ ಅದ್ಯಕ್ಷರಾದ ಹಾಜಿ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ ಬಿಡುಗಡೆ ಗೊಳಿಸಿದರು. ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ, ನೂರ್ ಮಹಮ್ಮದ್ ನೀರ್ಕಜೆ, ಅಬ್ದುಲ್ ಸಲಾಂ ಬಪ್ಪಳಿಗೆ , ಬದ್ರುದ್ದೀನ್ ಹೆಂತಾರ್ , ಸುಲೈಮಾನ್ ಮೌಲವಿ ಕಲ್ಲೆಗ, ಮಹಮ್ಮದ್ ಶರೀಫ್ ಕಾವು, ಅಬ್ದುಲ್ ರಝಾಕ್ ಸೋಂಪಾಡಿ, ಮುಸ್ತಫಾ ಗೂನಡ್ಕ,ಅಬ್ದುಲ್ ರಝಾಕ್ ಹಾಜಿ ಮನಿಲ, ಮಹಮ್ಮದ್ ರಫೀಕ್ ಆತೂರ್, ಅಶ್ರಫ್ ಅರ್ತಿಕೆರೆ, ಅಶ್ರಫ್ ಪರ್ಲಡ್ಕ,ನವಾಝ್ ಬಿ.ಸಿ ರೋಡ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಆಸಿಫ್ ಪುತ್ತೂರು

Write A Comment