ರಾಷ್ಟ್ರೀಯ

ರಾಂಪಾಲ್ ಬೆಂಬಲಿಗರಿಂದ ಪೊಲೀಸರ ಮೇಲೆ ಗುಂಡಿನ ದಾಳಿ

Pinterest LinkedIn Tumblr

Rampal-Supporter

ಹಿಸ್ಸಾರ್(ಹರಿಯಾಣ): ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ರಾಂಪಾಲ್ ಆಶ್ರಮದ ಎದುರು ಜಮಾಯಿಸಿರುವ ಬೆಂಬಲಿಗರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ರಾಂಪಾಲ್ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಹೊಸದಾಗಿ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು. ರಾಂಪಾಲ್ ಬಂಧನವನ್ನು ವಿರೋಧಿಸಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಹಿಸ್ಸಾರ್ ಆಶ್ರಮದ ಸುತ್ತ ಜಮಾಯಿಸಿದ್ದಾರೆ. ಈ ವೇಳೆ ರಾಂಪಾಲ್ ಬಂಧನಕ್ಕೆ ಅಡ್ಡಿಪಡಿಸುತ್ತಿರುವ ಭಕ್ತರು ಪೊಲೀಸರ ಎದುರು ಕಲ್ಲು ತುರಾಟ ನಡೆಸಿದ್ದಾರೆ.
ಸದ್ಯ ಭಕ್ತರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದು, ಆಶ್ರಮದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲು ತೂರಾಟದಲ್ಲಿ ಹಲವು ಪೊಲೀಸರಿಗೆ ಹಾಗೂ ಭಕ್ತರಿಗೆ ಗಾಯಗಳಾಗಿವೆ. ಇದೇ ವೇಳೆ ಪ್ರತಿಭಟನಾ ನಿರತ ಭಕ್ತರನ್ನು ಪೊಲೀಸರು ಬಂಧಿಸುತ್ತಿದ್ದಾರೆ.

ರಾಂಪಾಲ್‌ರನ್ನು ಬಂಧಿಸಿಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರು ಬೆದರಿ ಹಾಕಿದ್ದಾರೆ.
ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪಾಲ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಮಾಡಿರುವ ಹೈಕೋರ್ಟ್, ಶುಕ್ರವಾರದೊಳಗಾಗಿ ರಾಂಪಾಲ್‌ನನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಹರಿಯಾಣ ಸರ್ಕಾರ ಮತ್ತು ಪೊಲೀಸರಿಗೆ ಸೂಚನೆ ನೀಡಿತ್ತು.

ರಾಂಪಾಲ್ ವಿರುದ್ಧ ಕಳೆದ ವಾರವಷ್ಟೇ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಅದರಂತೆ ಇಂದು ಕೋರ್ಟ್ ಮುಂದೆ ರಾಂಪಾಲ್‌ನನ್ನು ಹಾಜರುಪಡಿಸಲು ಕೊನೆಯ ದಿನವಾಗಿತ್ತು. ಆದರೆ ಆಶ್ರಮದ ಮುಂದೆ ಕಳೆದ ಒಂದು ವಾರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಬಂಧನಕ್ಕೆ ವಿರೋಧ ತೋರಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿರುವುದರಿಂದ ರಾಂಪಾಲ್‌ನನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಹರಿಯಾಣ ಸರ್ಕಾರ ಇನ್ನು ಒಂದು ಕಾಲಾವಕಾಶ ನೀಡುವಂತೆ ಕಾಲಾವಕಾಶ ನೀಡಿತ್ತು. ಸದ್ಯದ ಪರಿಸ್ಥಿತಿಯನ್ನು ಅರಿತಿರುವ ಹೈಕೋರ್ಟ್ ಇನ್ನು ಮೂರು ದಿನಗಳ ಕಾಲಾವಕಾಶ ನೀಡಿದ್ದು. ನಾಳಿನ ಶುಕ್ರವಾರದಂದು ರಾಂಪಾಲ್‌ನನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.

Write A Comment