
ದುಬೈ, ನ.15: ತುಡಾರ್ ಫ್ರೆಂಡ್ಸ್ ದುಬೈ ಇವರ ಆಶ್ರಯದಲ್ಲಿ ದುಬೈಯ ಜಬೀಲ್ ಪಾರ್ಕ್‌ನಲ್ಲಿ ನ.28ರಂದು ಐದು ಓವರ್‌ಗಳ ಹಾರ್ಡ್ ಟೆನ್ನಿಸ್‌ಬಾಲ್‌ನ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ 5 ಸಾವಿರ ದಿರ್ಹಂ-ತುಡಾರ್ ಟ್ರೋಫಿ, ರನ್ನರ್ ಆಫ್ ತಂಡಕ್ಕೆ 3 ಸಾವಿರ ದಿರ್ಹಂ-ತುಡಾರ್ ಟ್ರೋಫಿ ಹಾಗೂ ತೃತೀಯ ಹಾಗೂ ಚತುರ್ಥ ತಂಡಗಳಿಗೆ ತುಡಾರ್ ಟ್ರೋಫಿ ನೀಡಿ ಗೌರವಿಸಲಾಗುವುದು.
ಕ್ರಿಕೆಟ್ ಪಂದ್ಯಾದಲ್ಲಿ ಮುಖ್ಯ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಸತೀಶ್ ಪೂಜಾರಿ, ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಬಿಡಿಪಿ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥ ತೆಡ್ಡೂಸ್ ಜಾಯ್‌ಮನ್, ಮ್ಯಾಕ್ಸಲ್ ಇಂಟರ್‌ನ್ಯಾಷನಲ್‌ನ ಸಂಚಾಲಕ ಉದಯ ಕುಮಾರ್ ಕಟೀಲ್, ಫೋರ್ಚುನ್ ಗ್ರಾಪ್ ಆಫ್ ಹೊಟೇಲ್ಸ್‌ನ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಆರ್.ಎನ್.ಬಂಗೇರ, ಸತೀಶ್ ವೆಂಕಟರಮಣ, ಜೀತೇಂದ್ರ ಸುವರ್ಣ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಭಾಗವಹಿಸಲಿಚ್ಚಿಸುವ ತಂಡಗಳು ನ.20ರೊಳಗೆ ಈ ಕೆಳಗಿನ ದೂರವಾಣಿ ಮೂಲಕ ತಮ್ಮ ತಂಡದ ಹೆಸರನ್ನು ನೊಂದಾಯಿಸಬಹುದಾಗಿದೆ.
-ಜಯಂತ್: 0551348710
-ವಿಠ್ಠಲ್ ಪೂಜಾರಿ: 0526991227
-ಪ್ರಶಾಂತ್: 0556153503
-ಸುಕೇಶ್ ಕೋಟ್ಯಾನ್:0553844849