ಗಲ್ಫ್

ಅಪಘಾತಕ್ಕೀಡಾಗಿ ಮ್ರತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಐದು ವರ್ಷದ ಕಠಿಣ ಪರಿಶ್ರಮದ ಮೂಲಕ ಪರಿಹಾರ ಧನ ಒದಗಿಸುವಲ್ಲಿ ಯಶಸ್ವಿಯಾದ ಐ.ಎಫ್.ಎಫ್.

Pinterest LinkedIn Tumblr

rupee

ಜಿದ್ದಾ: ತಮ್ಮ ಕೌಟುಂಬಿಕ ನಿರ್ವಹಣೆ ಮತ್ತು ಔಧ್ಯೋಗಿಕ ಉದ್ದೆಶವನ್ನಿಟ್ಟುಕ್ಕೊಂಡು ಗಲ್ಫ್ ರಾಷ್ಟ್ರಕ್ಕೆ ತೆರಳಿ ಸಂಕಷ್ಟಕ್ಕೀಡಾಗುವ ಮತ್ತು ದುರಂತವಾಗಿ ಕೊನೆಯಾಗುವ ಅನೇಕ ಘಟನೆಗಳನ್ನು ನಾವು ದಿನಪತ್ರಿಕೆಯಲ್ಲೋ ಅಥವಾ ಧ್ರಶ್ಯಮಾಧ್ಯಮಗಳಲ್ಲೋ ತಿಳಿದಿರಬಹುದು. ಅನೇಕಾ ಅನಿವಾಸಿಗರು ಯಾರದ್ದೋ ತಪ್ಪಿನಿಂದ ಉಂಟಾದ ಅಪಘಾತದಿಂದಾಗಿ ತಮ್ಮ ಜೀವನವನ್ನು ಜೈಲಿನಲ್ಲಿ ಕಳೆಯುತ್ತಿದ್ದರೆ, ಮತ್ತೆ ಕೆಲವರು ದುರಂತವಾಗಿ ಅಂತ್ಯ ಕಾಣುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೇನೆಂದರೆ ಅಪಘಾತಕ್ಕೊಳಗಾದ ವ್ಯಕ್ತಿ ಸ್ವತಃ ಸಂಕಷ್ಟಕ್ಕೊಳಗಾಗುತ್ತನಲ್ಲದೆ ತನ್ನನ್ನೇ ನಂಬಿರುವ ಕುಟುಂಬವು ಕೂಡ ಸಂಕಷ್ಟಕ್ಕೊಳಗಾಗುತ್ತದೆ ಎಂಬುದು ವಾಸ್ತವ. ಅನೇಕ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ಎಲ್ಲಿಲ್ಲದ ಪಾಡು ಪಡಬೇಕಾಗುತ್ತದೆ. ಅನೇಕ ಸಲ ಇಂತಹ ಕುಟುಂಬಕ್ಕೆ ಸರ್ಕಾರ ಅಥವಾ ಇನ್ನಿತರ ಮೂಲಗಳಿಂದಾಗಲಿ ಪರಿಹಾರ ದೊರೆಯುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ವ್ಯತಿರಿಕ್ತವಾದ ಘಟನೆಯೊಂದು ಸೌದಿ ಅರೇಬಿಯಾದ ಜಿದ್ದಾದಿಂದ ವರದಿಯಾಗಿದೆ.

ತಮ್ಮ ಮತ್ತು ಕುಟುಂಬದ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ಹೆಗಲೇರಿಸಿಕ್ಕೊಂಡು ಸೌದಿ ಅರೇಭಿಯಾದ ಜಿದ್ದಾ ತಲುಪಿದ ಮಂಗಳೂರು ಸಮೀಪದ ಬಂಟ್ವಾಳ ನಿವಾಸಿಯಾದ ದಿವಂಗತ ಅಬ್ದುಲ್ ಹಮೀದ್ ರವರಿಗೆ, ಅವರು ಸೌದಿ ತಲುಪಿದ ಆರು ತಿಂಗಳಿಗೆ ಸರಿಯಾಗಿ ಸೌದಿ ಪ್ರಜೆಯು ಜಿದ್ದಾದ ತಹೆಲಿಯಾ ರಸ್ತೆಯಲ್ಲಿ ತನ್ನ ಕಾರನ್ನು ಡಿಕ್ಕಿ ಹೊಡೆಸಿ ಪರಾರಿಯಾದ. ಅಪಘಾತಕ್ಕೀಡಾದ ಘಟನೆಯನ್ನು ಕಂಡ ಸ್ತಳೀಯರು ಕಾರನ್ನು ಹಿಂಬಾಲಿಸಿ ಕಾರನ್ನು ತಡೆದು ನಿಲ್ಲಿಸಿ ಚಾಲಕನನ್ನು ಹಿಡಿದು ಪೊಲಿಸರಿಗೊಪ್ಪಿಸಿದರು. ಅಪಘಾತದ ತೀವ್ರತೆಗೆ ಅಬ್ದುಲ್ ಹಮೀದ್ ರವರು ದಿನಾಂಕ 12 – 08 – 2009 ರಂದು ಪತ್ನಿ ಸೆಲೀಕ, ಮಕ್ಕಳು ಸಹಿತ ಅಪಾರ ಬಂದುಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು.

ಅವರು ಸೌದಿ ತಲುಪುವ ಸಲುವಾಗಿ ಬ್ಯಾಂಕಿನಲ್ಲಿ ತನ್ನ ಮನೆಯ ಆದಾರವನ್ನು ಅಡವಿಟ್ಟು ಸರಿಸುಮಾರು ಎಂಬತ್ತು ಸಾವಿರ ಪಡೆದಿದ್ದರಲ್ಲದೆ, ಇವರ ಅಕಾಲಿಕ ಮರಣದಿಂದಾಗಿ ಇವರ ಕುಟುಂಬವು ಬ್ಯಾಂಕಿನಿಂದ ಹಲವು ಸಲ ನೋಟಿಸ್ ಅನ್ನು ಎದುರಿಸಬೇಕಾಯಿತ್ತು. ಅಬ್ದುಲ್ ಹಮೀದ್ ರವರ ಅಕಾಲಿಕ ಮರಣದ ಸುದ್ದಿಯನ್ನರಿತ ಇಂಡಿಯಾ ಪ್ರೆಟರ್ನಿಟಿ ಪೋರಂ ನ ಪಧಾಧಿಕಾರಿಗಳು ಕಾರ್ಯಪ್ರವ್ರತ್ತರಾಗಿ ಜನಾಬ್ ಮುಹಮ್ಮೆದ್ ಅಲಿ ( ಐ.ಎಫ್.ಎಫ್. ಜಿದ್ದಾ ) ಯವರ ನೇತ್ರತ್ವದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಸಹಕಾರದೊಂದಿಗೆ ಸೌದಿ ಪ್ರಜೆಯ ಮೇಲೆ ಕೇಸು ದಾಖಲಿಸಿದರೆ, ಜನಾಬ್ ಹುಸೈನ್ ಜೋಕಟ್ಟೆ ( ಐ.ಎಫ್.ಎಫ್. ಜಿದ್ದಾ ) ಯವರು ಸಹಕರಿಸಿದರು. ಈ ಕೇಸನ್ನದಾರಿಸಿ ಕಾರ್ಯಪ್ರವ್ರತ್ತರಾದ ಸೌದಿ ಪೊಲೀಸರು ಸೌದಿ ಪ್ರೆಜೆಯನ್ನು ಅಪಘಾತ ಮತ್ತು ಕೊಲೆ ಕೇಸ್ ಧಾಖಲಿಸಿ ಜೈಲಿಗಟ್ಟಿದರು. ಆದರೆ ಆ ಸೌದಿ ಪ್ರಜೆಯು ತನ್ನಲ್ಲಿರುವ ಪ್ರಭಾವನ್ನು ಬಳಸುವ ಮೂಲಕ ಜೈಲಿನಿಂದ ತಾತ್ಕಾಲಿಕವಾಗಿ ಬಿಡುಗಡೆಯಾಗುವಲ್ಲಿ ಯಶಸ್ವಿಯಾಗುತ್ತಾನೆ. ಈ ವಿಷಯವನ್ನರಿತ ಐ.ಎಫ್.ಎಫ್. ಪಧಾಧಿಕಾರಿಗಳು ಪಟ್ಟುಬಿಡದೆ ಈ ಕೇಸಿನ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅಬ್ದುಲ್ ಹಮೀದ್ ರವರ ಕೌಟುಂಬಿಕ ಹೀನಾಯ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸಿದರು.

ಇದಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿದ ಮೇಲಾಧಿಕಾರಿಗಳು ಈ ಪ್ರಕರಣದಲ್ಲಿ ಆ ಸೌದಿ ಪ್ರಜೆಯ ರಾಜಕೀಯ ಪ್ರಭಾವ ಮತ್ತು ಒತ್ತಡ ಅತಿಯಾದಾಗ ಈ ಕೇಸನ್ನು ಗವರ್ನರ್ ರವರಿಗೆ ಹಸ್ತಾಂತರಿಸಿದರು. ಮಾತ್ರವಲ್ಲದೆ ಸೌದಿ ಪ್ರೆಜೆಯು ತನ್ನಲ್ಲಿ ನಕಲಿಯಾದ ವಿಮೆಯನ್ನು ಹೊಂದಿದ್ದನೆಂದು ಮನಗಂಡ ಐ.ಫ.ಎಫ್. ಆತನ ಮತ್ತು ಇನ್ಸುರೆನ್ಸ್ ಕಂಪೆನಿಯಾ ಇನ್ನೊಂದು ಪ್ರಕರಣ ಧಾಖಲಿಸಿತ್ತು. ಮಾತ್ರವಲ್ಲದೆ ಮ್ರತ ಶ್ರೀಯುತರ ಕುಟುಂಬಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಐ.ಎಫ್.ಎಫ್. ವತಿಯಿಂದ ಏರ್ಪಡಿಲಾಗಿತ್ತು. ಐ.ಎಫ್.ಎಫ್. ಸತತ ಐದು ವರ್ಷಗಳ ಕಾಲ ನಡೆಸಿದ ಕಠಿನ ಪರಿಶ್ರಮದ ಪಲವಾಗಿ ಈ ಪ್ರಕರಣಕ್ಕೆ ಪರ್ಯಾಯವಾಗಿ ಸರಿಸುಮಾರು ಒಂದೂವರೆ ಲಕ್ಷ ಸೌದಿ ರಿಯಾಲ್ ಅನ್ನು ಪರಿಹಾರ ಧನವಾಗಿ ನೀಡಲು ನ್ಯಾಯಾಲಯ ತೀರ್ಪು ನೀಡಿದೆ.

ಅಪಘತಾಕ್ಕೀಡಾಗಿ ಅತ್ಯಂತ ದಾರುಣವಾಗಿ ಮ್ರತಪಟ್ಟ ತನ್ನ ಪತಿಗೆ ನ್ಯಾಯ ಒದಗಿಸಲು ಮತ್ತು ತನ್ನ ಕುಟುಂಬ ನಿರ್ವಹಿಸಲು ಪರಿಹಾರ ಧನ ಒದಗಿಸಲು ಕಾನೂನು ಹೋರಾಟ ನಡೆಸಿದ ಜನಾಬ್ ಝಾಮಿಲ್ ಹಾಮಿದ್ ( ಖ್ಯಾತ ವಕೀಲರು, ಜಿದ್ದಾ) ಮತ್ತು ಸಾಮಾಜಿಕ ಸಂಘಟನೆಯಾದ ಇಂಡಿಯಾ ಪ್ರೆಟರ್ನಿಟಿ ಪೋರಂ ( ಐ.ಎಫ್.ಎಫ್ ) ಗೆ ಶ್ರೀಮತಿ ಸೆಲಿಕಾ ರವರು ಚಿರಋಣಿಯಾಗಿದ್ದು ಅಭಿನಂದನೆ ಸಲ್ಲಿಸಿದ್ದಾರೆ. ಬಡ ಮತ್ತು ನಿರ್ಗತಿಕ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಶ್ರಮಿಸಿದ ಐ.ಎಫ್.ಎಫ್. ನ ಕಾರ್ಯವನ್ನು ಅನಿವಾಸಿ ನಾಗರೀಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜನಾಬ್ ಅಶ್ರಫ್ ಬಜ್ಪೆ ( ಐ.ಎಫ್.ಎಫ್. ಜಿದ್ದಾ), ಜನಾಬ್ ಮುದಸ್ಸರ್ ಅಕ್ಕರಂಗಡಿ ( ಐ.ಎಫ್.ಎಫ್.ಜಿದ್ದಾ), ಜನಾಬ್ ಮುಸ್ತಫಾ ಪುಣಚ ( ಐ.ಎಫ್.ಎಫ್. ಜಿದ್ದಾ), ಜನಾಬ್ ಅಶ್ರಫ್ ಮಂಜೇಶ್ವರ ( ಐ.ಎಫ್.ಎಫ್. ಜಿದ್ದಾ ), ಜನಾಬ್ ಸೂಫಿ ಸುಳ್ಯ (ಐ.ಎಫ್.ಎಫ್. ಜಿದ್ದಾ) ಸಹಿತ ಅನೇಕರು ಈ ಕೇಸಿನ ಉಸ್ತುವಾರಿ ವಹಿಸಿದ್ದರು.

Write A Comment