ಗಲ್ಫ್

ಬಂಟ್ಸ್ ಬಹರೈನ್ ನವರ “ಬಂಟ್ಸ್ ಸಂಭ್ರಮ ” ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭ : ಬ್ರಹತ್ ಆಹಾರೋತ್ಸವಕ್ಕೆ ವೇದಿಕೆ ಸಜ್ಜು :ಬಾಲಿವುಡ್ಡಿನ ಜನಪ್ರಿಯ ನಟ “ಸಿ . ಐ .ಡಿ ” ಖ್ಯಾತಿಯ ದಯಾನಂದ್ ಶೆಟ್ಟಿ ಯ ವಿಶೇಷ ಮೆರುಗು

Pinterest LinkedIn Tumblr

Chitra Mitra 6aug13 4

ಬಹರೈನ್ ;ಇಲ್ಲಿನ ಅನಿವಾಸಿ ಬಂಟರ ಒಕ್ಕೂಟವಾದ “ಬಂಟ್ಸ್ ಬಹರೈನ್ ” ಇದೇ ಅಕ್ಟೋಬರ್ ತಿಂಗಳ ೫ ರಂದು ಸ್ಥಳೀಯ ಇಂಡಿಯನ್ ಕ್ಲಬ್ಬಿನ ಆಶ್ರಯದಲ್ಲಿ “ಬಂಟ್ಸ್ ಸಂಭ್ರಮ ” ಎಂಬ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ .

ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಬಂಟ ಸಮುದಾಯದವರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸ್ಕೊಂಡು ಅವರ ನೋವು,ನಲಿವುಗಳಿಗೆ ಸ್ಪಂದಿಸುವುದರ ಜೊತೆಗೆ ತಾಯ್ನಾಡಿನಲ್ಲಿನ ತನ್ನ ಸಮುದಾಯದ ಜನರ ಕರೆಗೂ ಸಹಾಯ ಹಸ್ತ ಚಾಚುವ “ಬಂಟ್ಸ್ ಬಹರೈನ್ ” ಸಂಘಟನೆ ಇತ್ತೀಚೆಗಷ್ಟೇ ದಶಮಾನೋತ್ಸವವನ್ನು ಆಚರಿಸಿಕೊಂಡು ಇದೀಗ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಭರತ್ ಶೆಟ್ಟಿ ಯವರ ಸಾರಥ್ಯದಲ್ಲಿ ಹನ್ನೊಂದನೇ ಸಂವತ್ಸರಕ್ಕೆ ಕಾಲಿಟ್ಟಿದೆ.

dayanand(1)

“ಬಂಟ್ಸ್ ಸಂಭ್ರಮ ” ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ “ಸೋನಿ ” ಕಿರು ವಾಹಿನಿಯಲ್ಲಿ ಕಳೆದ ೧೭ ವರುಷಗಳಿಂದ ಯಶಸ್ವಿಯಾಗಿ ಪ್ರಸಾರಗೊಳ್ಳುತಿರುವ “ಸಿ . ಐ .ಡಿ ” ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ “ಸೀನಿಯರ್ ಇನ್ಸಪೆಕ್ಟರ್ ದಯಾ” ಆಗಿ ಮಿಂಚುತ್ತಿರುವ ಬಾಲಿವುಡ್ಡಿನ ದಯಾನಂದ ಶೆಟ್ಟಿ ಯವರು ಆಗಮಿಸಲಿದ್ದಾರೆ . ಇವರು ಇತ್ತೀಚಿಗಷ್ಟೇ ತೆರೆ ಕಂಡ ಯಶಸ್ವೀ ಚಿತ್ರ “ಸಿಂಗಂ -೨ ” ರಲ್ಲೂ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ . ಅಲ್ಲದೆ ಖ್ಯಾತ ಚಿತ್ರ ಕಲಾವಿದ ಚಿತ್ರಮಿತ್ರ ,ಕಲಾವಿದೆ ಅನುರಾಧ ,ಮುಂಬಯಿಯ ಖ್ಯಾತ ಉದ್ಯಮಿ ಶಾಂತರಾಮ್ ಶೆಟ್ಟಿ ,ನಟ ಉದ್ಯಮಿ ಹರೀಶ್ ವಾಸು ಶೆಟ್ಟಿ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .

ಬಂಟ ಸಮುದಾಯದ ಮಹಿಳೆಯರು ಮನೆಯಲ್ಲಿಯೇ ತಯಾರಿಸುವ ಮಾಂಸಹಾರಿ ,ಸಸ್ಯಹಾರಿ ಆಹಾರ ಪದಾರ್ಥಗಳು ಹಾಗು ಸಿಹಿ ತಿಂಡಿಗಳ ಬ್ರಹತ್ ಪ್ರದರ್ಶನ ಹಾಗು ಸ್ಪರ್ಧೆ ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದೆ . ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ವೈವಿಧ್ಯಮವಾದ ನ್ರತ್ಯ ಪ್ರದರ್ಶನ ,ಬಾಲಕ ಬಾಲಕಿಯರ ಫ್ಯಾಷನ್ ಶೋ ,ಹಾಡಿಗೆ ತಕ್ಕಂತೆ ಚಿತ್ರ ಬಿಡುಸುವಿಕೆ ಮಾತ್ರವಲ್ಲದೆ ವಿಶೇಷವಾದ ದಾಂಡಿಯಾ ನ್ರತ್ಯ ಕೂಡ ಆಯೋಜಿಸಲಾಗಿದೆ .

ಕಾರ್ಯಕ್ರಮವು ಸಂಜೆ ೫:೩೦ ಘಂಟೆಗೆ ಸರಿಯಾಗಿ ಪ್ರಾರಂಭವಾಗಲಿದ್ದು ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರಾದ ಭರತ್ ಶೆಟ್ಟಿ ಯವರನ್ನು 00973-39677316 ಮುಖೇನ ಸಂಪರ್ಕಿಸಬಹುದು .

ವರದಿ – ಕಮಲಾಕ್ಷ ಅಮೀನ್

Write A Comment