ಗಲ್ಫ್

ಶತಮಾನೋತ್ಸವದ ಸಂಭ್ರಮದಲ್ಲಿರುವ ಇಂಡಿಯನ್ ಕ್ಲಬ್ಬಿನ “ಶತಮಾನೋತ್ಸವ ಗಡಿ ಗೋಡೆ”ಯ ವಿದ್ಯುಕ್ತ ಉದ್ಘಾಟನೆ; ಶತಮಾನೋತ್ಸವದ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ

Pinterest LinkedIn Tumblr

Behrain indian club_Sept 30_2014_019

ಬಹರಿನ್;ಶತಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ ಪ್ರತಿಷ್ಟಿತ ದಿ ಇಂಡಿಯನ್ ಕ್ಲಬ್ಬಿನ ನೂತನವಾಗಿ ನಿರ್ಮಾಣಗೊಂಡಿರುವ ಗಡಿ ಗಡಿ ಗೋಡೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕೇಂದ್ರ ಸಚಿವ ,ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹಾಗು ಇಲ್ಲಿನ ಮಂತ್ರಿ ಮಂಡಲದ ಸಚಿವರುಗಳು ,ರಾಜ ಮನೆತನದವರು ,ಇಲ್ಲಿನ ಭಾರತೀಯ ರಾಯಭಾರಿ ಡಾ ಮೋಹನ್ ಕುಮಾರ್ ,ಗಡಿ ಗೋಡೆಯನ್ನು ಉಚಿತವಾಗಿ ನಿರ್ಮಿಸಿಕೊಟ್ಟಿರುವ ಅಲ್ ನಮಾಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ ವರ್ಗೀಸ್ ಕುರಿಯನ್ ಮುಂತಾದವರು ಪಾಲ್ಗೊಂಡು ಗಡಿ ಗೋಡೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರಲ್ಲದೆ ನೂರು ದಿನಗಳು ಜರುಗಲಿರುವ ಶತಮಾನೋತ್ಸವದ ವಿಶೇಷ ಸಾಂಸ್ಕ್ರತಿಕ ಹಾಗು ಕ್ರೀಡಾ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಿದರು .

Behrain indian club_Sept 30_2014_001

Behrain indian club_Sept 30_2014_002

Behrain indian club_Sept 30_2014_003

Behrain indian club_Sept 30_2014_004

Behrain indian club_Sept 30_2014_005

Behrain indian club_Sept 30_2014_006

Behrain indian club_Sept 30_2014_007

Behrain indian club_Sept 30_2014_008

Behrain indian club_Sept 30_2014_009

Behrain indian club_Sept 30_2014_010

Behrain indian club_Sept 30_2014_011

Behrain indian club_Sept 30_2014_012

Behrain indian club_Sept 30_2014_013

Behrain indian club_Sept 30_2014_014

Behrain indian club_Sept 30_2014_015

ಕಾರ್ಯಕ್ರಮದ ಪ್ರಾರಂಭದಲ್ಲಿ ಇಂಡಿಯನ್ ಕ್ಲಬ್ಬಿನ ಸಾರಥ್ಯವನ್ನು ವಹಿಸಿಕೊಂಡಿರುವ ಅಧ್ಯಕ್ಷರಾದ ಶ್ರೀ ಆನಂದ್ ರವರು ಇಂಡಿಯನ್ ಸ್ಕೂಲಿನ ವಾದ್ಯ ವ್ರಂದದೊಂದಿಗೆ ಮುಖ್ಯ ದ್ವಾರದಲ್ಲಿ ಎಲ್ಲಾ ಗಣ್ಯರುಗಳನ್ನು ಸ್ವಾಗತಿಸಿ ವೇದಿಕೆಗೆ ಬರಮಾಡಿಕೊಂಡರು . ವಾದ್ಯವ್ರಂದದವರು ಭಾರತದ ಹಾಗು ಬಹರೈನ್ ನ ರಾಷ್ಟ್ರಗೀತೆಗಳನ್ನು ನುಡಿಸಿದ ನಂತರ ಸಭಾ ಕಾರ್ಯಕ್ರಮಪ್ರಾರಂಭಗೊಂಡಿತು . ಈ ಸಂಧರ್ಭದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಮೇಲಿದ್ದ ಗಣ್ಯರುಗಳು ಶತಮಾನೋತ್ಸವವನ್ನು ಆಚರಿಸುತ್ತಿರುವ ಇಂಡಿಯನ್ ಕ್ಲಬ್ಬಿಗೆ ಶುಭ ಹಾರೈಸಿದರು . ಅಧ್ಯಕ್ಷರಾದ ಶ್ರೀ ಆನಂದ್ ಲೋಬೋರವರು ನೂರು ದಿನಗಳ ಶತಮಾನೋತ್ಸವದ ಆಚರಣೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದರು . ವೇದಿಕೆಯ ಮೇಲಿರುವ ಗಣ್ಯರುಗಳನ್ನು ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು .

Behrain indian club_Sept 30_2014_016

Behrain indian club_Sept 30_2014_017

Behrain indian club_Sept 30_2014_018

Behrain indian club_Sept 30_2014_021

Behrain indian club_Sept 30_2014_022

Behrain indian club_Sept 30_2014_023

Behrain indian club_Sept 30_2014_024

Behrain indian club_Sept 30_2014_025

Behrain indian club_Sept 30_2014_026

Behrain indian club_Sept 30_2014_027

Behrain indian club_Sept 30_2014_028

Behrain indian club_Sept 30_2014_029

Behrain indian club_Sept 30_2014_030

ತದನಂತರ ಜರುಗಿದ ಮನೋರಂಜನಾ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ಪಿಟೀಲು ವಾದಕ ಶ್ರೀ ಬಾಲ ಭಾಸ್ಕರ್ ರವರು ತಮ್ಮ ತಂಡದೊಂದಿಗೆ ಸತತ ೨ ಘಂಟೆಗಳ ಕಾಲ ಸಂಗೀತ ಧಾರೆಯನ್ನು ಹರಿಸಿ ನೆರೆದ ಶೋತ್ರಗಳು ಮಂತ್ರ ಮುಗ್ದರಾಗುವಂತೆ ಮಾಡಿದರು
ಚಿತ್ರ -ವರದಿ – ಕಮಲಾಕ್ಷ ಅಮೀನ್

Write A Comment