ಗಲ್ಫ್

ದುಬೈ: ಅ.2ರವರೆಗೆ ಉಚಿತ ಆರೋಗ್ಯ ತಪಾಸಣೆ

Pinterest LinkedIn Tumblr

health

ದುಬೈ, ಸೆ.29: ವಿಶ್ವ ಹೃದಯ ದಿನದ ಅಂಗವಾಗಿ ಸೋಮವಾರ ದುಬೈಯಲ್ಲಿ ‘ಸ್ವಸ್ಥ ಆರೋಗ್ಯ ಅಭಿಯಾನ’ವನ್ನು ಪ್ರಾರಂಭಿಸಲಾಯಿತು. ಜನರಲ್ಲಿ ಆರೋಗ್ಯಕ್ಕೆ ಉಂಟಾಗುವ ತೊಂದರೆಗಳು ಹಾಗೂ ನರಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಅಭಿಯಾನದ ಅಂಗವಾಗಿ ಅಕ್ಟೋಬರ್ 2ರವರೆಗೆ ಉಚಿತ ಪ್ರಯೋಗಾಲಯ ಸೌಲಭ್ಯಗಳಾದ ರಕ್ತ ಶರ್ಕರ, ರಕ್ತದೊತ್ತಡ, ಬಿಎಂಐ, ಧೂಮಪಾನಿಗಳಿಗೆ ಕಾರ್ಬನ್ ಮೋನೋಕ್ಸೈಡ್ ಮೊದಲಾದ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿದೆ.

ದೀರ್ಘಕಾಲಿಕ ಕಾಯಿಲೆಗಳನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯಪೂರ್ಣ ಜೀವನಶೈಲಿಗಳನ್ನು ಅನುಸರಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಅಭಿಯಾನ ಹೆಚ್ಚಿನ ಒತ್ತು ನೀಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಹೃದಯದ ಕಾಯಿಲೆಯು ಸಾವಿನ ಒಂದು ಪ್ರಮುಖ ಕಾರಣವಾಗಿ ಕಂಡುಬಂದಿದೆ.

Write A Comment