ಕನ್ನಡ ವಾರ್ತೆಗಳು

ಲಾಡ್ಜ್ ರೂಮ್‌ನಲ್ಲಿ ಶವ ಪತ್ತೆ : ಆತ್ಮಹತೈ ಶಂಕೆ..!

Pinterest LinkedIn Tumblr

lodge_room_susaid_1

ಮಂಗಳೂರು: ನಗರದ ವಸತಿ ಗೃಹವೊಂದರಲ್ಲಿ ವ್ಯಕ್ತಿಯೊಬ್ಬ ಗಾಜಿನ ತುಂಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತೈಗೈದಿದ್ದು, ಇಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಸುಮಾರು 45 ವಷ೯ ಪ್ರಾಯದ ಶಂಭು ಜಿ.ಎಸ್.ಎನ್ನಲಾಗಿದೆ.

ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ವಸತಿ ಗೃಹದಲ್ಲಿ ಕಳೆದ ಎರಡುದಿನದ ಹಿಂದೆ ದಾವಣಗೆರೆಯ ಬೇಕರಿಯೂಂದರ ವಿಳಾಸ ನೀಡಿ ಕೋಣೆ ಪಡೆದಿರುವ ಈ ವ್ಯಕ್ತಿ ಶುಕ್ರವಾರ ರಾತ್ರಿ ಹೊರಗೆ ಹೋಗಿ ಬಂದ ಮೇಲೆ ಮತ್ತೆ ಹೊರಗೆ ಹೋಗಿರುವುದನ್ನು ಯಾರೂ ನೊಡಲಿಲ್ಲ.
ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಹೋಟೆಲ್ ಮ್ಯಾನೇಜರ್ ಇಂದು ಮಧ್ಯಾಹ್ನ ಪೊಲೀಸರಿಗೆ ದೂರು ನೀಡಿದ್ದಾರೆ.

lodge_room_susaid_5 lodge_room_susaid_2 lodge_room_susaid_3 lodge_room_susaid_4

ನಗರದ ಉತ್ತರ ಠಾಣಾ ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿ ಕೋಣೆಯ ಒಳಗಿನಿಂದ ಚಿಲಕ ಹಾಕಿರುವುದರಿಂದ ವಸತಿ ಗೃಹದ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಈ ವ್ಯಕ್ತಿಯ ಶವ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೆಲ್ನೋಟಕ್ಕೆ ಇದೊಂದು ಕೊಲೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.

ಆದರೆ ಸ್ಥಳಕ್ಕೆ ಆಗಮಿಸಿದ ಬೆರಳಚ್ಚು ತಜ್ಞರು ಕೋಣೆಯನ್ನು ಹಾಗೂ ಶವವನ್ನು ಪರೀಕ್ಷೆ ಮಾಡಿದ ಬಳಿಕ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಖಚಿತ ಪಡಿಸಿದ್ದಾರೆ. ಈ ವ್ಯಕ್ತಿ ತನ್ನ ಕುತ್ತಿಗಯನ್ನು ಕನ್ನಡಿಯ ತುಂಡೊಂದರಿಂದ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರ ಬೇಕೆಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.

ಈ ಬಗ್ಗೆ ನಗರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.