ಕನ್ನಡ ವಾರ್ತೆಗಳು

ಬೆಳಪು- ಸಚಿವ ಸೊರಕೆಯವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Pinterest LinkedIn Tumblr

ಉಡುಪಿ: ಬೆಳಪು ಗ್ರಾಮ ಪಂಚಾಯತ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಂಗಳವಾರ ಚಾಲನೆ ನೀಡಿದರು.

Belapu_Sorake_News

15 ಲಕ್ಷ ರೂ ಮೊತ್ತದ ಪರಿಶಿಷ್ಠ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, 12 ಲಕ್ಷ ರೂ ಮೊತ್ತದ ಅಂಬೇಡ್ಕರ್ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, 10 ಲಕ್ಷ ಮೊತ್ತದ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ಪ.ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ರಸ್ತೆ ಸೇರಿದಂತೆ ಒಟ್ಟು 47 ಲಕ್ಷ ರೂ ಮೊತ್ತದ ಕಾಮಗಾರಿಗೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ , ಉಪಾಧ್ಯಕ್ಷ ಶೋಭಾ ಭಟ್, ಪಂಚಾಯತ್ ನ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.