ಕನ್ನಡ ವಾರ್ತೆಗಳು

1 ಕೋಟಿ ರೂ ವೆಚ್ಚದ ಸಮದ್ರ ತಡೆಗೋಡೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

Pinterest LinkedIn Tumblr

ಉಡುಪಿ: ತೆಂಕ ಎರ್ಮಾಳ್ ಮತ್ತು ಬಡಾ ಎರ್ಮಾಳ್ ಪ್ರದೇಶದಲ್ಲಿ ತಲಾ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದರು.

Minister_Sorake_News (2)

Minister_Sorake_News (1)
ನಂತರ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಲಕ್ಷದ ಮೊತ್ತದ ರಸ್ತೆ ಕಾಂಕ್ರೀಟೀಕರಣ, ಬಡಾ ಉಚ್ಚಿಲದಲ್ಲಿ 10 ಲಕ್ಷ ರೂ ಮೊತ್ತದ ಕಚ್ಛಾರಸ್ತೆ ಡಾಮರೀಕರಣ, ತೆಂಕ ಗ್ರಾ,ಪಂ. ನಲ್ಲಿ 12 ಲಕ್ಷ ಮೊತ್ತದ ರಸ್ತೆ ಅಭಿವೃದ್ಧಿ, 6 ಲಕ್ಷ ಮೊತ್ತದ ಎಲ್ಲೂರು ಪೊಂದಾಡು  ಕಾಲನಿ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ಪೊಂದಾಡು ಎಸ್.ಸಿ. ಕಾಲನಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಸೇರಿದಂತೆ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.39 ಕೋಟಿ ಮೊತ್ತದ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.

ಈ ಸಂದರ್ಭದಲ್ಲಿ ತೆಂಕ ಗ್ರಾ.ಪಂ. ಅಧ್ಯಕ್ಷ ಅರುಣ ಕುಮಾರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರತ್ನ ಕರ್ಕೆರಾ, ಉಪಾಧ್ಯಕ್ಷ ಇಂದಿರಾಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಕೇಶವ , ಶೇಖಬ್ಬಾ ಹಾಗೂ ಪಂಚಾಯತ್ ನ ಸದಸ್ಯರು ಹಾಜರಿದ್ದರು.

ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ , 15 ಲಕ್ಷ ಮೊತ್ತದ ಎಲ್ಲೂರಿನ ಬಂಡಸಾಲೆ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಶಿಲಾನ್ಯಾಸ , 6 ಲಕ್ಷ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

Comments are closed.