ಕನ್ನಡ ವಾರ್ತೆಗಳು

ಉಳ್ಳಾಲ :ಅಕ್ರಮ ಲಾಡ್ಜ್ ಮಾಹಿತಿ ಕೇಳಿದ ಆರ್‌ಟಿ‌ಐ ಕಾರ್ಯಕರ್ತನ ಮೇಲೆ ತಂಡದಿಂದ ಹಲ್ಲೆ

Pinterest LinkedIn Tumblr

Ullala_attach_hamja

ಮಂಗಳೂರು /ಉಳ್ಳಾಲ : ಉಳ್ಳಾಲ ಮೇಲಂಗಡಿಯ ಮನೆಯೊಂದರ ಮಹಡಿಯಲ್ಲೇ ಅಕ್ರಮ ಲಾಡ್ಜ್ ನಿರ್ಮಿಸಿದ್ದು ಕಟ್ಟಡದ ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶಕ್ಕೆ ಬಿಡುವುದರ ವಿರುದ್ಧ ನಗರಸಭೆಯಲ್ಲಿ ಮಾಹಿತಿ ಹಕ್ಕು ಮುಖೇನ ಅಕ್ರಮ ಲಾಡ್ಜ್ ಬಗೆಗಿನ ಮಾಹಿತಿ ಕಳೆ ಹಾಕುತ್ತಿದ್ದ ಯುವಕನಿಗೆ ಲಾಡ್ಜ್ ಮಾಲಕ ಸಹಚರರೊಂದಿಗೆ ಸೇರಿ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಉಳ್ಳಾಲದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಆರ್‌ಟಿ‌ಐ ಕಾರ್ಯಕರ್ತನನ್ನು ಉಳ್ಳಾಲ ಮೇಲಂಗಡಿ ಎರಡನೇ ಗೇಟ್ ಬಳಿ ನಿವಾಸಿ ಹಂಝ ಮಹಮ್ಮದ್(22) ಎನ್ನಲಾಗಿದೆ.

ಉಳ್ಳಾಲ ಮೇಲಂಗಡಿಯಲ್ಲಿ ಮಹಮ್ಮದ್ ಎಂಬವರು ತನ್ನ ಮನೆಯ ಮಹಡಿಯಲ್ಲೇ ಅಕ್ರಮ ಲಾಡ್ಜು ನಿರ್ಮಿಸಿದ್ದು ಒಟ್ಟು 14 ರೂಂಗಳನ್ನು ಬಾಡಿಗೆಗೆ ಕೊಡುತ್ತಿದ್ದು,ಲಾಡ್ಜ್ ತ್ಯಾಜ್ಯವೆಲ್ಲ ಹಂಝರ ಮನೆ ಮಾತ್ರ ಅಲ್ಲದೆ ಸುತ್ತಮುತ್ತಲಿನ ಮನೆಗಳ ಅಂಗಳಕ್ಕೆ ಹರಿಯುತ್ತಿದೆ.ಇದರಿಂದ ರೋಸಿದ ಹಂಝ ಮಹಮ್ಮದ್ ಈ ಅಕ್ರಮ ಲಾಡ್ಜ್‌ಗೆ ಹೇಗಾದರೂ ಪರವಾನಿಗೆ ನೀಡಿದಿರೆಂದು ಉಳ್ಳಾಲ ನಗರಸಭೆಯಲ್ಲಿ ಹಲವು ಬಾರಿ ಮಾಹಿತಿ ಹಕ್ಕಿನಡಿ ವಿವರ ಕೇಳಿದ್ದ.

ಈ ವಿಷಯ ಹೇಗೋ ಗೌಪ್ಯತೆ ಕಳಕೊಂಡು ಲಾಡ್ಜ್ ಮಾಲಕ ಮಹಮ್ಮದ್‌ಗೆ ತಿಳಿದಿದ್ದು,ಹಂಝ ಬುಧವಾರ ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಉಳ್ಳಾಲ ದರ್ಗಾದಲ್ಲಿ ನಮಾಝ್ ಸಲ್ಲಿಸಿ ಹಿಂದಿರುಗುವಾಗ ಅಕ್ರಮ ಲಾಡ್ಜ್ ಹತ್ತಿರ ತಲುಪುತ್ತಿದ್ದಂತೆ ಲಾಡ್ಜ್ ಮಾಲಕ ಮಹಮ್ಮದ್ ತನ್ನ ಸಹಚರರಾದ ಅಬ್ದುಲ್ ರಹಿಮಾನ್,ಯಹ್ಯಾ,ಅನೀಶ್,ಜಾಫರ್,ಸಾಹಿಲ್,ಸಫ್ವಾನ್ ಜತೆ ಸೇರಿ ಹಂಝನ ಎಡಕಣ್ಣಿಗೆ ಖಾರದ ಹುಡಿ ಎರಚಿ ನನ್ನ ಬಗ್ಗೆ ಕಂಪ್ಲೇಟ್ ಕೊಡುತ್ತೀಯಾ ಎಂದು ಅವಾಚ್ಯ ಪದಗಳಿಂದ ನಿಂದಿಸಿ ಎಡ ಕಣ್ಣಿನ ಬಳಿಗೆ ಚಾಕುವಿನಿಂದ ಗೀರಿ,ಸಹಚರರು ಕಲ್ಲು,ರೀಪಿನಿಂದ ಮನಸೋ ಇಚ್ಚೆ ಥಳಿಸಿದ್ದಾರೆ,

ಗಂಭೀರ ಗಾಯಗೊಂಡ ಹಂಝ ಮಹಮ್ಮದ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Comments are closed.