ಕನ್ನಡ ವಾರ್ತೆಗಳು

ನಮ್ಮ ಕುಂದಾಪ್ರ ಪೇಸ್‌ಬುಕ್ ಗ್ರೂಫ್‌ನ ಸಹಮಿಲನ- ಕುಂದಾಪುರದ ಇಬ್ಬರು ಎಸ್.ಎಸ್.ಎಲ್.ಸಿ. ಟಾಪರ್‍ಸ್‌ಗಳಿಗೆ ಸನ್ಮಾನ

Pinterest LinkedIn Tumblr

ವರದಿ,ಚಿತ್ರ- ಯೋಗೀಶ್ ಕುಂಭಾಸಿ
ಕುಂದಾಪುರ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನರಂತೂ ಸೋಶಿಯಲ್ ಮೇಡಿಯಾಗಳಿಗೆ ಮಾರುಹೋಗಿದ್ದಾರೆಂದ್ರೂ ತಪ್ಪಲ್ಲ. ಅದ್ರಲ್ಲೂ ಫೇಸ್‌ಬುಕ್ ಹಾಗೂ ವಾಟ್ಸಾಪ್ ಇವರೆಡು ಜನರ ಗುಡ್ ಫ್ರೆಂಡ್ ಆಗಿಬಿಟ್ಟಿದೆ. ಎಲ್ಲೆಲ್ಲೋ ಇರುವ ಸಂಬಂಧಿಕರು, ಆತ್ಮೀಯರು ಹಾಗೂ ಸ್ನೇಹಿತರನ್ನು ಬೆಸೆಯುವಲ್ಲಿ ಸೋಶಿಯಲ್ ಮೇಡಿಯಾಗಳ ಪಾತ್ರ ದೊಡ್ಡದು. ಫೇಸ್‌ಬುಕ್‌ಲ್ಲಿ ಮಾತ್ರ ಪೋಸ್ಟಿಂಗ್, ಕಮೆಂಟು-ಚಾಟು ಮಾಡೋ ಮಂದಿ ಒಂದೆಡೆ ಸೇರುವ ಮೂಲಕ ಒಂದು ವಿಭಿನ್ನ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ನಡೆಯಿತು.

ಪೇಸ್‌ಬುಕ್‌ನ `ನಮ್ಮ ಕುಂದಾಪ್ರ’ ಅನ್ನೋ ಗ್ರೂಫಿನ ಸದಸ್ಯರು ಬುಧವಾರ ಕುಂದಾಪುರದ ಶರೋನ್ ಹೋಟೇಲಿನ ಮಿನಿ ಹಾಲಿನಲ್ಲಿ ಒಗ್ಗೂಡಿದ ಕ್ಷಣಗಳಿದು.

Namma Kundapra_Facebook_Get together (13) Namma Kundapra_Facebook_Get together (14) Namma Kundapra_Facebook_Get together (2) Namma Kundapra_Facebook_Get together (15) Namma Kundapra_Facebook_Get together (16) Namma Kundapra_Facebook_Get together (1) Namma Kundapra_Facebook_Get together (4) Namma Kundapra_Facebook_Get together (3) Namma Kundapra_Facebook_Get together (7) Namma Kundapra_Facebook_Get together (10) Namma Kundapra_Facebook_Get together (12) Namma Kundapra_Facebook_Get together (8) Namma Kundapra_Facebook_Get together (9) Namma Kundapra_Facebook_Get together (11) Namma Kundapra_Facebook_Get together (6) Namma Kundapra_Facebook_Get together (5)

ಕುಂದಾಪುರದಿಂದ ದೂರ ಇರುವವರಲ್ಲಿ ಊರಭಿಮಾನ, ಭಾಷಾಭಿಮಾನ, ಆಚರ-ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಅಲ್ಲದೇ ಇಲ್ಲಿನ ಕಲೆ ,ಸಂಸ್ಕೃತಿಯ ಬೆಳೆಸುವಿಕೆ ಮತ್ತು ಉಳಿಸುವಿಕೆಯ ಉದ್ದೇಶದಿಂದ 2011ರಲ್ಲಿ ಅಂದರೇ ಸುಮಾರು ಐದು ವರ್ಷಗಳ ಹಿಂದೆ ಮೂಲತಃ ಕುಂದಾಪುರದವರೇ ಆದ ಕಮಲೇಶ್ ಕುಂದಾಪುರ ಅವರು ‘ನಮ್ಮ ಕುಂದಾಪ್ರ’ ಎನ್ನುವ ಹೆಸರಿನಲ್ಲಿ ಪೇಸ್ ಬುಕ್ ಗ್ರೂಫ್ ಕ್ರಿಯೇಟ್ ಮಾಡೀದ್ರು. ಅಂದಿನಿಂದ ಇಂದಿನವರೆಗೂ ನಿರಂತರ ಚಟುವಟಿಕೆಯಲ್ಲಿರೋ ಈ ಗ್ರೂಫಿನ ಸದಸ್ಯರ ಸಂಖ್ಯೆ ಬರೋಬ್ಬರಿ ನಲವತ್ತೆರಡು ಸಾವಿರಕ್ಕೂ ಅಧಿಕವಾಗಿದೆ. ನಮ್ಮ ಕುಂದಾಪ್ರ ಗ್ರೂಫ್‌ನಲ್ಲಿ ನಿತ್ಯವೂ ಹೊಸಹೊಸ ಪೋಸ್ಟ್‌ಗಳನ್ನು ಗ್ರೂಫ್‌ನ ಸದಸ್ಯರು ಹಂಚಿಕೊಳ್ಳುತ್ತಾರೆ. ಬಹುತೇಕವಾಗಿ ದೇವಾಲಯಗಳು ಹಾಗೂ ಹಬ್ಬ-ಜಾತ್ರೆಗಳ ವಿಚಾರ ಇದರಲ್ಲಿ ಬಹಳಷ್ಟು ಕಾಣಸಿಗುತ್ತಿದ್ದು ಸಂಪೂರ್ಣ ವಿವರಗಳನ್ನೊಳಗೊಂಡಿದೆ. ೨೦೧೨ರಲ್ಲಿ ಸಹಮಿಲನ ಕಾರ್ಯಕ್ರಮ ನಡೇದಿದ್ದು ಬರೋಬ್ಬರ್ ನಾಲ್ಕು ವರ್ಷಗಳ ಬಲಿಕ್ ಪುನಃ ಕುಂದಾಪುರದಲ್ಲಿ ಈ ಕಾರ್ಯಕ್ರಮ ಮತ್ತೆ ನಡೆಯಿತು.

ಗ್ರೂಫಿನ ಸದಸ್ಯರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಒಬ್ಬರನ್ನೊಬ್ಬರು ಪರಿಚಯಿಸಿ ಗ್ರೂಫನ್ನು ಇನ್ನಷ್ಟು ಸಕ್ರೀಯಗೊಳಿಸುವ ನಿಟ್ಟಿನಲ್ಲಿ ಸಹಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕುಂದಾಪುರದಲ್ಲಿ ಸತತ ಮೂರನೇ ಬಾರಿಗೆ ಪೇಸ್‌ಬುಕ್ ಮಿತ್ರರು ಹಾಗೂ ನಮ್ಮ ಕುಂದಾಪ್ರ ಸದಸ್ಯರ ಈ ಸಹಮಿಲನ ಕಾರ್ಯಕ್ರಮ ನಡೆಯಿತು. ಖ್ಯಾತ ನ್ಯಾಯವಾದಿ, ಪತ್ರಕರ್ತರು ಆಗಿರುವ ಎ.ಎಸ್.ಎನ್. ಹೆಬ್ಬಾರ್, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ, ನಿವೃತ್ತ ಕೆ.ಇ.ಬಿ. ಇಂಜಿನಿಯರ್ ಪ್ರಕಾಶ್ಚಂದ್ರ ಕುಂದಾಪುರ, ಗಂಗೊಳ್ಳಿ ಟೌನ್ ಸೌಹಾರ್ಧ ಸಹಕಾರಿ ಸಂಘದ ಸಲಹೆಗಾರ ಪುಂಡಲೀಕ ನಾಯಕ್, ಹಾಸ್ಯ ಕಲಾವಿದ ಕೋಡಿ ರಮಾನಂದ್ ಕಾಮತ್ , ಸಮಾಜ ಸೇವಕ ಮಧುಕರ್ ರಾವ್, ನಮ್ಮ ಕುಂದಾಪ್ರ ಫೇಸ್ ಬುಕ್ ಗ್ರೂಫಿನ ಸ್ಥಾಪಕರಾದ ಕಮಲೇಶ್ ಕುಂದಾಪುರ ಹಾಗೂ ಅವರಿಗೆ ಸಹಕರಿಸುತ್ತಿರುವ ಗೆಳೆಯರು ಸೇರಿದಂತೆ ಹಲವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಎಸ್.ಎಸ್.ಎನ್. ಹೆಬ್ಬಾರ್ ಅವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ನಮ್ಮ ಕುಂದಾಪ್ರ ಸಹಮಿಲನ ಕಾರ್ಯಕ್ರಮದಲ್ಲಿ ಪರಸ್ಪರ ಪರಿಚಯ, ಒಂದಷ್ಟು ಚರ್ಚೆಗಳು, ಅಭಿಪ್ರಾಯ ವಿನಿಮಯ ಕಾರ್ಯಕ್ರಮ ನಡೇಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವೆಂಕಟೇಶ್ ಪುರಾಣಿಕ್ ಮತ್ತು ಚೈತ್ರಾ ಶಾನುಭಾಗ್ ಅವರನ್ನು ಸನ್ಮಾನಿಸಲಾಯಿತು. ಮನೆಮನೆಗೂ ತೆರಳಿ ಗಿಡ ನೆಡುವ ಬಗ್ಗೆ ಚಿಂತನೆ ನಡೆಸಿದ್ದಲ್ಲದೇ ಸ್ವಚ್ಚಭಾರತ್ ಯೋಜನೆಗೆ ಇನ್ನಷ್ಟು ಒತ್ತುನೀಡುವ ಬಗ್ಗೆ ಯೋಜನೆ ರೂಪಿಸಿದ್ದು ಸಹಮಿಲನದ ಹೈಲೆಟ್ಸ್. ಉಳಿದಂತೆ ಮಿಮಿಕ್ರಿ, ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ ಮೊದಲಾದವು ಮನೋರಂಜನೆಯನ್ನು ನೀಡಿತ್ತು.ಇಷ್ಟೇ ಅಲ್ಲ. ಮಧ್ಯಾಹ್ನ ಕುಂದಾಪುರ ಶೈಲಿಯ ಸಸ್ಯಾಹಾರಿ ಊಟವು ಆಗಮಿಸಿದವರನ್ನು ತೃಪ್ತಿಪಡಿಸಿತ್ತು.

ನರೇಶ್ ಕೋಟೇಶ್ವರ ಸಂಪೂರ್ಣ ಕಾರ್ಯಕ್ರಮ ನಿರೂಪಿಸಿದ್ರು. ಮನು ಅಂಚನ್ ಕೋಡಿ, ಕಾರ್ತಿಕ್‌ಪ್ರಸಾದ್, ಸುಕೇಶ ಕೋಟೇಶ್ವರ, ಕುಂದಾಪುರ ದೃಷ್ಠಿ ಬ್ಯಾನರ್‍ಸ್ ಸಹೋದರರು, ಇಬ್ರಾಹಿಂ ಗಂಗೊಳ್ಳಿ ಮೊದಲಾದವರು ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿ ಸಹಕರಿಸಿದರು.

ಒಟ್ಟಿನಲ್ಲಿ ಊರಿನ ಅಭಿಮಾನದಿಂದ ಹಾಗೂ ನೆಲ-ಜಲ-ಭಾಷೆ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಗ್ರೂಫ್ ನಿರ್ಮಿಸಿ ನಿಸ್ವಾರ್ಥವಾಗಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಪೇಸ್‌ಬುಕ್ ಗೆಳೆಯರನ್ನು ಒಗ್ಗೂಡಿಸಿದ ನಮ್ಮ ಕುಂದಾಪ್ರ ಗ್ರೂಫ್ ಕಾರ್ಯ ನಿಜಕ್ಕೂ ಗ್ರೇಟ್.

Comments are closed.