ಕೊಪ್ಪಳ,ಮೇ.17: ನಿತ್ಯ ಕುಡಿದು ಮನೆಗೆ ಬರುತ್ತಿದ್ದ ಪತಿಯೋರ್ವ ತನ್ನ ಪತ್ನಿಗೆ ಸ್ನೇಹಿತರೊಂದಿಗೆ ಮಂಚ ಹಂಚಿಕೊ ಎಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ಪತ್ನಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.
ಪತ್ನಿ ಪೀಡಕ ವಿಜಯ ಮಹಾಂತೇಶ್, ಪತ್ನಿ ಶೃತಿಗೆ ಸ್ನೇಹಿತರೊಂದಿಗೆ ಮಂಚ ಹಂಚಿಕೊ ಎಂದು ಕಿರುಕುಳ ನೀಡುತ್ತಿದ್ದಲ್ಲದೇ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಶೃತಿ ಮೂಲತಃ ವಿಜಯಪುರ ಜಿಲ್ಲೆಯ ಕಾರಿಗನೂರ ನಿವಾಸಿಯಾಗಿದ್ದು, ವಿಜಯ ಮಹಾಂತೇಶ ಕೊಪ್ಪಳ ಜಿಲ್ಲೆಯ ಕುಷ್ಟಗಿಯವನಾಗಿದ್ದು, 2014 ರಲ್ಲಿ ವಿಜಯ ಮಹಾಂತೇಶ ಹಾಗೂ ಶೃತಿ ವಿವಾಹವಾಗಿತ್ತು.
ಕಳೆದ ಐದಾರು ತಿಂಗಳಿಂದ ಹೆಂಡತಿಗೆ ಕಿರುಕುಳ ನೀಡುತ್ತಿರೋ ವಿಜಯ ಮಹಾಂತೇಶನ ವಿರುದ್ದ ಕೊಪ್ಪಳ ನಗರ ಠಾಣೆಯಲ್ಲಿ ಶೃತಿ ಪೋಷಕರಿಂದ ದೂರು ದಾಖಲಾಗಿದೆ.

Comments are closed.