ಕನ್ನಡ ವಾರ್ತೆಗಳು

ಲಾರಿ ಚಾಲಕರಿಗೆ ಹಲ್ಲೆ ಆರೋಪ: ಕೋಟ ಪಿ.ಎಸ್.ಐ ಅಮಾನತು ಬೇಡ; ಸುದ್ದಿಗೋಷ್ಟಿಯಲ್ಲಿ ವಿವಿಧ ಸಂಘಟನೆಗಳ ಆಗ್ರಹ

Pinterest LinkedIn Tumblr

ಉಡುಪಿ: ಕೋಟ ಠಾಣಾ ಪೊಲೀಸರು ಲಾರಿ ಚಾಲಕ ಹಾಗೂ ಆತನ ಜೊತೆಗಿದ್ದ ಸಹೋದರನ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಗಾಣಿಗ ಸಮಾಜ ಕೋಟ ಪಿ.ಎಸ್.ಐ ಕಬ್ಬಲ್ ರಾಜ್ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದು ಇದರ ವಿರುದ್ದವಾಗಿ ಶನಿವಾರ ವಿವಿಧ ಸಂಘಟನೆಯ ಮುಖಂಡರು ಪತ್ರಿಕಾಗೋಷ್ಟಿ ನಡೆಸಿ ಕಬ್ಬಲ್ ರಾಜ್ ಅವರನ್ನು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು.

Kota_Preesmeet_Udu[i

ಕುಂದಾಪುರ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯನ್ನು ತೆಕ್ಕಟ್ಟೆ ಎಂಬಲ್ಲಿ ಕೋಟ ಪೋಲಿಸ್ ಠಾಣಾ ಸಿಬ್ಬಂದಿಗಳು ತಡೆಗಟ್ಟಿ ಹಣಕ್ಕಾಗಿ ಪೀಡಿಸಿದ್ದು, ಹಣ ನೀಡದೇ ಇದ್ದ ಲಾರಿ ಚಾಲಕ ಶಿವರಾಜ್ ಗಾಣಿಗ ಹಾಗೂ ನಾಗರಾಜ್ ಗಾಣಿಗರಿಗೆ ಅವಾಚ್ಯ ಶಬ್ಧಗಳಿಂದ ಬೈದುಹಲ್ಲೆ ನಡೆಸಿರುತ್ತಾರೆ. ಕೋಟ ಠಾಣೆಗೆ ಕರೆದೊಯ್ದು ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ಬಟ್ಟೆ ಬಿಚ್ಚಿ ಬೆಂಚಿನ ಮೇಲೆ ಮಲಗಿಸಿ ಮನ ಬಂದಂತೆ ಥಳಿಸಿರುತ್ತಾರೆ ಎಂದು ಎಂದು ಗಾಣಿಗ ಸಮಾಜದ ಯುವ ಸಂಘಟನೆಯ ಅಧ್ಯಕ್ಷ ದಿನೇಶ್ ಗಾಣಿಗ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದರು.

ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಗಾಣಿಗ ಸಮಾಜದ ವಿರುದ್ದ ಇಂದು ವಿವಿಧ ಸಂಘಟನೆಯ ಮುಖಂಡರು ಸುದ್ದಿಗೋಷ್ಟಿಯನ್ನು ನಡೆಸಿ ಕಬ್ಬಲ್ ರಾಜ್ ಅವರನ್ನು ಯಾವುದೇ ಕಾರಣಕ್ಕೆ ವರ್ಗಾವಣೆ ಮಾಡಬಾರದು. ಕೋಟ ಠಾಣೆಗೆ ಎಸ್.ಐ. ಆಗಿ ಬಂದ ಮೇಲೆ ಠಾಣಾವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಕಾನೂನು ಸುವ್ಯವಸ್ಥೆಯೂ ಉತ್ತಮವಾಗಿದೆ. ಇದನ್ನು ಸಹಿಸಲಾಗದ ಕೆಲವರು ಸುಳ್ಳು ಆರೋಪ ಮಾಡಿ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದು ಯಾವುದೇ ಕಾರಣಕ್ಕೂ ಕಬ್ಬಲ್ ರಾಜ್ ಅವರ ವರ್ಗಾವಣೆ ಮಾಡಕೂಡದು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿ.ಪಂ ಸದಸ್ಯ ರಾಘವೇಂದ , ವಸಂತ ಗಿಳಿಯಾರು ಉಪಸ್ಥಿತರಿದ್ದರು.

Write A Comment