ಕನ್ನಡ ವಾರ್ತೆಗಳು

ಉಡುಪಿಯಲ್ಲಿ ಮಳೆಗಾಗಿ ಶಾಸಕ ಪ್ರಮೋದ್ ನೇತೃತ್ವದಲ್ಲಿ ಮಸೀದಿ, ಚರ್ಚ್, ದೇವಸ್ಥಾನದಲ್ಲಿ ಪ್ರಾರ್ಥನೆ

Pinterest LinkedIn Tumblr

ಉಡುಪಿ: ನಗರಕ್ಕೆ ಇನ್ನು 10 ದಿನಕ್ಕಾಗುವಷ್ಟು ಮಾತ್ರ ಕುಡಿಯಲು ನೀರಿದೆ. ವಿವಿದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮಳೆ ಬಾರದಿದ್ದರೆ ಸಂಕಷ್ಟ ಗ್ಯಾರೆಂಟಿ ಎನ್ನುವ ಪರಿಸ್ಥಿತಿ ಬಂದಿದ್ದು ಇಂತಹ ಸಂದರ್ಬದಲ್ಲಿ ಮಳೆಯಾಗಲಿ ಎಂದು ದೇವರಲ್ಲಿ ಮೊರೆ ಹೋಗಿ ಶಾಸಕ ಪ್ರಮೋದ್ ಮದ್ವರಾಜ್ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು.

Udupi_Malegagi_Prarthane (3) Udupi_Malegagi_Prarthane (5) Udupi_Malegagi_Prarthane (1)

ಈ ಬಾರಿಯ ಮುಂಗಾರು ಮಳೆ ಮೇ ತಿಂಗಳ ಅಂತ್ಯಕ್ಕೆ ಬರುತ್ತೆ‌ಅಂತ ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಆದರೆ ಉಡುಪಿ ನಗರಕ್ಕೆ ಇನ್ನು 10 ದಿನಕ್ಕಾಗುವಷ್ಟು ಮಾತ್ರ ನೀರಿನ ಲಭ್ಯತೆ ಇದೆ. ಗ್ರಾಮಾಂತರ ಪ್ರದೇಶದಲ್ಲಿ ನಿರಂತರ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಮಳೆ ಬಾರದಿದ್ದರೆ ನೀರಿನ ಹಾಹಾಕಾರ ಖಂಡಿತ. ಆದ್ದರಿಂದ ಸಕಾಲದಲ್ಲಿ ಮಳೆ ಬರಲಿ, ಹಾಗೂ ಪೂರ್ವ ಮುಂಗಾರು ಮಳೆ ಬಂದು ಕುಡಿಯುವ ನೀರು ಲಭ್ಯವಾಗಲಿ ಎಂದು ಹಾರೈಸಿ ಶಾಸಕ ಪ್ರಮೋದ್ ಮದ್ವರಾಜ್ ನೇತೃತ್ವದಲ್ಲಿ ನಗರಸಭೆಯ ಅದ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚ್, ಮಸೀದಿ, ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

Udupi_Malegagi_Prarthane (2) Udupi_Malegagi_Prarthane (3) Udupi_Malegagi_Prarthane (6)

ಉಡುಪಿಯ ಜಾಮೀಯಾ ಮಸೀದಿಯಲ್ಲಿ ಧರ್ಮಗುರು ಮೌಲಾನಾ ರಶೀದ್ ಅಹ್ಮದ್ ನದ್ವಿ ಮಳೆಗಾಗಿ ದುವಾ ನೆರವೇರಿಸಿದರು. ಬಳಿಕ ಅನಂತೇಶ್ವರ ದೇವಸ್ಥಾನ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಪೂಜೆ ನಡೆಸಿದರು. ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಧರ್ಮಗುರುಗಳಾದ ರೆವರೆಂಡ್ ಪಾಧರ್ ಜೆರಾಲ್ಡ್ ಐಸಾಕ್ ಲೋಬೋ ಅವರು ಪ್ರಾರ್ಥನೆ ನಡೆಸಿಕೊಟ್ಟರು. ಹೀಗೆ ಶಾಸಕರ ನೇತೃತ್ವದಲ್ಲಿ ಸರ್ವ ಧರ್ಮ ಪ್ರಾರ್ಥನೆ ನಡೆಯಿತು.

Write A Comment